Latest News

Happenings & Events

ಶ್ರೀ ಶಿವರಾಮ್ ಹೆಬ್ಬಾರ ರವರ ನಾಮಪತ್ರ ಸಲ್ಲಿಕೆ ಸಮಾವೇಶ!

ಇಂದು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು  ಮುಂಬರುವ ಉಪಚುನಾವಣೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಶಿವರಾಮ್ ಹೆಬ್ಬಾರ ರವರ ನಾಮಪತ್ರ ಸಲ್ಲಿಕೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಮಾನ್ಯ ಸಂಸದರು ಈ ಸಂದರ್ಭದಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸಿ, ಕಾಂಗ್ರೆಸ್ ನ್ನು ಸೋಲಿಸುವಂತೆ ಕರೆನೀಡಿ, ಅಭ್ಯರ್ಥಿಯಾದ ಶಿವರಾಮ ಹೆಬ್ಬಾರರಿಗೆ ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ನಳಿನ್ ಕುಮಾರ ಕಟೀಲ್, ರಾಜ್ಯಾಧ್ಯಕ್ಷರು, ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ,ಬಂದರು,ಒಳನಾಡು ಜಲ ಸಾರಿಗೆ ಸಚಿವರು, ಶ್ರೀ ಸುನಿಲ್ ನಾಯ್ಕ್, ಶಾಸಕರು - ಭಟ್ಕಳ, ಶ್ರೀ ದಿನಕರ ಶೆಟ್ಟಿ, ಶಾಸಕರು - ಕುಮಟಾ, ಶ್ರೀ ಹರೀಶ್ ಪೂಂಜಾ, ಶಾಸಕರು - ಬೆಳ್ತಂಗಡಿ, ಶ್ರೀ ಕುಮಾರ ಬಂಗಾರಪ್ಪ, ಶಾಸಕರು - ಸೊರಬ, ಶ್ರೀ ಸುನಿಲ್ ಹೆಗಡೆ - ಮಾಜಿ ಶಾಸಕರು - ಹಳಿಯಾಳ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ


Related posts