Latest News

Happenings & Events

ಜಿಲ್ಲೆಯ ಎಲ್ಲ ಜನ ಪ್ರತಿನಿಧಿ ಹಾಗೂ ಮುಖಂಡರೊಂದಿಗೆ ಸೇರಿ ರಾಜ್ಯದ ಮುಖ್ಯಮಂತ್ರಿ ಮಾನ್ಯ ಯಡಿಯೂರಪ್ಪರೊಂದಿಗೆ ಚರ್ಚೆ

ಇತ್ತೀಚಿಗೆ, ಉತ್ತರ ಕನ್ನಡ ಜಿಲ್ಲಾಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ ಹೆಗಡೆಯವರ ನೇತ್ರತ್ವದಲ್ಲಿ ಜಿಲ್ಲೆಯ ಎಲ್ಲ ಜನ ಪ್ರತಿನಿಧಿ ಹಾಗೂ ಮುಖಂಡರೊಂದಿಗೆ ಸೇರಿ ರಾಜ್ಯದ ಮುಖ್ಯಮಂತ್ರಿ ಮಾನ್ಯ ಯಡಿಯೂರಪ್ಪರೊಂದಿಗೆ ಸುಧೀರ್ಘ ಚರ್ಚೆ ನಡೆಸಲಾಯ್ತು. ನೆನೆಗುದಿಗೆ ಬಿದ್ದಿರುವಂತಹ ಅನೇಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಮತ್ತು ಪ್ರಸ್ತುತ ತುರ್ತು ಅಗತ್ಯಗಳ ಸಂಬಂಧಿಸಿದಂತೆ ಈ ಪ್ರತಿನಿಧಿಗಳ ತಂಡ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ವಿಸ್ತೃತವಾಗಿ ವರದಿ ನೀಡಿ ಕೆಲವು ಪರಿಹಾರಗಳನ್ನು ಸಹ ಪ್ರಸ್ತುತಪಡಿಸಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಅಭಿವೃದ್ಧಿಗೆ ಹಸಿರು ಶುಭ ಸೂಚನೆ ನೀಡಿದರು.

ಈ ಕೆಳಕಂಡಂತ ವಿಷಯಗಳ ಬಗ್ಗೆ ಚರ್ಚೆ ನಡೆಯಿತು-

೧. ಉತ್ತರ ಕನ್ನಡ ಕ್ಷೇತ್ರದ ಪ್ರವಾಸೋದ್ಯಮದ ಬೆಳವಣಿಗೆಗೆ ಉತ್ತೇಜಿಸಲು PPP Model ಮೂಲಕ ನೂತನ ಪ್ರವಾಸೋದ್ಯಮ ಯೋಜನೆಗಳನ್ನು ಕೈಗೆತ್ತಿಗೊಳ್ಳಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ದಿಕ್ಕಿನಲ್ಲಿ ಹಲವು ಯೋಜನೆಗಳು ಸರ್ಕಾರ-ಖಾಸಗಿ ಜಂಟಿ ಪಾಲ್ಗೊಳ್ಳುವಿಕೆಯಲ್ಲಿ ಜಾರಿಗೆ ಬಂದು, ಜಿಲ್ಲೆಗೆ ಹೊಸ ಆರ್ಥಿಕ ಹಾಗೂ ಸಂಪನ್ಮೂಲಗಳ ಆಯಾಮಗಳು ತೆರೆದುಕೊಳ್ಳಲಿದೆ. ಸುಸ್ಥಿರ ಪ್ರವಾಸೋದ್ಯಮ, ಪರಿಸರ ಪೂರಕ, ಸಾಂಸ್ಕೃತಿಕ ಮೌಲ್ಯವನ್ನು ಹಿರಿಮೆಗೊಳಿಸುವ ಮತ್ತು ನೂತನ ತಂತ್ರಜ್ಞಾನಗಳ ಬಳಕೆಯನ್ನು ಈ PPP Model ಅಡಕಗೊಂಡಿರುತ್ತದೆ.

೨. ಉತ್ತರ ಕನ್ನಡ ಕ್ಷೇತ್ರದಲ್ಲಿ ಸಮುದಾಯದ ಪರವಾಗಿ ಶ್ರಮಿಸುತ್ತಿರುವ ಸಿದ್ಧಾಪುರದ ನಾಮಧಾರಿ ಸಮಾಜದ ಶ್ರೇಯೋಭಿವೃದ್ಧಿಗೆ ಅನುಕೂಲವೊದಗಿಸಲು ಸುಮಾರು ₹ ೧ ಕೋಟಿ ವಿಶೇಷ ಅನುದಾನ ನೀಡಲು ಮಾನ್ಯ ಮುಖ್ಯಮಂತ್ರಿಗಳು ಒಪ್ಪಿರುತ್ತಾರೆ. ಇದು ತಾಲೂಕಿನ ನಾಮಧಾರಿ ಸಮಾಜದ ಒಟ್ಟಾರೆ ಸಮುದಾಯ ಚಟುವಟಿಕೆಗಳಿಗೆ ಬಲ ನೀಡುತ್ತದೆ.

೩. ಇನ್ನು ಸಿದ್ಧಾಪುರ-ತಾಳಗುಪ್ಪ ರೈಲು ಮಾರ್ಗ ವಿಸ್ತರಣೆ ನೆನೆಗುದಿಗೆ ಬಿದ್ದಿದ್ದು ಸುಮಾರು ಸಮಯವಾಯ್ತು. ಇದಕ್ಕೆ ಸಂಬಂಧಿಸಿದಂತೆ ಯೋಜನೆಯನ್ನು ಕಾರ್ಯಗತಗೊಳಿಸಲು ರಾಜಕೀಯ ಇಚ್ಚಾ-ಶಕ್ತಿಯ ಅಗತ್ಯತೆ ಇದ್ದು, ಮಾನ್ಯ ಮುಖ್ಯಮಂತ್ರಿಗಳು ಈ ಯೋಜನಾ-ವೆಚ್ಚದ ಶೇ.೫೦ರಷ್ಟು ಭರಿಸಲು ಒಪ್ಪಿಗೆ ಸೂಚಿಸಿದರು. ಇನ್ನು ಕೇಂದ್ರದ ಪಾಲುದಾರಿಕೆಯೊಂದಿಗೆ ಈ ಕೂಡಲೇ ಯೋಜನೆಯ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

೪. ರಾಜ್ಯದ ಬಂದರುಗಳ ಅಭಿವೃದ್ಧಿಗೊಳಿಸಲು, ಸಾಗರೋತ್ತರ ಸರಕು ಸಾಗಣೆಯ ಆರ್ಥಿಕ ಸ್ವರೂಪ ಹೆಚ್ಚಿಸಲು, ವಾಣಿಜ್ಯ ಚಟುವಟಿಕೆಗಳನ್ನು ಸುಧಾರಿಸಲು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಕರ್ನಾಟಕ ಕಡಲ ಮಂಡಳಿ (Karnataka Maritime Board) ರಚಿಸಿರುವುದು ಸರಿಯಷ್ಟೆ. ಆದರೆ ಅದರ ಚಟುವಟಿಕೆಗಳು ಇನ್ನು ಪ್ರಾರಂಭಗೊಂಡಿಲ್ಲ. ಹಾಗಾಗಿ ಅದರ ಕಾರ್ಯ ಚಟುವಟಿಕೆಗಳನ್ನು ಶೀಘ್ರವಾಗಿ ಕೈಗೆತ್ತಿಗೊಳ್ಳಲು ಮುಖ್ಯಮಂತ್ರಿಗಳನ್ನು ಆಗ್ರಹಿಸಲಾಯ್ತು. ಈ ಮಂಡಳಿ ಕಾರ್ಯಾರಂಭ ಮಾಡುವ ಮೂಲಕ, ರಾಜ್ಯದ ಸಮುದ್ರ ವ್ಯಾಪಾರೋದ್ಯಮ ಇನ್ನಷ್ಟು ಉಜ್ವಲಗೊಳ್ಳಲಿದೆ ಎಂದು ಸಭೆ ಅಭಿಪ್ರಾಯಪಟ್ಟಿತು. ಮುಖ್ಯಮಂತ್ರಿಗಳು ಕೂಡಲೇ ಸ್ಪಂದಿಸಿ ಮಂಡಳಿಯ ಕಾರ್ಯಸೂಚಿ ಹಾಗು ಅದರ ರೂಪರೇಷಗಳನ್ನು ಸಿದ್ದಪಡಿಸಿ ಅವರ ನೇತ್ರತ್ವದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.

೫. ೨೦೧೮ರಲ್ಲಿ ಹೊನ್ನಾವರದ ಪರೇಶ್ ಮೇಸ್ತ ಕೊಲೆಯಾದ ಹಿನ್ನಲೆಯಲ್ಲಿ, ಅಂದಿನಗಳಲ್ಲಿ ಪ್ರತಿಭಟನೆ ನಡೆಸಿದ ಹಲವು ಮುಗ್ದ-ಅಮಾಯಕರ ಮೇಲೆ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಆಡಳಿತ ಹತ್ತು-ಹಲವು ಅಪರಾಧ ಪ್ರಕರಣಗಳನ್ನು ದಾಖಲಿಸಿತ್ತು. ಈ ಎಲ್ಲ ಪ್ರಕರಣಗಳು ಕೇವಲ ರಾಜಕೀಯ ಪ್ರೇರಿತವಾಗಿದ್ದು, ಅವುಗಳನ್ನೆಲ್ಲ ಹಿಂತೆಗದುಕೊಳ್ಳುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ.

ಈ ಮೇಲ್ಕಂಡ ಎಲ್ಲ ವಿಷಯಗಳ ಬಗ್ಗೆ ಸಂಬಂದಿಸಿದ ಖಾತೆಯ ಸಚಿವರು ಬಾಗವಹಿಸಿ ಕೂಡಲೇ ಕಾರ್ಯೋನ್ಮುಕರಾಗುವ ಬಗ್ಗೆ, ಸಿದ್ಧತೆಯನ್ನು ಸಹ ನಡೆಸಿದ್ದಾರೆ.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts