Latest News

Happenings & Events

ಯಶವಂತಪುರ ಕಾರವಾರ ಎಕ್ಸ್ ಪ್ರೆಸ್ ರೈಲಿಗೆ ಹೊನ್ನಾವರದಲ್ಲಿ ನಿಲುಗಡೆ

ಯಶವಂತಪುರ ಕಾರವಾರ  ಎಕ್ಸ್ ಪ್ರೆಸ್  ರೈಲಿಗೆ ಹೊನ್ನಾವರದಲ್ಲಿ ನಿಲುಗಡೆ

ಬೆಂಗಳೂರಿನಿಂದ ಉತ್ತರಕನ್ನಡ ಜಿಲ್ಲೆಗೆ ಪ್ರಯಾಣಿಸುವ ಜನರ ಬಹುಕಾಲದ ಬೇಡಿಕೆಯಾಗಿದ್ದ, ಉತ್ತರಕನ್ನಡ ಜಿಲ್ಲೆಗೆಂದೇ ಮೀಸಲಾದ ವಿಶೇಷ ರೈಲನ್ನು ಸಂಸದ ಶ್ರೀ ಅನಂತ್ ಕುಮಾರ್ ಹೆಗಡೆಯವರ ಮನವಿಗೆ ಸ್ಪಂದಿಸಿ ಕೇಂದ್ರ ರೈಲ್ವೆ ಮಂತ್ರಾಲಯ ಅನುಮೋದಿಸಿತ್ತು.ಯಶವಂತಪುರ-ಕಾರವಾರ-ಯಶವಂತಪುರ ಡೈಲೀ ಎಕ್ಸ್ ಪ್ರೆಸ್ ( YPR- KAWR-YPR Daily Express)  ಈ ವಿಶೇಷ ರೈಲು (Train Number- 16595/16596) ಎರಡು ತಿಂಗಳ ಹಿಂದೆ ಅಂದರೆ ಮಾರ್ಚ್ 8 ನೇ ತಾರೀಕಿನಿಂದ ತನ್ನ ಸೇವೆ ಪ್ರಾರಂಭಿಸಿತ್ತು. 

ಉತ್ತರಕನ್ನಡ ಜಿಲ್ಲೆ ಮತ್ತು ಬೆಂಗಳೂರಿನ ನಡುವೆ ಕ್ಷಿಪ್ರ ಪ್ರಯಾಣಕ್ಕಾಗಿ ಈ ರೈಲು ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಗಳಿಗೆ ಹೋಗದೆಯೇ ಪಡೀಲ್ ಬೈ ಪಾಸ್ ಮೂಲಕ ಸಂಚರಿಸುತ್ತಿತ್ತು, ಮತ್ತು ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯ ಆಗುತ್ತಿತ್ತು. 

ಆದರೆ ಈ ರೈಲಿಗೆ ಹೊನ್ನಾವರ ರೈಲು ನಿಲ್ದಾಣದಲ್ಲಿ ನಿಲುಗಡೆ ಇಲ್ಲದೇ ಇದ್ದುದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು. ಹೊನ್ನಾವರದಲ್ಲಿ ಈ ರೈಲಿಗೆ ನಿಲುಗಡೆ ಒದಗಿಸಬೇಕೆಂದು ಸಂಸದ ಶ್ರೀ ಅನಂತಕುಮಾರ ಹೆಗಡೆಯವರು ಕೊಂಕಣ ರೈಲ್ವೆ ಕಾರ್ಪೊರೇಷನ್ ಗೆ ಪತ್ರ ಮುಖೇನ ವಿನಂತಿಸಿದ್ದರು. ಸಂಸದರ ಮನವಿಗೆ ತಕ್ಷಣ ಸ್ಪಂದಿಸಿದ  ಕೊಂಕಣ ರೈಲ್ವೆ ಕಾರ್ಪೊರೇಷನ್ ನ  ಚೇರ್ಮ್ಯಾನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂಜಯ್ ಗುಪ್ತಾ ಯಶವಂತಪುರ-ಕಾರವಾರ-ಯಶವಂತಪುರ ಡೈಲೀ ಎಕ್ಸ್ ಪ್ರೆಸ್ ರೈಲಿಗೆ ಹೊನ್ನಾವರದಲ್ಲಿ ನಿಲುಗಡೆ ಒದಗಿಸಿದ್ದಾರೆ. ಈ ಮೂಲಕ ಬೆಂಗಳೂರು ಮತ್ತು ಉತ್ತರ ಕನ್ನಡದ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆಯ ನಿವಾರಣೆ ಆಗಿದೆ.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts