Latest News

Happenings & Events

ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ದೂರವಾಣಿ ಪರಿಶೀಲನಾ ಸಭೆಯನ್ನು ನಡೆಸಿದರು

ಗುರುವಾರದಂದು ಮಾನ್ಯ ಸಂಸದರು ಕಾರವಾರದ ಜಿಲ್ಲಾಧಿಕಾರಗಳ ಕಚೇರಿಯಲ್ಲಿ ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ದೂರವಾಣಿ  ಪರಿಶೀಲನಾ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಉಚಿತ ಅಂತರ್ಜಾಲ ಸೇವೆಯನ್ನು ಸಮರ್ಪಕವಾಗಿ ಒದಗಿಸದಿರುವುದಕ್ಕೆ ಅಧಿಕಾರಿಗಳನ್ನು ಹಾಗೂ ವೈ-ಫೈ ಚೌಪಾಲ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಿ.ಎಸ್.ನ್.ಎಲ್, ಸಿ.ಎಸ್.ಸಿ, ಬಿ.ಬಿ.ಎನ್.ಎಲ್ ಹಾಗೂ ವೈ-ಫೈ ಚೌಪಾಲ್ ಸಿಬ್ಬಂದಿಗಳ ನಡುವೆ ಸೂಕ್ತ ಸಂವಹನದ ಕೊರತೆಯಿಂದಾಗಿ ಜನಸಾಮಾನ್ಯರು ಪರದಾಡುವಂತಾಗಿದೆ.

ಗ್ರಾಮ ಪಂಚಾಯತಗಳಲ್ಲಿ ಸರಿಯಾದ ಅಂತರ್ಜಾಲ ಸೇವೆ ಇರದೇ ಪಡಿತರ ವಿತರಣೆ, ಪಹಣಿ ಪತ್ರಿಕೆ ವಿತರಣೆ ಹಾಗೂ ಮುಂತಾದ ಸೇವೆಗಳನ್ನು ಒದಗಿಸುವಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಬಡವರಿಗೆ ಪಡಿತರವು ಸಕಾಲಕ್ಕೆ ದೊರೆಯದೇ ತೀವ್ರ ಸಂಕಷ್ಟಕ್ಕೆ ಸಿಲುಕಿರುತ್ತಾರೆ ಎಂದು ತುಂಬಾ  ಖಾರವಾಗಿ  ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಬಿ.ಎಸ್.ನ್.ಎಲ್, ಸಿ.ಎಸ್.ಸಿ, ಬಿ.ಬಿ.ಎನ್.ಎಲ್ ಹಾಗೂ ವೈ-ಫೈ ಚೌಪಾಲ್ ಇವರುಗಳು ಸಮಾಲೋಚಿಸಿ ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಪರಿಹಾರ ಕಂಡಿಕೊಳ್ಳಬೇಕು ಎಂದು ಮಾನ್ಯ ಸಂಸದರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಉತ್ತರ ಕನ್ನಡ ಜಿಲ್ಲೆಯಿಂದ ಬಿ.ಎಸ್.ಎನ್.ಎಲ್  ರವರಿಗೆ ಅತ್ಯಧಿಕ ಆದಾಯ ಬರುತ್ತಿದ್ದರೂ ಸೇವೆ ಮಾತ್ರ ಬಹಳ ಕಳಪೆಯಾಗಿದೆ, ಇದು ಹೀಗೆ ಮುಂದುವರೆದರೆ ಜಿಲ್ಲೆಯ ಜನರು ಬಿ.ಎಸ್.ಎನ್.ಎಲ್ ದಿಂದ ವಿಮುಖರಾಗುತ್ತಾರೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಒಂದು  ಹಂತದಲ್ಲಿ  ಅಧಿಕಾರಿಗಳ  ಬೇಜವಾಬ್ದಾರಿ  ವರದಿಗಳಿಂದ  ಆಕ್ರೋಶಗೊಂಡ  ಸಂಸದರು  ಕೆಲಸ ಆಗುವವರೆಗೆ  ಸ್ಥಳದಲ್ಲಿಯೇ  ಧರಣಿ  ಕುಳಿತುಕೊಳ್ಳುವುದಾಗಿ  ತಿಳಿಸಿದ್ದು ನಂತರದಲ್ಲಿ, ಬಿ.ಎಸ್.ಎನ್.ಎಲ್  ಹಿರಿಯ ಅಧಿಕಾರಿಗಳೊಂದಿಗೆ  ದೂರವಾಣಿ  ಮುಖಾಂತರ  ತಮ್ಮ  ಆಕ್ರೋಶ  ವ್ಯಕ್ತ  ಪಡಿಸಿದ  ಸಂಸದರು, ಇನ್ನೆರಡು ದಿನಗಳಲ್ಲಿ ಗಡುವನ್ನು ನೀಡಿದ್ದು, ಜೂನ್ ೨೨ ರಂದು ಉಳಿದೆಲ್ಲ ಹಿರಿಯ ಅಧಿಕಾರಿಗಳೊಂದಿಗೆ  ಮತ್ತೊಮ್ಮೆ ಸಭೆ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾಧಿಕರಿಗಳಾದ ಶ್ರೀ ಕೆ.ಹರೀಶಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಆರ್.ರೋಷನ್, ಬಿ.ಎಸ್.ಎನ್.ಎಲ್. ಪಿ.ಜಿ.ಎಂ ಶ್ರೀ ಜಿ.ಆರ್.ರವಿ ಮುಂತಾದವರು ಸಭೆಯಲ್ಲಿ ಹಾಜರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ 

 

Related posts