Latest News

Happenings & Events

ಭಟ್ಕಳ - ಹೊನ್ನಾವರ ವಿಧಾನಸಭಾ ಕ್ಷೇತ್ರದಡಿಯಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ

ನೆನ್ನೆಯ ದಿನ ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ - ೩ ರ ಭಟ್ಕಳ - ಹೊನ್ನಾವರ ವಿಧಾನಸಭಾ ಕ್ಷೇತ್ರದಡಿಯಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಾನ್ಯ ಸಂಸದರು, ಈ ಕೆಳಕಂಡ ಕಾಮಗಾರಿಗಳಿಗೆ ಚಾಲನೆ ನೀಡಿದರು -

೧. ಪ್ಯಾಕೇಜ್  ಸಂಖ್ಯೆ : KN ೨೭ - ೧೮ ರ ಭಟ್ಕಳ ತಾಲೂಕಿನ ಮುರ್ಡೇಶ್ವರ ಹರಿಕಂತ್ರಕೇರಿ ಯಿಂದ  NH - ೬೬, ನೀರಗದ್ದೆ ಕ್ರಾಸ್, ಎಡಬದ್ರು ಮುರಗೋಳಿ ಕಾಳಿಕಾ ದೇವಸ್ಥಾನ  ವಾಯಾ ತೂದಳ್ಳಿ ರಸ್ತೆ ಸುಧಾರಣೆ  ಉದ್ದ - ೬.೭೮ ಕಿಮೀ ಅಂದಾಜು ಮೊತ್ತ  - ರೂ ೫೯೫.೧೨ ಲಕ್ಷ.

೨.ಪ್ಯಾಕೇಜ್  ಸಂಖ್ಯೆ :  KN  ೨೭ - ೧೮ ರ ಭಟ್ಕಳ ತಾಲೂಕಿನ  ಸಾಗರ ಎಸ್,ಎಚ್  ಮುರಕೋಡಿಯಿಂದ ಹುಡೀಲ್ ಪ್ರಾಥಮಿಕ ಶಾಲೆ ವಾಯಾ ಹುಡೀಲ್ , ಗಂದಲಗೀ, ಮುರ್ಕೋಡಿ, ಮರಾಟಿಕೇರಿ ರಸ್ತೆ ಸುಧಾರಣೆ ಉದ್ದ - ೧೧.೦೯ ಕಿ ಮೀ ಅಂದಾಜು ಮೊತ್ತ - ರೂ ೭೭೮.೫೭ ಲಕ್ಷ.

೩ . ಪ್ಯಾಕೇಜ್  ಸಂಖ್ಯೆ : KN ೨೭ - 17 ರ ಹೊನ್ನಾವರ  ತಾಲೂಕಿನ ಏನ್ ಎಚ್ -೨೦೬  ದಿಂದ ಕೆಂಬಾಲ್ ಹಳ್ಳಿಗಟ್ಟೆ ರಸ್ತೆ ಸುಧಾರಣೆ ಉದ್ದ  - ೬.೦೭ ಕಿಮೀ ಅಂದಾಜು ಮೊತ್ತ - ರೂ ೫೪೩.೦೫ ಲಕ್ಷಗಳು 

೪.ಪ್ಯಾಕೇಜ್  ಸಂಖ್ಯೆ :  ಕಂ ೨೭ - ೧೭ ರ ಹೊನ್ನಾವರ ತಾಲೂಕಿನ ಎಂ.ಡಿ.ಆರ್ ಬಸ್ತಿ ಯಿಂದ ಹೆಸಿಗೆ ವಾಯಾ ನಿರಗಾಯಿ, ಜಿನಬೈಲ್, ಬೆಟ್ಟನಕೇರಿ, ಕುಳಗಾರ್, ಹೆಗ್ಗಾರ್ ರಸ್ತೆ ಸುಧಾರಣೆ ಉದ್ದ - ೭.೩೦ ಕಿಮೀ ಅಂದಾಜು ಮೊತ್ತ  - ೬೦೮.೪೨ ಲಕ್ಷಗಳು 

ಶ್ರೀ ಶಾಂತರಾಮ್ ಸಿದ್ದಿ, ಮಾನ್ಯ ವಿಧಾನ ಪರಿಷತ್ ಸದಸ್ಯರು, ಶ್ರೀ ವೆಂಕಟೇಶ್ ನಾಯ್ಕ್, ಮಾನ್ಯ ಜಿಲ್ಲಾಧ್ಯಕ್ಷರು -ಬಿಜೆಪಿ, ಶ್ರೀ ಸುನಿಲ ನಾಯ್ಕ್, ಮಾನ್ಯ ಶಾಸಕರು - ಭಟ್ಕಳ, ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀ ಸುಬ್ಬರಾಯ್ ದೇವಾಡಿಗ ಮುಖಂಡರು ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts

Last, but not least!