Latest News

Happenings & Events

ಗೊಡ್ಡು ಜೀವ ಬೆದರಿಕೆಗೆ ಜಗ್ಗುವವನಲ್ಲ; ಬೊಗಳುವ ನಾಯಿಗಳಿಗೆ ಬಗ್ಗುವವನಲ್ಲ...

ಗೊಡ್ಡು ಜೀವ ಬೆದರಿಕೆಗೆ ಜಗ್ಗುವವನಲ್ಲ; ಬೊಗಳುವ ನಾಯಿಗಳಿಗೆ ಬಗ್ಗುವವನಲ್ಲ...

ಇದು ಎಷ್ಟನೆಯದೆಂದು ಲೆಕ್ಕವಿಟ್ಟಿಲ್ಲ, ಹಾಗೂ ಇಂತದನ್ನೆಲ್ಲಾ ಲೆಕ್ಕಕ್ಕೂ ತೆಗೆದುಕೊಂಡಿಲ್ಲ ನಾನು.  ಮೊನ್ನೆಯ ರಾತ್ರಿ ಸುಮಾರು ಹನ್ನೆರಡೂವರೆ ಹೊತ್ತಿಗೆ ನನ್ನ ಮನೆಯ ಲ್ಯಾಂಡ್ ಲೈನ್ ಫೋನಿಗೆ ಕರೆಯೊಂದು ಬಂದಿತ್ತು.  ಆ ಕಡೆಯಿಂದ ಮಾತಾಡುತ್ತಿದ್ದ ವ್ಯಕ್ತಿ ಹಿಂದಿಯೂ ಅಲ್ಲದ ಉರ್ದುವೂ ಅಲ್ಲದ ಕಲಬೆರಕೆಯ ಭಾಷೆಯಲ್ಲಿ ಮಾತಾಡುತ್ತಿದ್ದ... 

"ನಿನ್ನನ್ನು ಜೀವ ಸಹಿತ ಉಳಿಸಲ್ಲ... ನಿನ್ನನ್ನು ಮುಗಿಸಿಬಿಡುತ್ತೇನೆ... ನಿನ್ನ ಭದ್ರತಾ ಸಿಬ್ಬಂದಿಗಳನ್ನೂ ಮುಗಿಸುತ್ತೇವೆ ... ಪೊಲೀಸ್ ಭದ್ರತೆಯಲ್ಲಿ ಎಷ್ಟು ದಿನ ತಿರುಗಾಡುತ್ತೀಯೋ ಅಂತ ನೋಡುತ್ತೇವೆ " 

ಅನ್ನೋ ರೀತಿಯ ಅರ್ಥ ಬರುವ ಬರುವ ಮಾತುಗಳ ಬೆದರಿಕೆಯ ಜೊತೆಗೇ ನನ್ನ ಹಿಂದುತ್ವವಾದವನ್ನು ಟೀಕಿಸುವ, ಸಂಘಪರಿವಾರವನ್ನು ನಿಂದಿಸುವ ಮಾತುಗಳೂ, ಪೊಲೀಸ್ ಇಲಾಖೆಯನ್ನು ಹೀಯಾಳಿಸುವ ಮಾತುಗಳೂ ಸೇರಿದ್ದವು.  ಕಲಬೆರಕೆಯ ಭಾಷೆಯಲ್ಲಿ ಮಾತಾಡುವ ಆತ ಕೂಡಾ ಬೆರಕೆಯೇ ಎಂಬುದು ನನಗೆ ಖಾತರಿಯಾಗಿತ್ತು.  ಇದರ ಜೊತೆಗೇ ಈ ಕರೆ ಬಂದದ್ದು ವಿದೇಶದಿಂದ ಮತ್ತು ಆ ಕರೆ ಮಾಡಿದ ವ್ಯಕ್ತಿ ಅಂತರ್ಜಾಲದ ಮೂಲಕ ಕರೆ ಮಾಡುತ್ತಿದ್ದ.  ಇದೆ ನಂಬರಿನಿಂದ (0022330000) ಎರಡು ತಿಂಗಳ ಹಿಂದೆ ಕೂಡ ಇದೇ ರೀತಿಯ ಬೆದರಿಕೆ ಕರೆ ನನಗೆ ಬಂದಿತ್ತು.  ಇಂತ ಗೊಡ್ಡು ಜೀವ ಬೆದರಿಕೆಯ ಕರೆಗಳು ಕಳೆದ ಹಲವಾರು ದಶಕಗಳಿಂದಲೂ ನನಗೆ ಬರುತ್ತಲಿವೆ..!!  ನಾನು ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುವ ಮೊದಲೇ ನನಗೆ ಈ ರೀತಿಯ ಬೆದರಿಕೆ ಶುರುವಾಗಿತ್ತು.  ಆದರೆ ನಾನ್ಯಾವತ್ತೂ ಇದಕ್ಕೆಲ್ಲ ಸೊಪ್ಪು ಹಾಕಿದವನೇ ಅಲ್ಲ..!!  ಅದರಲ್ಲೂ  ಕಲಬೆರಕೆ ಭಾಷೆ ಮಾತಾಡುವ ಬೆರಕೆಗಳ ಮಾತಿಗೆ ನಾನು ಎಂದಾದರೂ ಬೆಲೆ ಕೊಡುವುದುಂಟೋ..?  ಎಲ್ಲೋ ವಿದೇಶದಲ್ಲಿ ಕೂತು ಗುರುತು ಮರೆಮಾಚಿ, ಇಂಟರ್ನೆಟ್ ಫೋನ್ ಮೂಲಕ ಕರೆ ಮಾಡುವ ಶಿಖಂಡಿಗಳ ಷಂಡತನದ ಮಾತುಗಳಿಗೆ ನಾನು ಹೆದರುವುದುಂಟೋ..?  ಇವೆಲ್ಲ ಕುಂಯ್ ಗುಟ್ಟುತ್ತಾ ಕೀರಲು ಸ್ವರದಲ್ಲಿ ಬೊಗಳಲೆತ್ನಿಸುವ ಹುಚ್ಚು ಮತೀಯ ನಾಯಿಗಳು!!  ಇವುಗಳಿಗೆಲ್ಲ ನಾನು ಬಗ್ಗುವವನಲ್ಲ ಎಂಬ ಸತ್ಯ, ಕರೆ ಮಾಡಿ ಬೆದರಿಸಲು ಯತ್ನಿಸುವವರಿಗೂ ಗೊತ್ತಿದೆ.  ಆದರೂ ಒಂದು ವಿಕೃತ ಸಂತೋಷಕ್ಕೋಸ್ಕರ ಆಗಾಗ ಹೀಗೆ ಕರೆಮಾಡಿ ತೀಟೆ ತೀರಿಸಿಕೊಳ್ಳುತ್ತವೆ.

ಆದರೆ ಓರ್ವ ಜವಾಬ್ದಾರಿಯುತ ನಾಗರಿಕನಾಗಿ, ಜನರಿಂದ ಆಯ್ಕೆಯಾದ ಸಂಸದನಾಗಿ, ಓರ್ವ ಕೇಂದ್ರ ಮಂತ್ರಿಯಾಗಿ ನಾನು ನನ್ನ ಕರ್ತವ್ಯ ಮಾಡಿದೆ.  ಹೀಗೆ ಬೆದರಿಕೆ ಕರೆ ಬಂದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆ.  ಜೊತೆಗೆ ದೂರನ್ನೂ ನೀಡಿದೆ.  ಎಫ್.ಐ.ಆರ್ ಕೂಡ ದಾಖಲಾಯ್ತು.  ಈ ಮೊದಲೂ ಹಲವಾರು ಬಾರಿ ಇಂತ ಘಟನೆಗಳು ನಡೆದಾಗಲೆಲ್ಲಾ ನಾನು ನನ್ನ ಪಾಲಿನ ಜವಾಬ್ದಾರಿ ಎಂದು ತಿಳಿದು ಯುಕ್ತ ರೀತಿಯಲ್ಲಿಯೇ ದೂರನ್ನು ದಾಖಲಿಸಿದ್ದೇನೆ.  ಆದರೆ ರಾಜ್ಯದಲ್ಲಿದ್ದ ನರಸತ್ತ ಸರಕಾರಗಳು ಇದುವರೆಗೂ ಈ ದಿಕ್ಕಿನಲ್ಲಿ ಯಾವುದೇ ರೀತಿಯ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನನ್ನೊಂದಿಗೆ ಅಥವಾ ಸಂಬಂದಿಸಿದ ತನಿಖಾ ಸಂಸ್ಥೆಗೆ ನೀಡಿದ ಉದಾಹರಣೆ ಇಲ್ಲವೇ ಇಲ್ಲ.  ಯಕಶ್ಚಿತ್ ಒಂದು ಪ್ರಾಥಮಿಕ ತನಿಖೆ ಕೂಡಾ ಆಗಲಿಲ್ಲ, ಹಾಗಾಗಿ ಈಗಿನ ಈ ಅಸಹ್ಯಕರ ರೀತಿಯ ಕೂಡಾವಳಿ ಮಾಡಿಕೊಂಡು ಗದ್ದುಗೆ ಹಿಡಿರುವ ಕಲಬೆರಕೆ "ಕೋಜಾ" ಸರಕಾರ ಮತ್ತದರ ಮುಖ್ಯಮಂತ್ರಿ ಏನನ್ನೂ ಮಾಡುವುದಿಲ್ಲ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ.

ಒಂದು ವೇಳೆ ತನಿಖೆ ನಡೆಸಿದರೆ, ಆರೋಪಿಗಳ ಗುರುತು ಪತ್ತೆಯಾದರೆ ಅದರಿಂದ ರಾಜ್ಯದ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಿ ಒಂದು ನಿರ್ಧಿಷ್ಟ ಸಮುದಾಯದ ಜನರ ಮನಸ್ಸಿಗೆ ನೋವಾಗುವ ಸಾಧ್ಯತೆ ಇದೆ ಎಂಬ ಸಬೂಬು ನೀಡಿ ನಮ್ಮ ಮುಖ್ಯ ಮಂತ್ರಿಗಳೇ ಖುದ್ದಾಗಿ ಮುಂದೆ ನಿಂತು ತನಿಖೆಯನ್ನು ತಡೆಹಿಡಿದಾರು...!

 

ಮತ್ತು ಈಗಿನ ಗೃಹ ಸಚಿವರ ಕತೆ ಕೇಳಲೇ ಬೇಡಿ, ಅವರಿಗೇ ಖುದ್ದಾಗಿ ಬಾಲಗ್ರಹ ಪೀಡೆ ವಕ್ಕರಿಸಿಕೊಂಡು ಗ್ರಹಚಾರ ಕೆಟ್ಟು ಅವರದೇ ಸಮುದಾಯವನ್ನು ಒಡೆಯಲು ಹೋಗಿ ದಂತಭಗ್ನ ಮಾಡಿಕೊಂಡು ಕೂತಿದ್ದಾರೆ!  

ಇಂತ ವ್ಯವಸ್ಥೆ ಇರುವಾಗ ಯಾವುದೊ ವಿದೇಶೀ ಮೂಲದಿಂದ ಬೆದರಿಕೆ ಕರೆ ಬಂದರೆ ಅದರ ತನಿಖೆ ನಡೆದು ಅಪರಾಧಿಯನ್ನು ಪತ್ತೆ ಹಚ್ಚುವುದು ಕನಸಿನ ಮಾತು.

ಹಾಗಂತ ನನಗೆ ನಮ್ಮ ಪೊಲೀಸು ಇಲಾಖೆಯ ಮೇಲೆ, ಅವರ ಸಾಮರ್ಥ್ಯದ ಮೇಲೆ, ಅವರ ಕರ್ತವ್ಯಪರತೆಯ ಮೇಲೆ ಅಪಾರ ನಂಬಿಕೆ ಇದೆ.  ನಮ್ಮ ರಾಜ್ಯದ ಪೊಲೀಸು ಇಲಾಖೆ ನಿಜಕ್ಕೂ ತುಂಬಾ ಸಮರ್ಥ.  ಆದರೆ ಪೊಲೀಸರ ಸಾಮರ್ಥ್ಯವನ್ನು ಕುಂಟಿಸಿ, ಅವರ ಕೈಗಳನ್ನು ಕಟ್ಟಿ ಹಾಕುವ ಕೆಲಸ ಮಾಡುವುದು, ಇದೆ ರಾಜಕೀಯ ವ್ಯವಸ್ಥೆ.  ಹಿಂದೆ ಐದು ವರ್ಷ ಸಿದ್ಧರಾಮಯ್ಯ ಅಧಿಕಾರ ನಡೆಸಿದ್ದಾಗ ಪೊಲೀಸು ಇಲಾಖೆ ಸಂಪೂರ್ಣ ಹಡಾಲೆದ್ದು ಹೋಗಿತ್ತು. ಈಗ ಕಲಬೆರಕೆ ಸರಕಾರಕ್ಕೆ ಒಬ್ಬ ಅಳುಮಂಜಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲಂತೂ ಪೊಲೀಸ್ ಇಲಾಖೆ ಮೂರ್ಚಾವಸ್ಥೆಗೆ ಜಾರಿದಂತೆ ಅನಿಸುತ್ತಿದೆ.  ಸಾಲದಕ್ಕೆ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ಹಿಂದೂ ಹುಡುಗರ ಮೇಲೆ ಕ್ಷುಲ್ಲಕ ಕಾರಣಗಳಿಗೆಲ್ಲ ಗಂಭೀರ ಅಪರಾಧದ ಕೇಸುಗಳನ್ನು ಹಾಕಿ ಅವರನ್ನು ಜೈಲಿಗಟ್ಟುವ ಕೆಲಸ ಮಾಡಿ ಅವರನ್ನು ಹಣಿಯುವ ಪ್ರಯತ್ನ ಮಾಡಿದರು.  ಅದೇ ವೇಳೆ ಪಿ. ಎಫ್. ಐ. ಯಂಥ ಉಗ್ರಸಂಘಟನೆಯ ಪಾತಕಿಗಳ  ಮೇಲೆ ಅತ್ಯಾಚಾರದಂತ ಗಂಭೀರ ಅಪರಾಧಗಳಿದ್ದರೂ ಕೇಸು ಖುಲಾಸೆಗೊಳಿಸಿದರು. ಇದು ಕಲಬೆರಕೆ ಸರಕಾರ ಮತ್ತದರ ಮುಖ್ಯಮಂತ್ರಿಯ ವರಸೆ.  ಹಾಗಾಗಿ ನನಗೆ ಬಂದ ಬೆದರಿಕೆ ಕರೆಗಳ ಬಗ್ಗೆ ತನಿಖೆ ನಡೆಯುವುದೆಂಬ ನಂಬಿಕೆ ನನಗಿಲ್ಲ.  

ಅದೇನೋ ಈಗ ಚುನಾವಣಾ ಸಮಯವಾದುದರಿಂದ, ರಾಜಕೀಯ ಒತ್ತಡ ಇಲ್ಲದಿರುವ ಕಾರಣ, ಪೊಲೀಸರು ನನ್ನ ದೂರನ್ನು ಸ್ವೀಕರಿಸಿ ಪ್ರಥಮ ಮಾಹಿತಿ ವರದಿಯನ್ನಾದರೂ ತಯಾರಿಸಿದ್ದಾರೆ.

ಅದೇನೇ ಇರಲಿ, ಈ ಬೆದರಿಕೆ ಕರೆಗಳ ವಿಷಯ ನನಗೆ ಹೊಸದಲ್ಲ.  ದಶಕಗಳಿಂದಲೂ ಈ ರೀತಿಯ ಬೆದರಿಕೆಗಳು ನನಗೆ ಬರುತ್ತಲೇ ಇವೆ.  ಇಂತ ಗೊಡ್ಡು ಬೆದರಿಕೆಗಳಿಗೆ ಜಗ್ಗುವವನಲ್ಲ... ಬೊಗಳುವ ನಾಯಿಗಳಿಗೆ ಬಗ್ಗುವವನೂ ಅಲ್ಲ... !!

#ಅನಂತಕುಮಾರಹೆಗಡೆ

Related posts