Latest News

Happenings & Events

Chaired the meeting with the officials of various department organised at Karwar, recently.

ಕಳೆದ ಶನಿವಾರದಂದು ಕಾರವಾರದ ನಿರೀಕ್ಷಣಾ ಮಂದಿರದಲ್ಲಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರ ಅಧ್ಯಕ್ಷತೆಯಲ್ಲಿ ಹಲವು ಇಲಾಖೆಯ ಅಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿತ್ತು.
 
ಮಾನ್ಯ ಸಂಸದರು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆಗಳಿಗೆ ಈ ಹಿಂದೆ ನೀಡಲಾದ ನಿರ್ದೇಶನದಂತೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿ ಕೇಂದ್ರ ರಸ್ತೆ ನಿಧಿ ಕಾಮಗಾರಿಯ ಪ್ರಗತಿಯ ಬಗ್ಗೆ ವಿವರಣೆ ಪಡೆದು ನೆರೆದಂತಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
 
ಲೀಡ್ ಬ್ಯಾಂಕ್ ನಿಂದ ಕೇಂದ್ರದ ಮುದ್ರಾ ಹಾಗೂ ಇನ್ನಿತರೆ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಸಂಸದರು ಪರಿಶೀಲನೆ ನಡೆಸಿದರು.
 
ಕಳೆದ ಜನವರಿ ತಿಂಗಳಲ್ಲಿ ಉದ್ಘಾಟನೆಗೊಂಡ ಪಾಸ್ ಪೋರ್ಟ್ ಸೇವಾ ಕೇಂದ್ರದ ಈವರೆಗಿನ ಪ್ರಗತಿ ಹಾಗೂ ಇನ್ನಿತರೆ ಜನೋಪಯೋಗಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಸಂಸದರು ಅಧಿಕಾರಿಗಳೊಂದಿಗೆ ಸವಿಸ್ತಾರವಾಗಿ ಚರ್ಚೆ ನಡೆಸಿದರು.
 
#ಅನಂತಕುಮಾರಹೆಗಡೆ_ಕಾರ್ಯಾಲಯ
 
Uttara Kannada Lok Sabha Member, Sri Anantkumar Hegde chaired the meeting with the officials of various department organised at Inspection Bungalow, Karwar, recently.
 
Hon'ble Member of Parliament, discussed on the works, which were directed previously under Pradhan Mantra Gramsadak Yojana, National Highway & State Highway Development Authority. He also took note of progress report of project carried out by Central Road Fund from the respective officials.
 
He also inspected the ongoing works and progress of implementation of various Union Government initiated programmes such as Mudhra Yojana carried out by Lead Bank.
 
Further, the Hon'ble Member of Parliament had a detailed discussion with the respective official over the progress of Passport Seva Kendra, which was inaugurated last January in Ankola.
 
#OfficeOfAnantkumarHegde

Related posts