Latest News

Happenings & Events

ಶ್ರೀ ಸತ್ಯಸಾಯಿ ಸಂಚಾರಿ ದಂತ ಹಾಗು ವೈದ್ಯಕೀಯ ಚಿಕಿತ್ಸಾಲಯದ ಸಮರ್ಪಣಾ ಸಮಾರಂಭ!

"ಇದು ತುಂಬ ಸಹಜ ಮತ್ತು ಮೌಲಿಕವಾಗಿರುವಂತಹ ಕಾರ್ಯಕ್ರಮ.  ಈಗಾಗಲೇ ದಂತ ಚಿಕಿತ್ಸೆ ಮತ್ತು ಇತರೆ General Medicineಗಳ ಒಂದು ಸಂಚಾರಿ ಘಟಕ, ಈ ಜಿಲ್ಲೆಯ ಜನರ ಸೇವಾ ದೃಷ್ಟಿಯಿಂದ ಅರ್ಪಣೆಯಾಗಿದೆ.  ಮಹಾಸ್ವಾಮಿಯ ಆಶೀರ್ವಾದದಿಂದ ಇಂದು ಈ ಘಟಕ ಅನಾವರಣಗೊಂಡಿದೆ.  ಇದರ ಹಿಂದೆ ಕೈ ಜೋಡಿಸಿದಂತಹ ಅದೆಷ್ಟೋ ಜನರ ಕಣ್ಣುಗಳಲ್ಲಿ ಇಂದು ಒಂದು ರೀತಿ ಧನ್ಯತೇ, ಮನಸ್ಸಿಗೆ ಅದೊಂದು ರೀತಿಯ ನೆಮ್ಮದಿ, ಆತ್ಮಕ್ಕೆ ಅದೇನೋ ಒಂದು ರೀತಿಯ ತೃಪ್ತಿ ಸಂದಿದೆ.

 

ಬಂಧುಗಳೆ, ಇದ್ಯಾವುದು ಒಂದು  ಘಟನೆಗೆ ಸೀಮಿತವಾದದ್ದು ಎಂದು ಭಾವಿಸಬೇಡಿ.  ಯಾವುದೇ ರೀತಿಯ ಕೊಡುಗೆಯನ್ನು ಕೊಟ್ಟಾಗ ಮನಸು ಸ್ವಾಭಾವಿಕವಾಗಿ ಧನ್ಯತೆಯನ್ನು ಕಾಣುತ್ತದೆ, ಯಾಕೆ?  ಈ ನೆಲದಲ್ಲಿ ಒಂದು ನುಡಿ ಇದೆ..

 

"ಸ್ವಂತಕ್ಕೆ ಸ್ವಲ್ಪ ,ಸಮಾಜಕ್ಕೆ ಸರ್ವಸ್ವ"

 

ಇದನ್ನು ಅದೆಷ್ಟೋ ಮಹಾಪುರುಷರು ತಮ್ಮ ಬದುಕಿನಲ್ಲಿ ನಡೆಸಿಕೊಂಡು ಬಂದಿದ್ದಾರೆ.  ಅದಕ್ಕೋಸ್ಕರವೇ ಅವರನ್ನು ನಾವು ಮಹಾತ್ಮರು ವೆಂದು ಕರೆಯುತ್ತೇವೆ.  ಯಾರ ಬದುಕಿನಲ್ಲಿ "ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ"ವೆಂಬ ದ್ಯೇಯ ತುಂಬಿಕೊಂಡಿದೆಯೋ, ಅವರ ಹೆಜ್ಜೆಯ ಗುರುತುಗಳಲ್ಲಿ ಅದು ಅತ್ಯಂತ ನಿಶ್ಚಲವಾಗಿ ಕಾಣುತ್ತದೆ.

 

ಇದನ್ನೇ ಧರ್ಮ ವೆಂದು ಹೇಳುತ್ತೇವೆ.  ನಾವು ಧರ್ಮವೆಂದರೆ ಎಲ್ಲೋ ಒಂದು ಕಡೆ ಪೂಜೆ-ಆರತಿ ಮಾಡೋದು ಎಂದು ತಿಳಿದಿವುದು ಶುದ್ಧ ತಪ್ಪು!!

 

ತುಂಬ ಬುದ್ದಿವಂತಿಕೆಯಿಂದ ಮಾತನಾಡಿದರೆ ತರ್ಕ, ವಿತರ್ಕಗಳು ಹುಟ್ಟಿ ಭಾರಿ ಖುಷಿ ಕೊಡುತ್ತವೆ.  ಆದರೆ ಯಾರು ಹೃದಯದ ಭಾಷೆಯಲ್ಲಿ ಮಾತನಾಡುತ್ತಾರೋ ಅದು ಸಾರ್ವಕಾಲಿಕವಾಗಿ ನಿಲ್ಲುತ್ತದೆ.  ಆ ಭಾಷೆಯೇ ಈ ದೇಶದ ಆದ್ಯಾತ್ಮಿಕ ಭಾಷೆ.

 

ಜಗತ್ತಿನಲ್ಲಿ ಬೇರೆ ಬೇರೆ ದೇಶಗಳಿಗೆ ಒಂದೊಂದು ಭಾಷೆ ಇದೆ.  ನಾನು ಆಡು ಭಾಷೆ ಬಗ್ಗೆ ಹೇಳುತ್ತಿಲ್ಲ, ಅಲ್ಲಿನ ಜನರ ಬದುಕಿನ ಭಾಷೆ.  ಇಂಗ್ಲಿಷರಿಗೆ ವ್ಯಾಪಾರದ ಭಾಷೆ, ಫ್ರೆಂಚರಿಗೆ ರಾಜಕಾರಣದ ಭಾಷೆ, ಅಮೆರಿಕಾದವರಿಗೆ ಬಂಡವಾಳ ಶಾಹಿ ಭಾಷೆ ಅರ್ಥವಾಗುತ್ತದೆ.  ಆದರೆ ಭಾರತದ ಭಾಷೆ ಆದ್ಯಾತ್ಮಿಕ ಭಾಷೆ.  

 

ಮತ್ತೊಂದು ಕಡೆ ನಮ್ಮ ಹಿರಿಯರು ಹೇಳುತ್ತಾರೆ... ಭಾಷೆಗಳಿಲ್ಲದೆ ಏನು ಆಗೋದಿಲ್ಲವೆಂದು, 

 

"ಕ್ರಿಯಾ ಸಿದ್ಧಿ ಸತ್ವೇ ಭವತಿ, ಮಮತಾಮ್ ನೋಪಾಕಾರಣೇ" 

 

- ನಮ್ಮ ಕ್ರಿಯೆ ಅಥವಾ ಕೆಲಸದ ಸಿದ್ಧಿ, ನಮ್ಮ ಸತ್ವದಿಂದ ಸಾಧ್ಯವೇ ಹೊರೆತಾಗಿ ನಾವು ಪ್ರಯೋಗಿಸುವ ಉಪಕರಣಗಳಿಂದಲ್ಲ.  ಉದಾಹರಣೆಗೆ ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ಕೆಲಸ ಮಾಡುತ್ತಾರೆ, ಮತ್ತು ಅಲ್ಲಿ ಇರುವಂತಹ ಉಪಕರಣಗಳು ನೆಪಕ್ಕೆ ಮಾತ್ರ.  ನಿಜವಾದಂತಹ ಸಂಶೋಧನೆ ಅನ್ವೇಷಕನೊಳಗೆ ನಡೆಯುತ್ತಿರುತ್ತದೆ.  ಇಂದು ಸಂಶೋಧನೆಯಿಂದ ಒಂದು ಹೊಸ Product  ಹೊರಗಡೆ ಬಂದರೆ, Next  Generation Product ಬಗ್ಗೆ ಅವನ ತಲೆಯಲ್ಲಿ ಯೋಚನೆ ನಡೆಯುತ್ತಿರುತ್ತದೆ.  ಆದರೆ ನಮ್ಮ ಕಣ್ಣಿಗೆ ಅದು ಕಂಡಿರಿವುದಿಲ್ಲ, ಹಾಗೆ ನಮಗೆ ಅದು ಅರ್ಥವೂ ಆಗಿರುವುದಿಲ್ಲ.  ಹಾಗೆಯೇ ಇಂದು ಸಾಮಾನ್ಯ ಜನರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಆ ಮಹಾಪುರುಷರ ಹೆಜ್ಜೆಯ ಗುರುತುಗಳಲ್ಲಿ ನಡೆಯುತ್ತಿರುವಂತಹ ಸಭ್ಯರು ನೀವೆಲ್ಲಾ ಇದ್ದೀರಲ್ಲ, ಸ್ವಾಮಿ. ನಿಜಕ್ಕೂ ಆ ಭಾಷೆಯ ಸಂಹವನವನ್ನು ಮುಂದಿನ ತಲೆಮಾರಿಗೆ ಕೊಂಡಯಿದು ಹೋಗುವಂತಹ ಪ್ರಯತ್ನ ನಿಮ್ಮೆಲ್ಲರಿಂದ ನಡೆಯುತ್ತಿದೆ. ಖಂಡಿತವಾಗಿ ನಿಮ್ಮ ಈ ಸೇವಾ ಸ್ವಭಾವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನ, ನಮನಗಳನ್ನು ನಾನು ಸಲ್ಲಿಸುತ್ತೇನೆ......    

 

ಖಂಡಿತವಾಗಿ ಮುಂದಿನ ದಿನಗಳಲ್ಲಿ  ಈ ಘಟಕ ತುಂಬ ಯಶಶ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಾನು ಭಾವಿಸಿದ್ದೇನೆ.  ನಮ್ಮೆಲ್ಲರ ಕಡೆಯಿಂದ ಏನೆಲ್ಲ ಸಹಕಾರಗಳು ಬೇಕೋ, ಖಂಡಿತವಾಗಿ ನಮಗೆ ಆದೇಶ ಮಾಡಿದರೆ ಸಾಕು.  ನಾವು ಹೃದಯ ಭಾಷೆಯಲ್ಲಿ ಮಾತನಾಡುವಂತಹ ಜನ, ಅದಕ್ಕೋಸ್ಕರ ನಾವು ತರ್ಕ ಮಾಡುವುದಕ್ಕೆ ಹೋಗುವುದಿಲ್ಲ .  ಅಲ್ಲಿಗೆ ಹೋದರೆ ನನಗೇನು ಲಾಭ, ಹಾಗೆ-ಹೀಗೆ ಎಂಬ ಪ್ರಶ್ನೆಯೇ ಇಲ್ಲ.  ನಾಗೇಶ್ ಅಣ್ಣ ಹೇಳಿದ್ದಾರೆ ಎಂದರೆ ಅದು ಮುಗಿದುಹೋಯಿತು. ಅದನ್ನು ಒಪ್ಪಿಕೊಂಡು ಹೋಗಬೇಕು ಅಷ್ಟೇ.  ಏನೇ ಇರಲಿ ತುಂಬ ಸುಂದರವಾಗಿರುವಂತ ಕಾರ್ಯಕ್ರಮ, ತಮ್ಮೆಲ್ಲರನ್ನು ಕರೆದು ಇವತ್ತು ಸಮಾಜಕ್ಕೆ ಸಮರ್ಪಣೆ ಗೊಳಿಸಲಾಗಿದೆ, ಖಂಡಿತವಾಗಿ ಎಲ್ಲವನ್ನು ಯೆಶಸ್ವಿಯಾಗಿ ನಡೆಸಿಕೊಂಡು ಹೋಗುವ ಹೊಣೆಗಾರಿಕೆ ಕೂಡ ನಮ್ಮ ಮೇಲಿದೆ, ಆ ಹೊಣೆಗಾರಿಕೆಯನ್ನು ನಿಭಾಯಿಸಿಕೊಂಡು ಹೋಗುವಂತಹ ಸಂಕಲ್ಪದೊಂದಿಗೆ ನಾವು ಮುಂದಿನ ಒಂದು ಸೇವಾ ಕಾರ್ಯಕ್ರಮಕ್ಕೆ ಹೆಜ್ಜೆಯನ್ನು ಇಡೋಣವೆಂದು, ಇಲ್ಲಿ ಸೇರಿರುವಂತಹ ಎಲ್ಲ ಬಂಧುಗಳಿಗೆ, ಅವಕಾಶ ಕೊಟ್ಟಿರುವಂತಹ ಎಲ್ಲ ಗಣ್ಯರಿಗೆ ನನ್ನ ವಂದನೆಯನ್ನು ಸಲ್ಲಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ"

 

- ಅನಂತಕುಮಾರಹೆಗಡೆ

 

 

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಇತ್ತೀಚಿಗೆ ಕಾರವಾರದಲ್ಲಿ  ಆಯೋಜಿಸಿದ್ದ ಶ್ರೀ ಸತ್ಯಸಾಯಿ ಸಂಚಾರಿ ದಂತ ಹಾಗು ವೈದ್ಯಕೀಯ ಚಿಕಿತ್ಸಾಲಯದ ಸಮರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

 

ಈ ಸಂದರ್ಭದಲ್ಲಿ ಶ್ರೀಮತಿ ರೂಪಾಲಿ ನಾಯ್ಕ್, ಮಾನ್ಯ ಶಾಸಕಿ - ಕಾರವಾರ, ಡಾ ಡಿ ಸಿ ಸುಂದರೇಶ, ನಿರ್ದೇಶಕರು - ಶ್ರೀ ಸತ್ಯಸಾಯಿ ಆಸ್ಪತ್ರೆ, ಬೆಂಗಳೂರು, ಡಾ ರಾಧೇಶ್ಯಾಮ, ಟ್ರಸ್ಟಿ - ಪ್ರಶಾಂತಿ ಟ್ರಸ್ಟ್, ಡಾ ರವಿ ಡಬೀರ್, ಕಾರ್ಯದರ್ಶಿ - ಪ್ರಶಾಂತಿ ಟ್ರಸ್ಟ್, ಶ್ರೀ ನಾಗೇಶ ಜಿ ಧಾಕಪ್ಪ, ರಾಜ್ಯಾಧ್ಯಕ್ಷರು - ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಮುಂತಾದವರು ಉಪಸ್ಥಿತರಿದ್ದರು.

 

Related posts