Latest News

title image

Happenings & Events

ಉಳವಿ ಹಾಗು ಹನಕೋಣ ಗ್ರಾಮದಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರಗಳಿಗೆ ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಭೇಟಿ ನೀಡಿದರು

ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಹಾಗು ಮಲ್ಲಾಪುರ ಭಾಗದಲ್ಲಿ ತೀವ್ರ ಮಳೆಯಿಂದಾಗಿ ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರಿಗೆ ಉಳವಿ ಹಾಗು ಹನಕೋಣ ಗ್ರಾಮದಲ್ಲಿ ತೆರೆಯಲಾಗಿದ್ದ ಗಂಜಿ ಕೇಂದ್ರಗಳಿಗೆ ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನೆ ನಡೆಸಿದರು. ನಂತರದಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವ ಬಗ್ಗೆ ಹಾಗೂ ದುರಂತಗಳಿಗೆ ಅವಕಾಶ ನೀಡದೆ ಸಮರ್ಪಕ ಮುಂಜಾಗೃತ ವ್ಯವಸ್ಥೆಗಳನ್ನು ತಯಾರಿರುವಂತೆ ಸೂಚಿಸಿದರು.
 
ಮಾನ್ಯ ಸಂಸದರು ಪ್ರವಾಹಕ್ಕೆ ಸಿಲುಕಿರುವವರ ರಕ್ಷಣೆ ಹಾಗು ಅವರನ್ನು ಸ್ಥಳಾಂತರಿಸಲು ಕೇಂದ್ರ‌ ಸರಕಾರದ ಎನ್.ಡಿ.ಆರ್.ಎಫ್ ತಂಡದ‌ ಮುಖ್ಯಸ್ಥರೊಂದಿಗೆ ಸಹ ಈ ಸಂದರ್ಭದಲ್ಲಿ ಚರ್ಚೆ ನಡೆಸಿದರು. ಈ ನಿಟ್ಟಿನಲ್ಲಿ ಎರಡು ಎನ್.ಡಿ.ಆರ್.ಎಫ್‌ ತಂಡದ ತುಕಡಿ ಜಿಲ್ಲೆಗೆ ಆಗಮಿಸಲಿದ್ದು ಕಾರವಾರದ ಕಾಳಿ ನದಿಯ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಹಾಗೂ ಗಂಗಾವಳಿ ನದಿ ಪ್ರವಾಹದಲ್ಲಿ‌ ಸಿಲುಕಿರುವವರ ರಕ್ಷಣೆಗೆ ಒಂದೊಂದು ತಂಡವನ್ನು ಮೀಸಲಿಡಲಾಗಿದೆ. ಹಾಗೆಯೇ ನೌಕಾದಳದ ಹೆಲಿಕಾಪ್ಟರ್ ನ್ನು ಅಂಕೋಲಾ ತಾಲ್ಲೂಕಿನಾದ್ಯಂತ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಹಾಗೂ ಆಹಾರ ಪೂರೈಸಲು ಪ್ರತ್ಯೇಕ ಮೀಸಲು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ, ಕೇಂದ್ರ ಸರಕಾರದಿಂದ ಅನುಮತಿ ಕೂಡ ಪಡೆದು ಕೊಳ್ಳಲಾಗಿದೆ. ಇಂದು ಮಧ್ಯಾಹ್ನ 12:30 ರಿಂದ ಎನ್.ಡಿ.ಆರ್.ಎಫ್‌ ಹಾಗೂ ನೌಕಾದಳದ ಹೆಲಿಕಾಪ್ಟರ್ ಗಳು ಕಾರ್ಯಾಚರಣೆ ಆರಂಭಗೊಳಿಸಿವೆ.
 
ಈ ಸಂದರ್ಭದಲ್ಲಿ ಶ್ರೀಮತಿ ರೂಪಾಲಿ ನಾಯ್ಕ್ , ಮಾನ್ಯ ಶಾಸಕಿ - ಕಾರವಾರ-ಅಂಕೋಲಾ ಹಾಗು ಇತರ ಸಂಭಂದಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.
 
#ಅನಂತಕುಮಾರಹೆಗಡೆ

Free HTML5 Bootstrap template
Free HTML5 Bootstrap template
Free HTML5 Bootstrap template