Latest News

Happenings & Events

ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದಲ್ಲಿ ತೆರೆಯಲಾಗಿದ್ದ ಆಶ್ರಯ ಕೇಂದ್ರಗಳಿಗೆ ಶ್ರೀ ಅನಂತಕುಮಾರ ಹೆಗಡೆಯವರು ಭೇಟಿ ನೀಡಿದರು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮದಲ್ಲಿ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಅಲ್ಲಿನ ಆಶ್ರಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನೆ ನಡೆಸಿದರು. 

ಮಾನ್ಯ ಸಂಸದರು ಜನರಿಗೆ ಅವಶ್ಯಕವಾಗಿರುವಂತಹ ನೆರೆವು, ಸರಕಾರದ ವತಿಯಿಂದ ಕಲ್ಪಿಸುವುದಾಗಿ ಭರವಸೆ ನೀಡಿದರು.  ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳೊಂದಿಗೆ ಮಾನ್ಯ ಸಂಸದರು ಚರ್ಚಿಸಿ ಆಶ್ರಯ ಕೇಂದ್ರಗಳಿಗೆ ಅತ್ಯಾವಶ್ಯಕ ವಸ್ತುಗಳನ್ನು ಕೂಡಲೇ ಕಲ್ಪಿಸಿಕೊಡುವಂತೆ ನಿರ್ದೇಶನ ನೀಡಿದರು.

ಈ ಭೇಟಿಯ ವೇಳೆಯಲ್ಲಿ  ಶ್ರೀಮತಿ ರೂಪಾಲಿ ನಾಯ್ಕ್, ಮಾನ್ಯ ಶಾಸಕಿ, ಕಾರವಾರ-ಅಂಕೋಲಾ ಹಾಗು ಇತರ ಸಂಭಂದಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts