Latest News

title image

Happenings & Events

ಪ್ರಕೃತಿಯ ವಿಕೋಪಕ್ಕೆ ಮಾನವ ಪದೇ ಪದೇ ಬಲಿಯಾಗುತ್ತ, ಅದರಿಂದ ಯಾವುದೇ ರೀತಿಯ ಪಾಠ ಕಲಿಯುತ್ತಿಲ್ಲವೆನ್ನುವ ಬೇಸರ ಒಂದೆಡೆಯಾದರೆ

ಪ್ರಕೃತಿಯ ವಿಕೋಪಕ್ಕೆ ಮಾನವ ಪದೇ ಪದೇ ಬಲಿಯಾಗುತ್ತ, ಅದರಿಂದ ಯಾವುದೇ ರೀತಿಯ ಪಾಠ ಕಲಿಯುತ್ತಿಲ್ಲವೆನ್ನುವ ಬೇಸರ ಒಂದೆಡೆಯಾದರೆ, ಇಂತಹ ಸಂದರ್ಭದಲ್ಲಿ ಈ ರೀತಿಯ ಪರಿಸ್ಥಿತಿಗೆ ಹೇಗೆ ನಮ್ಮ ಸಂಯಮ ಕಾಪಡಿಕೊಳ್ಳುತ್ತೇವೆ ಎನ್ನುವುದನ್ನು ಮರೆತಿರುವುದು ಸಹ ಅಷ್ಟೇ ದುರಂತವೆನಿಸಿದೆ.

ರಾಜ್ಯದಲ್ಲಿ, ಅದರಲ್ಲೂ ನಮ್ಮ ಕ್ಷೇತ್ರದಲ್ಲಿ ನೆರೆಯಿಂದ ಉಂಟಾದ ದುರಂತದ ಘಟನೆಗಳು ಘಟಿಸಿದ ಸಂದರ್ಭದಲ್ಲೇ, ದೇಶದ ಮತ್ತೊಂದು ತುರ್ತು ಅಗತ್ಯಕ್ಕೆ ನಮ್ಮೆಲ್ಲ ಸಂಸದರ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿತ್ತು. ವಿಪ್ ಸಹ ಜಾರಿಗೊಳಿಸಲಾಗಿತ್ತು. ಪ್ರಾಯಶಃ ನನ್ನ ಕ್ಷೇತ್ರದ ಮತದಾರರು ಸಹ ಈ ಐತಿಹಾಸಿಕ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಗೆ ಬೆಂಬಲ ಸೂಚಿಸಲೆಂದೇ ನನ್ನನ್ನು ಭಾರಿ ಅಂತರದಿಂದ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದ್ದು ಎಂದು ತಿಳಿಯುತ್ತೇನೆ. ಅಲ್ಲದೆ ಇದೆ ಸಂದರ್ಭದಲ್ಲಿ ನಮ್ಮೆಲ್ಲರನ್ನು ಜನಸೇವೆಗೆ ಸ್ಪೂರ್ತಿಗೊಳಿಸಿದ ದಿವ್ಯ ಚೇತನರಾದ ಶ್ರೀಮತಿ ಸುಶ್ಮಾ-ಜೀ ಹಠಾತ್ತಾನೆ ನಿಧನರಾದದ್ದು ಸಹ ಒಂದು ರೀತಿಯಲ್ಲಿ ನಮ್ಮನ್ನು ತೀವ್ರ ಶೋಕದಲ್ಲಿ ದೂಡಿದ ವಾತಾವರಣ ನಿರ್ಮಾಣವಾಗಿತ್ತು.

ಕಾರ್ಯನಿಮಿತ್ತ ಮತ್ತು ಅನಿವಾರ್ಯ ಕಾರಣಗಳಿಂದಾಗಿ ಕ್ಷೇತ್ರದಲ್ಲಿ ಇರಲಿಕ್ಕೆ ಆಗದಿರುವ ಸಂದರ್ಭದಲ್ಲಿ ಜಿಲ್ಲಾಡಳಿತ, ನಮ್ಮ ಪಕ್ಷದ ಜಿಲ್ಲಾ ನಾಯಕತ್ವ ಮತ್ತು ಆಯ್ಕೆಗೊಂಡ ಪ್ರತಿನಿಧಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ನೆರೆಪ್ರದೇಶಗಳ ಹಾನಿ, ಜನಜೀವನ ಮತ್ತು ಪ್ರಾಣಿ ಸಂಕುಲಗಳ ಜೀವನ ಅಸ್ತವ್ಯಸ್ತಗೊಂಡ ಬಗ್ಗೆ ಮಾಹಿತಿ ಪಡೆದುಕೊಂಡು, ಸೂಕ್ತ ರೀತಿಯಲ್ಲಿ ಮಾರ್ಗದರ್ಶನದ ಸ್ಪಂದನೆ ನನ್ನಿಂದ ನಡೆಯುತ್ತಿತ್ತು. ಸಂಸತ್ತಿನ ಕಲಾಪ ಮುಗಿದ ನಂತರ ಕೂಡಲೇ ಬೇರೆ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ನಿನ್ನೆಯಿಂದ ನೆರೆಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡುತ್ತಿದ್ದೇನೆ. ನಿನ್ನೆಯ ದಿನ ಕಾರವಾರ-ಅಂಕೋಲ ಕ್ಷೇತ್ರಗಳಲ್ಲಿ ಭೇಟಿ ನೀಡಿದ್ದು, ಇಂದು ಹೊನ್ನಾವರ-ಕುಮಟಾ ಕ್ಷೇತ್ರಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸುವುದಲ್ಲದೆ ಇನ್ನಿತರ ಸೂಚಿತ ಸ್ಪಂದನೆಯ ಕಾರ್ಯ ಸಹ ಮುಂದುವರಿಯಲಿದೆ. ಬಾಕಿ ನೆರೆಪೀಡಿತ ಕ್ಷೇತ್ರಗಳ ಪರಿಶೀಲನಾ ಭೇಟಿ ಸಹ ಸದ್ಯದಲ್ಲೇ ಮಾಡಲಾಗುವುದು.

ಈ ದುರಂತದ ಸಂದರ್ಭದಲ್ಲಿ ಎಲ್ಲ ಮನಸ್ತಾಪಗಳನ್ನು ಬದಿಗಿಟ್ಟು ಮಾನವೀಯತೆಯನ್ನು ಮೆರೆಯುವ ಕಾರ್ಯಕ್ಕೆ ಅನುವಾಗಬೇಕಾಗಿರುವುದು, ಇಂದು ನಮ್ಮೆಲರ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಮತ್ತು ಮುಕ್ತ ಮನಸ್ಸಿನಿಂದ ಒಟ್ಟುಗೂಡುವಿಕೆಯ ಸ್ಪಂದನೆ ಅವಶ್ಯಕ.

ಕೆಟ್ಟ ರಾಜಕೀಯ ನಡವಳಿಕೆ ತರವಲ್ಲ. ಅನಾವಶ್ಯಕವಾಗಿ judgemental attitudeನಲ್ಲಿ ತೇಜೋವಧೆ ಮಾಡುವ ಹುನ್ನಾರಕ್ಕೆ ನಾನೆಂದು ತಲೆ ಬಾಗಿಲ್ಲ.

ಮಾಧ್ಯಮಗಳು ಸಹ ಸೂಕ್ತ ರೀತಿಯಲ್ಲಿ ತಮ್ಮ ಜವಾಬ್ದಾರಿ ಅರಿತು ತಮ್ಮ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವಂತೆ ಮನವಿ ಮಾಡುತ್ತೇನೆ. ಅನಾವಶ್ಯಕವಾಗಿ ಕಪೋಲಕಲ್ಪಿತ planted stories ಅನ್ನು ಮುದ್ರಿಸಿ ವ್ಯಕ್ತಿ ಮಾನಹಾನಿ ಮಾಡದಿರುವಂತೆ ಈ ಮೂಲಕ ಎಚ್ಚರಿಸುತ್ತಿದ್ದೇನೆ. ತಪ್ಪಿದ್ದಲಿ ಕಾನೂನು ಕ್ರಮ ಕೈಗೊಳ್ಳುವುದು ಸಹ ಅನಿವಾರ್ಯವಾಗಲಿದೆ ಎಂದು ಈ ಮೂಲಕ ತಿಳಿಯಪಡಿಸುತ್ತಿದ್ದೇನೆ.

ಪ್ರಕೃತಿಯ ವಿಕೋಪದ ಈ ಸಂದರ್ಭದಲ್ಲಿ ಮಾನವೀಯತೆಯ ಅಂತಃಕರಳಿನಿಂದ ಚಿಂತಿಸಿ ನೆರವಿನ ಕರ್ತವ್ಯದ ಹಸ್ತ ಚಾಚಿಸೋಣವೆಂದು ಎಲ್ಲರೊಂದಿಗೆ ಕೇಳಿಕೊಳ್ಳುತ್ತೇನೆ.

#ಅನಂತಕುಮಾರಹೆಗಡೆ

Free HTML5 Bootstrap template