Latest News

Happenings & Events

ಕುಮಟಾ ತಾಲೂಕಿನ ದೀವಗಿ ಹಾಗು ಹಳಕಾರ ಗ್ರಾಮಗಳಲ್ಲಿ ತೆರೆಯಲಾಗಿದ್ದ ಆಶ್ರಯ ಕೇಂದ್ರಗಳಿಗೆ ಶ್ರೀ ಅನಂತಕುಮಾರ ಹೆಗಡೆಯವರು ಭೇಟಿ ನೀಡಿದರು

ಇಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ  ತಾಲೂಕಿನ ದೀವಗಿ ಹಾಗು ಹಳಕಾರ ಗ್ರಾಮಗಳ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಅಲ್ಲಿನ ಆಶ್ರಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನೆ ನಡೆಸಿದರು.

ಕುಮಟಾ ತಾಲೂಕಿನಲ್ಲಿ ಒಟ್ಟೂ ೨೨ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದ್ದು, ದೀವಗಿ ವ್ಯಾಪ್ತಿಯಲ್ಲಿ ದೀವಗಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ತಂಡರಕುಳಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಸಂತ್ರಸ್ಥರಿಗಾಗಿ ಆಶ್ರಯ ವ್ಯವಸ್ಥೆ ಹಾಗೂ ಇನ್ನಿತರ ಅವಶ್ಯಕ ಔಷದೋಪಚಾರಗಳನ್ನು ಮಾಡಲಾಗಿದೆ.

ಕುಮಟಾ ತಾಲೂಕಿನಲ್ಲಿ ನೆರೆ ಸಂತ್ರಸ್ಥರ ಪರಿಹಾರ ನಿಧಿಗೆ ಸರಕಾರದಿಂದ ರೂ. ೧೦ ಕೋಟಿ ಮಂಜೂರುಮಾಡಲಾಗಿದೆ. ಕಾಗಾಲ ಹಾಗೂ ಹಳಕಾರ ಪಂಚಾಯತ ವ್ಯಾಪ್ತಿಯಲ್ಲಿ ೭೪ ಮನೆಗಳಿಗೆ ನೀರು ನುಗ್ಗಿದ್ದರಿಂದ ಸಂತ್ರಸ್ಥರಿಗೆ ತಲಾ ₹ ೩೮೦೦/- ರೂಪಾಯಿಯಂತೆ ಒಟ್ಟೂ ₹ ೨,೮೧,೨೦೦/- ಪರಿಹಾರ ಧನ ವಿತರಿಸಲಾಗಿದೆ.  ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಒಟ್ಟೂ ೫೭ ಮನೆಗಳಿಗೆ ಪರಿಹಾರಧನವಾಗಿ ₹ ೧೫,೩೮,೮೧೧/- ಪರಿಹಾರಧನ ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ- ಬಿಜೆಪಿ, ಶ್ರೀ ಕುಮಾರ ಮಾರ್ಕಂಡೆಯ, ತಾಲೂಕಾ ಅಧ್ಯಕ್ಷರು ಹಾಗೂ ಪ್ರಮಖರಾದ ಶ್ರೀ ಎಸ್ ಎಸ್ ಹೆಗಡೆ, ಶ್ರೀ ವೆಂಕಟೇಶ ನಾಯ್ಕ ಹಾಜರಿದ್ದರು.  ತಾಲೂಕಾ ಆಡಳಿತದ ಪರವಾಗಿ ತಹಶೀಲ್ದಾರರು, ನೋಡಲ್ ಅಧಿಕಾರಿಗಳು ಹಾಜರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

 

Related posts