Latest News

title image

Happenings & Events

ಹೊನ್ನಾವರ ತಾಲೂಕಿನ ಹುಡಗೋಡ ಗ್ರಾಮದ ಆಶ್ರಯ ಕೇಂದ್ರಗಳಿಗೆ ಶ್ರೀ ಅನಂತಕುಮಾರ ಹೆಗಡೆಯವರು ಭೇಟಿ ನೀಡಿದರು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ  ತಾಲೂಕಿನ ಹುಡಗೋಡ ಗ್ರಾಮದಲ್ಲಿ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಅಲ್ಲಿನ ಆಶ್ರಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು. 

ಇತ್ತೀಚಿಗೆ ಉಂಟಾದ ಭೀಕರ ಗಾಳಿ ಮಳೆಗೆ ಮರ ಬಿದ್ದು ಪ್ರಾಣ ಕಳೆದುಕೊಂಡ ಹೊನ್ನಾವರ ತಾಲ್ಲೂಕಿನ ಕೋಟೆಬೈಲ್ ನ ವಿಠ್ಠಲ ಶೆಟ್ಟಿ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಧನವನ್ನು ಒದಗಿಸಿ ಕೊಡಲಾಯಿತು.  ಮಾನ್ಯ  ಸಂಸದರಾದ  ಶ್ರೀ ಅನಂತಕುಮಾರ ಹೆಗಡೆ ಅವರು ಚೆಕ್ ನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. 

ಈ ಸಂದರ್ಭದಲ್ಲಿ ಸನ್ಮಾನ್ಯ ಸುನಿಲ್ ನಾಯ್ಕ್, ಮಾನ್ಯ ಶಾಸಕರು - ಭಟ್ಕಳ, ಶ್ರೀ ರಾಜೇಶ ನಾಯ್ಕ, ತಾಲೂಕಾ ಅಧ್ಯಕ್ಷರು - ಬಿಜೆಪಿ  ಹಾಜರಿದ್ದರು

#ಅನಂತಕುಮಾರಹೆಗಡೆ_ಕಾರ್ಯಾಲಯ

Free HTML5 Bootstrap template
Free HTML5 Bootstrap template
Free HTML5 Bootstrap template
Free HTML5 Bootstrap template
Free HTML5 Bootstrap template