Latest News

title image

Happenings & Events

ಕಿತ್ತೂರು ತಾಲೂಕಿನ ನೇಗಿನಾಲ್ ಹಾಗು ಎಂ ಕೆ ಹುಬ್ಬಳ್ಳಿ ಗ್ರಾಮಗಳಲ್ಲಿ ತೆರೆಯಲಾಗಿದ್ದ ಆಶ್ರಯ ಕೇಂದ್ರಗಳಿಗೆ ಶ್ರೀ ಅನಂತಕುಮಾರ ಹೆಗಡೆಯವರು ಭೇಟಿ ನೀಡಿದರು

ಉತ್ತರ ಕನ್ನಡ ಕ್ಷೇತ್ರದ ಕಿತ್ತೂರು ತಾಲೂಕಿನ ನೇಗಿನಾಲ್ ಹಾಗು ಎಂ ಕೆ ಹುಬ್ಬಳ್ಳಿ ಗ್ರಾಮಗಳಲ್ಲಿ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಅಲ್ಲಿನ ಆಶ್ರಯ ಕೇಂದ್ರಗಳಲ್ಲಿ ಭೇಟಿ ಮಾಡಿದರು

ಮಾನ್ಯ ಸಂಸದರು ಅಲ್ಲಿಯ ವೈದ್ಯಾಧಿಕಾರಿಗಳನ್ನು ಉದ್ದೇಶಿಸಿ ಜನರಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷದಿ ಒದಗಿಸುವಂತೆ ನಿರ್ದೇಶಿಸಿ, ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಹ ಸೂಚಿಸಿದರು. ಅಲ್ಲಿ ನೆರೆದಿದ್ದ ಸಂತ್ರಸ್ತರ ಆರೋಗ್ಯದ ಬಗ್ಗೆ ಸಹ ಮಾಹಿತಿ ಪಡೆದು, ಅಲ್ಲಿನ ಜನರಿಗೆ ಸಕಲ ವ್ಯವಸ್ಥೆ ಕಲ್ಪಿಸುವುದಾಗಿಯೂ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಮಹಾಂತೇಶ್ ದೊಡ್ಡಗೌಡರ್, ಮಾನ್ಯ ಶಾಸಕರು - ಕಿತ್ತೂರು, ಶ್ರೀ ಚಿನ್ನಪ್ಪ ಮುತ್ನಾಳ, ತಾಲೂಕ ಅಧ್ಯಕ್ಷರು - ಬಿಜೆಪಿ, ಶ್ರೀ ಶಿವಾನಂದ ಹನುಮಸಾಗರ, ತಾಲೂಕ ಪ್ರಧಾನ ಕಾರ್ಯದರ್ಶಿ, ತಹಶೀಲ್ದಾರರು, ಪಿಡಬ್ಲುಡಿ ಅಧಿಕಾರಿಗಳು, ಆರೋಗ್ಯಾಧಿಕಾರಿಗಳು ಹಾಗು  ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Free HTML5 Bootstrap template
Free HTML5 Bootstrap template
Free HTML5 Bootstrap template
Free HTML5 Bootstrap template