Latest News

Happenings & Events

ಮುಂಡಗೋಡ ತಾಲೂಕಿನ ಚಿಗಳ್ಳಿ ಆಣೆಕಟ್ಟು ಒಡ್ಡು ಒಡೆದಿದ್ದು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಇಂದು ಬೆಳಿಗ್ಗೆ ಭೇಟಿ ನೀಡಿದ್ದರು

ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿ ಜಲಾಶಯದ ಒಡ್ಡು ಒಡೆದು ಅಕ್ಕ-ಪಕ್ಕದ ಗದ್ದೆಗಳಿಗೆ ಅಪಾರ ಪ್ರಮಾಣದ ಜಲ ಹರಿದು ಸುಮಾರು ೫ ಸಾವಿರ ಎಕರೆ ಕೃಷಿ ಭೂಮಿ ಮುಳುಗಡೆಯಾಗಿ ಬಹಳಷ್ಟು ಹಾನಿಯುಂಟು ಮಾಡಿದೆ.  ಈ ಸ್ಥಳದ ಪರಿಶೀಲನೆ ನಡೆಸಲು ಸನ್ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಇಂದು ಬೆಳಿಗ್ಗೆ ಭೇಟಿ ನೀಡಿದ್ದರು.

ಈ ವೇಳೆ ಮಾನ್ಯ ಸಂಸದರು ಅಧಿಕಾರಿಗಳಿಗೆ ಆಣೆಕಟ್ಟಿನ ಉಳಿದ ಭದ್ರತೆ ಹಾಗು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಸೂಚಿಸಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ - ಬಿಜೆಪಿ, ಶ್ರೀ ಗುಡ್ಡಪ್ಪ - ತಾಲೂಕ ಅಧ್ಯಕ್ಷರು - ಬಿಜೆಪಿ, ತಹಶೀಲ್ದಾರರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts