Latest News

Happenings & Events

ಉತ್ತರ ಕನ್ನಡ ಕ್ಷೇತ್ರದ ಹಳಿಯಾಳ ತಾಲೂಕಿನ ಹಂಪೆನಹಳ್ಳಿ ಹಾಗು ಜನಗ ಗ್ರಾಮಗಳಿಗೆ ಶ್ರೀ ಅನಂತಕುಮಾರ ಹೆಗಡೆಯವರು ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯ ಅವಲೋಕನೆ ನಡೆಸಿದರು

ಉತ್ತರ ಕನ್ನಡ ಕ್ಷೇತ್ರದ ಹಳಿಯಾಳ ತಾಲೂಕಿನ ಹಂಪೆನಹಳ್ಳಿ ಹಾಗು ಜನಗ ಗ್ರಾಮಗಳಲ್ಲಿ, ನೆರೆ ಹಾವಳಿಗೆ ತುತ್ತಾದ ಸಂತ್ರಸ್ತರನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ನಿನ್ನೆಯ ದಿನ ಭೇಟಿ ಮಾಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕನೆ ನಡೆಸಿದರು.

 ಅಲ್ಲಿನ ಜನರೊಂದಿಗೆ ಮಾತನಾಡಿ ಅವರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು.  

ಮುಂದುವರಿದು,  ಇದೆ ಸಂದರ್ಭದಲ್ಲಿ ಮಾನ್ಯ ಸಂಸದರು ಹಳಿಯಾಳದ ವೀಕ್ಷಣಾ ಮಂದಿರದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ನಡಿಸಿದರು.

ಈ ಸಂದರ್ಭದಲ್ಲಿ ಶ್ರೀ ಸುನಿಲ್ ಹೆಗಡೆ, ಮಾಜಿ ಶಾಸಕರು - ಹಳಿಯಾಳ, ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ - ಬಿಜೆಪಿ, ಶ್ರೀ ಶಿವಾಜಿ, ತಾಲೂಕು ಅಧ್ಯಕ್ಷರು - ಬಿಜೆಪಿ, ಮಂಗೇಶ ದೇಶಪಾಂಡೆ, ಮುಖಂಡರು   ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts