Latest News

Happenings & Events

ದೀಪವಾಳಿಯ ಶುಭಾಶಯಗಳು !!!

ಹಬ್ಬಗಳು ನಮ್ಮ ಪೂರ್ವಿಕರ ಅದ್ಭುತ ಆಚರಣೆ.  ಹಬ್ಬವು ನಮ್ಮ ಎಂದಿನ ನೀರಸ ಬದುಕನ್ನು ಪುಳಕಿತಗೊಳಿಸುತ್ತದೆ.  ಈ ಹಬ್ಬಗಳ ಆಚರಣೆಯ ಹಿಂದೆ ಪುರಾಣ, ಇತಿಹಾಸ, ಉದಾತ್ತ ಆಶಯಗಳು, ಜೀವನೋತ್ಸಾಹ, ಆಟ-ಪಾಠ-ಆಹಾರ ಎಲ್ಲವೂ ಸಾಂದರ್ಭಿಕ ಹಾಗೂ ಅರ್ಥಪೂರ್ಣವಾಗಿ ಬೆರೆತುಕೊಂಡಿವೆ. 

ನಮ್ಮ ಹಿರಿಕರು, ನಮ್ಮೆಲ್ಲ ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ.  

ಅಲ್ಲದೆ, ನಮ್ಮ ಬದುಕನ್ನು ಆಸಕ್ತಿಕರವಾಗಿಸಲು ಸಹ, ಹತ್ತು ಹಲವು ಹಬ್ಬಗಳನ್ನು ಆಚರಣೆಗೆ ತಂದಿದ್ದಾರೆ.

ಅಸತೋಮ ಸದ್ಗಮಯ| ತಮಸೋಮಾ ಜ್ಯೋತಿರ್ಗಮಯ 

ಮೃತ್ಯೋರ್ಮಾ ಅಮೃತಂಗಮಯ|

ಓಂ ಶಾಂತಿ ಶಾಂತಿ ಶಾಂತಿಃ||

ಹೀಗೆ ಅಜ್ಞಾನವೆಂಬ ಅಂಧಕಾರವನ್ನು, ಸುಜ್ಞಾನವೆಂಬ ಬೆಳಕಿನಿಂದ ಹೋಗಲಾಡಿಸುವ ಹಬ್ಬವೇ ದೀಪಾವಳಿ.   ಈ ಹಬ್ಬವು ಅಸುರ ಗುಣಗಳ ಮೇಲೆ ದೇವತ್ವದ ವಿಜಯದ ಪ್ರತೀಕವೂ ಆಗಿದೆ.   ಇಂತಹ ವಿಶಿಷ್ಟ ದಿನದಂದು ನಮ್ಮ ಮನಸ್ಸಿನ ಅಜ್ಞಾನದ ಕತ್ತಲನ್ನು ದೂರ ಮಾಡುವಂತಹ ಜ್ಞಾನ-ದೀಪವನ್ನು ಬೆಳಗಿಸಿಕೊಳ್ಳಬೇಕು.

ದೀಪವಳಿಯ ಅಮಾವಾಸ್ಯೆಯು ಅಜ್ಞಾನವೆಂಬ ಅಂಧಕಾರದ ಪ್ರತೀಕವಾಗಿದೆ.  ಆಧ್ಯಾತ್ಮಿಕ ಭಾಷೆಯಲ್ಲಿ ಕತ್ತಲನ್ನು ಅಜ್ಞಾನವೆಂದು ಕರೆಯುತ್ತಾರೆ. 

ಇಂದಿನ ಈ ಶುಭ ಪರ್ವದಂದು ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲಿನಿಂದ ಬೆಳಕಿನಡೆಗೆ, ಮೃತ್ಯುವಿನಿಂದ ಅಮರತ್ವದೆಡೆಗೆ ಹೋಗುವ ಶಕ್ತಿಯನ್ನು ಮಹಲಕ್ಷ್ಮಿಯು ನಮ್ಮೆಲರಲ್ಲಿ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ!!!

#ಅನಂತಕುಮಾರಹೆಗಡೆ

Related posts