Latest News

Happenings & Events

ಪ್ರಗತಿ ಪರಿಶೀಲನಾ ಸಭೆ

ಬುಧವಾರದಂದು ಮಾನ್ಯ ಸಂಸದರಾದ ಅನಂತಕುಮಾರ ಹೆಗಡೆಯವರು ಕುಮಟಾದ ಕರ್ನಾಟಕ ವಿಕಾಸ ಗ್ರಾಮೀಣ್ ಬ್ಯಾಂಕಿನ ಸಭಾ ಭವನದಲ್ಲಿ ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್ ಅಶೋಕ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಭಾಗವಹಿಸಿದರು.

ಈ ಕೆಳಕಂಡಂತ ವಿಷಯಗಳ ಬಗ್ಗೆ  ಮಾನ್ಯ ಸಂಸದರು ಮಾನ್ಯ ಸಚಿವರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು-

೧. ಜಿಲ್ಲೆಯ ಕರಾವಳಿ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಸಂಸದರು ಅಸಮಧಾನ ವ್ಯಕ್ತಪಡಿಸಿದರು. 

೨. ಸಭೆಯಲ್ಲಿ ಮಾತನಾಡಿದ ಮಾನ್ಯ ಸಂಸದರು ಮುಂದಿನ 60 ದಿನಗಳೊಳಗೆ ಎಲ್ಲಾ ಅಗತ್ಯ ಕೆಲಸಗಳು ಮುಗಿಯಬೇಕು, ವಾರಕ್ಕೊಮ್ಮೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಕಾಮಗಾರಿಯ ಪ್ರಗತಿ ವಿವರಗಳನ್ನು ತಿಳಿಸಬೇಕು, ಹಾಗೂ ಈವರೆಗೆ ಪ್ರಾಧಿಕಾರಕ್ಕೆ ಕಳುಹಿಸಲಾದ ಭೂಸ್ವಾಧೀನ ಮತ್ತು ಇನ್ನಿತರ ಪ್ರಸ್ತಾವನೆಗಳ ಸ್ಥಿತಿಗತಿಯ ಕುರಿತು ಜನವರಿ ತಿಂಗಳ ಅಂತ್ಯದೊಳಗೆ ಜಿಲ್ಲಾಧಿಕಾರಿಗಳ ಕಛೇರಿಗೆ ಸಂಪೂರ್ಣ ವರದಿ ಸಲ್ಲಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

೩. ಆವರ್ಸಾ, ಶಿರಾಲಿ, ಹಳದೀಪುರ, ಭಟ್ಕಳ, ಕರ್ಕಿ, ಹೊನ್ನಾವರದಲ್ಲಿ ಹೆದ್ದಾರಿ ಅಗಲವನ್ನು 30 ರಿಂದ 45 ಮೀಟರ್ ಗೆ ವಿಸ್ತರಿಸಿ ಚತುಷ್ತಥ ಹೆದ್ದಾರಿ ನಿರ್ಮಿಸಲು ಈ ಹಿಂದೆ ಸಭೆ ಸೇರಿ ನಡಾವಳಿಯನ್ನು ರಚಿಸಲಾಗಿದ್ದರು, ಇಲ್ಲಿಯವರೆಗೂ ಏಕೆ ಕ್ರಮ ಕೈಗೊಂಡಿಲ್ಲ? ಈ ಕಾಮಗಾರಿಗೆ ಅವಶ್ಯವಿರುವ ಜಾಗದ ಕುರಿತು ಪ್ರಸ್ತಾವನೆಯನ್ನು ಏಕೆ ರಾಜ್ಯ ಸರ್ಕಾರಕ್ಕೆ ಕಳುಹಿಸಿಲ್ಲ? ಎಂದು ಸಭೆಯಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಾನ್ಯ ಸಂಸದರು  ಕಾರಣ ಕೇಳಿದರು.

೪.ಜಿಲ್ಲೆಯಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ಕಾಮಗಾರಿ ಒಂದೊಂದು  ಕಡೆ ಒಂದೊಂದು ರೀತಿಯಲ್ಲಿ ನಡೆಯುತ್ತಿದೆ. ಆವರ್ಸಾ, ಹಳದೀಪುರ, ಹೊನ್ನಾವರ, ಶಿರಾಲಿ, ಕರ್ಕಿ, ಭಟ್ಕಳದಲ್ಲಿ ಹೆದ್ದಾರಿಯ ಅಗಲ ಕಡಿಮೆಯಾಗಿ, ಸರ್ವೀಸ್ ರಸ್ತೆ ಇಲ್ಲದೇ ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹಾಗಾಗಿ ಹೆದ್ದಾರಿ ಅಗಲೀಕರಣ ಹಾಗೂ ಸರ್ವೀಸ್ ರಸ್ತೆ ನಿರ್ಮಾಣದ ಕುರಿತು ಗಮನ ಹರಿಸಿ ತುರ್ತಾಗಿ ಕಾಮಗಾರಿ ಮುಗಿಸುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಸಂಸದರು ತಿಳಿಸಿದರು.

೫. ಇ-ಸ್ವತ್ತಿನಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆ ಉಂಟಾಗುತ್ತಿದ್ದು ಆಸ್ತಿ ವಿಲೇವಾರಿ ಹಾಗೂ ಮಾರಾಟ ಪ್ರಕ್ರಿಯೆ, ಮನೆ ಸಾಲ ಮಂಜೂರಾತಿ ಹಾಗೂ ಮನೆ ನಿರ್ಮಾಣ ಕಾರ್ಯಗಳಿಗೆ ಅಡಚಣೆ ಆಗುತ್ತಿದೆ. ಜನಸಾಮಾನ್ಯರಿಗೆ ಅನುಕೂಲವಾಗುಂತೆ ಇ-ಸ್ವತ್ತು ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಸೂಕ್ತ ಕಾನೂನನ್ನು ರಚಿಸಬೇಕು ಹಾಗೂ ಇ-ಸ್ವತ್ತು ಸಮಸ್ಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಂದಾಯ ಸಚಿವರಾದ ಶ್ರೀ ಆರ್.ಅಶೋಕ ಅವರಲ್ಲಿ ಮಾನ್ಯ ಸಂಸದರು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕಾನೂನು ರಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀ ಸುನಿಲ್ ನಾಯ್ಕ್, ಮಾನ್ಯ ಶಾಸಕರು - ಭಟ್ಕಳ, ಶ್ರೀಮತಿ  ರೂಪಾಲಿ ನಾಯ್ಕ್ , ಮಾನ್ಯ ಶಾಸಕರು - ಕಾರವಾರ, ಡಾ ಹರೀಶ ಕುಮಾರ, ಜಿಲ್ಲಾಧಿಕಾರಿ - ಉತ್ತರಕನ್ನಡ, ಶ್ರೀ ರೋಷನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ - ಜಿಲ್ಲಾ ಪಂಚಾಯತ್ ಮುಂತಾದವರು ಉಪಸ್ಥಿತರಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts