Latest News

Happenings & Events

ಕೋವಿಡ್-19 ಕುರಿತು ಪ್ರಮುಖ ಅಧಿಕಾರಿಗಳ ಸಭೆ

ಇಂದು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ  ಹೆಗಡೆಯವರ ಅಧ್ಯಕ್ಷತೆಯಲ್ಲಿ ಕೋವಿಡ್-19 ಕುರಿತು ಪ್ರಮುಖ ಅಧಿಕಾರಿಗಳ ಸಭೆಯು ಭಟ್ಕಳದ ತಹಸೀಲ್ದಾರ್ ಕಚೇರಿಯಲ್ಲಿ ನಡೆಯಿತು. 

ಇಷ್ಟುದಿನಗಳ ಕಾಲ ಪ್ರತಿ ದಿನವೂ ಮಾನ್ಯ ಸಂಸದರು ಜಿಲ್ಲೆಯಲ್ಲಿ ನಡೆಯುತ್ತಿದ್ದ ಎಲ್ಲ ಕಾರ್ಯಗಳನ್ನು ಅವಲೋಕಿಸಿ  ಜಿಲ್ಲಾಧಿಕಾರಿಗಳು ಹಾಗು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ  ಈ ಮಹಾಮಾರಿಯ ವಿರುದ್ಧ ಗೆಲ್ಲುವ ನಿಟ್ಟಿನಲ್ಲಿ ಬೇಕಾದ ಎಲ್ಲ ಕ್ರಮ ಹಾಗು ವ್ಯವಸ್ಥೆಯ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ತಗೆದುಕೊಳ್ಳಲಾಗಿತ್ತು.

ಮೊದಲನೇ ಹಂತದಲ್ಲಿ ಭಟ್ಕಳದಲ್ಲಿ  ಸಂಭವಿಸಿದ್ದ ೧೧ ಕೊರೋನಾ ಪ್ರಕರಣಗಳಲ್ಲಿ ೧೧ ಜನರು ಗುಣಮುಖರಾಗಿ ಡಿಸ್ಚಾರ್ಜಗಿದ್ದರು. ಆದರೂ ಕಳೆದ ೨- ೩ ದಿನಗಳಲ್ಲಿ ಮತ್ತೆ ಕೊರೋನಾ  ಪ್ರಕರಣಗಳು ಕಂಡುಬಂದಿದ್ದು ಆತಂಕ ಉಂಟುಮಾಡಿದ್ದು,  ಇತ್ತೀಚಿಗಿನ ೮ - ೧೦ ದಿನಗಳಿಂದ ನಡೆಯುತ್ತಿರುವ ಚಟುವಟಿಕೆಗಳ ಮಾಹಿತಿಯನ್ನು ಗಮನಿಸಿ ಈ ಎಲ್ಲ ಮಾಹಿತಿಯನ್ನು ಸಂಸದರು ಸಭೆಯಲ್ಲಿ ನೆರೆದಿರುವ ಅಧಿಕಾರಿಗಳಿಗೆ ಹಾಗು ಮೇಲಿನ ಅಧಿಕಾರಿಗಳಿಗೆ ನೀಡಿದರು. 

ಈ ಸಂದರ್ಭದಲ್ಲಿ ಕಾರವಾರದಿಂದ Video Conference ಮೂಲಕ ಜಿಲ್ಲಾಧಿಕಾರಿಗಳಾದ ಡಾ|| ಕೆ. ಹರೀಶ್ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಶಿವಪ್ರಕಾಶ್ ದೇವರಾಜು ಭಾಗವಹಿಸಿದರು.

ಸಭೆಯಲ್ಲಿ ಭಟ್ಕಳದ ಶಾಸಕರಾದ ಶ್ರೀ ಸುನೀಲ ನಾಯ್ಕ್, ಭಟ್ಕಳ ಉಪ ವಿಭಾಗಾಧಿಕಾರಿಗಳು, ಜಿಲ್ಲಾ ಕುಟುಂಬ ಮತ್ತು ಆರೋಗ್ಯಾಧಿಕಾರಿಗಳು, ಭಟ್ಕಳ ತಹಸೀಲ್ದಾರ, ಭಟ್ಕಳ DYSP, ತಾಲೂಕಾ ವೈದ್ಯಾಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts