Latest News

Happenings & Events

ಕೆಂಪೇಗೌಡ ಕಟ್ಟಿದ ಬೆಂಗಳೂರಿನ ಹನ್ನೊಂದು ರಸ್ತೆಗಳಿಗೆ ಮುಸ್ಲಿಮರ ಹೆಸರಿಡುವ ಇಸ್ಲಾಮಿಕ್ ಪಿತೂರಿ...!

ಕೆಂಪೇಗೌಡ ಕಟ್ಟಿದ ಬೆಂಗಳೂರಿನ ಹನ್ನೊಂದು ರಸ್ತೆಗಳಿಗೆ ಮುಸ್ಲಿಮರ ಹೆಸರಿಡುವ ಇಸ್ಲಾಮಿಕ್ ಪಿತೂರಿ...!  

ಮುಸ್ಲಿಮರ ಓಲೈಕೆ... ಭಾರತದಲ್ಲಿ ಇದೊಂದು ರೀತಿಯ ಪಿಡುಗಿನಂತೆ ಹಬ್ಬಿದೆ.. ಈ ಅಸಹ್ಯಕ್ಕೆ  ಶತಮಾನದ ಇತಿಹಾಸವಿದೆ. ಇದರ ಹಿಂದೆ ಲಜ್ಜೆ ಗೇಡಿ ಕಾಂಗ್ರೆಸ್ಸಿನ ಕೈವಾಡವಿದೆ, ಕಮ್ಯುನಿಸ್ಟರ ಪಿತೂರಿಯಿದೆ ಮತ್ತು ಸೋಗಲಾಡಿ ಜಾತ್ಯಾತೀತರ ಭಾನಗಡಿಯಿದೆ. ಬಹುಸಂಖ್ಯಾತರ ಭಾವನೆಗಳಿಗೆ ಕಿಂಚಿತ್ತೂ ಬೆಲೆಕೊಡದ ಅಧಿಕಾರಶಾಹಿಯ ಧಾರ್ಷ್ಟ್ಯವಿದೆ. ರಸ್ತೆಗಳಿಗೆ, ಬಡಾವಣೆಗಳಿಗೆ, ಸಾರ್ವಜನಿಕ ಸ್ಥಳಗಳಿಗೆ ಹೆಸರಿಡುವಲ್ಲಿಯೂ ಈ ಮುಸ್ಲಿಂ ಓಲೈಕೆ ಎಂಬ ಅಸಹ್ಯವನ್ನು ಬಹುಸಂಖ್ಯಾತರು ಬಹುಕಾಲದಿಂದ ಸಹಿಸಿಕೊಂಡು ಬಂದಿದ್ದಾರೆ... ಇದರ ವಿರುದ್ಧ ಬಹುಸಂಖ್ಯಾತರು ಅದೆಷ್ಟು ಬಾರಿ ಪ್ರತಿಭಟಿಸಿದರೂ ಮತ್ತೆ ಮತ್ತೆ ಇಂಥದ್ದು ಆಗುತ್ತಲೇ ಇದೆ... ಈಗ ಮತ್ತೊಮ್ಮೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಲ ರಸ್ತೆಗಳಿಗೆ ಸಾರಾಸಗಟಾಗಿ ಮುಸ್ಲಿಂ ಹೆಸರಿಡುವುದಕ್ಕೆ ಪಿತೂರಿ ನಡೆದಿರುತದೆ.. ಕೆಂಪೇಗೌಡ ಕಟ್ಟಿದ ಬೆಂಗಳೂರಿನ ಚಹರೆಯನ್ನೇ ಬದಲಿಸುವ ಹುನ್ನಾರ ನಡೆದಿದೆ.  ವಾಡಿಕೆಯಂತೆ ಇದರ ಹಿಂದೆ ಜಾತ್ಯಾತೀತ ಎಂಬ ಮುಸುಕಿನ ಸೋಗಲಾಡಿಗಳಿದ್ದಾರೆ. 

ಸಂಸದ ಶ್ರೀ ಅನಂತಕುಮಾರ ಹೆಗಡೆಯವರ ಗಮನಕ್ಕೆ ಈ ವಿಚಾರ ಬಂದ ಕೂಡಲೇ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರಿಗೆ ಈ ಪಿತೂರಿಯನ್ನು ತಡೆಯಲು ಮನವಿ ಪತ್ರ ಬರೆಯಲಾಗಿತ್ತು.....

ಈ ಮಧ್ಯೆ ....

ಬಿಬಿಎಂಪಿ ಆಯುಕ್ತರು ಈಗಾಗಲೇ ತಾನು ಹೊರಡಿಸಿರುವ ಸುತ್ತೋಲೆಯನ್ನು ರದ್ದುಗೊಳಿಸಲು ಬಿಬಿಎಂಪಿಯ ಚುನಾಯಿತ ಪ್ರತಿನಿಧಿ ಮಂಡಳಿಯನ್ನು ಕೋರಿದ್ದಾರೆ....(ಆದರೆ  ಇನ್ನು ಅಧಿಕೃತವಾಗಿ ರದ್ದುಗೊಳಿಸಿಲ್ಲಾ)...

ಆದಾಗಿಯೂ, ಈ ವಿಷಯದಲ್ಲಿ ಸಕಾಲಿಕವಾಗಿ ಮಧ್ಯಪ್ರವೇಶಿಸಿ ಬಹುಸಂಖ್ಯಾತ ಸಮಾಜದ ಭಾವನೆಗಳಿಗೆ ಗೌರವ ಕೊಟ್ಟ  ಸನ್ಮಾನ್ಯ ಮುಖ್ಯಮಂತ್ರಿಗಳಿಗೂ... ಹಾಗು ಬೆಂಬಲ ಸೂಚಿಸಿದ ಸನ್ಮಾನ್ಯ ಲೋಕಸಭಾ ಸದಸ್ಯರುಗಳು, ಎಲ್ಲಾ ಬಿಜೆಪಿಯ ಶಾಸಕರು, ಬಿಜೆಪಿಯಾ ಎಲ್ಲಾ ಕಾರ್ಪೊರೇಟರುಗಳು, ಎಲ್ಲಕಿಂತ ಹೆಚ್ಚಾಗಿ, ಕ್ಷಿಪ್ರವಾಗಿ ಸ್ಪಂದಿಸಿದ ಹಿಂದೂ ಯುವಸಮೂಹಕ್ಕೆ, ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ, ಹೃತ್ಪೂರ್ವಕ ಧನ್ಯವಾದಗಳು....

ಬಂಧುಗಳೇ , ಬೆಂಗಳೂರಿನ ಮುಸಲ್ಮಾನರ ಈ ಚಾಲಾಕಿತನ, ಇದು ಮೊದಲನೆಯದೇನಲ್ಲಾ ... ಏಏಏ ಹಿಂದೆಯೂ ಹಲವಾರು ಬಾರಿ ಅವರು ತಮ್ಮ ಮತೀಯ  ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.... 

ಬಿಬಿಎಂಪಿಯ ಪಾದರಾಯನ ಪುರ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶ. ಇಲ್ಲಿನ ವಾರ್ಡ್ ನಂಬರ್ ೧೩೫ ರಲ್ಲಿ  ಇಮ್ರಾನ್ ಪಾಶ ಕಾರ್ಪೊರೇಟರ್. ಕೊರೋನಾ ಸಂದರ್ಭದಲ್ಲಿ ಪಾದರಾಯನ ಪುರದಲ್ಲಿ ನಡೆದ ಹಿಂಸಾಚಾರದ ಹಿಂದೆಯೂ ಈತನ ಕೈವಾಡವಿದ್ದ ಸಂಶಯವಿದೆ. ಬಳಿಕ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಸಾರ್ವಜನಿಕರಿಗೆ ಖಾಯಿಲೆ ಹರಡುವ ರೀತಿ ವರ್ತಿಸಿದ್ದಕ್ಕೆ ಈತನ ಬಂಧನವಾಗಿತ್ತು. ಇಂಥಾ ಇಮ್ರಾನ್ ಪಾಷಾ ಪ್ರತಿನಿಧಿಸುವ ವಾರ್ಡ್ ನಂಬರ್ ೧೩೫ ರ ವ್ಯಾಪ್ತಿಯಲ್ಲಿ ಬರುವ ರಸ್ತೆಗಳಿಗೆ, ಸಾರ್ವಜನಿಕ ಸ್ಥಳಗಳಿಗೆ ಮರುನಾಮಕರಣ ಮಾಡುವ ಪ್ರಯತ್ನ ಸದ್ದಿಲ್ಲದೆಯೇ ನಡೆಸಿದ್ದ...  

ಈ ಪಿತೂರಿ ಹಿಂದಿನ ಬಹುದೊಡ್ಡ ಷಡ್ಯಂತ್ರವೊಂದರ ಭಾಗ.. ಹೀಗಿದೆ....

  1. ಪಾದರಾಯನ ಪುರದ ಎಚ್ ಎಂ ರಸ್ತೆಯ ವೃತ್ತಕ್ಕೆ ಪೆಹಲ್ವಾನ್ ಫಾರೂಕ್ ಪಾಷಾ ಸಾಬ್ ಸರ್ಕಲ್,
  2. ಪಾದರಾಯನ ಪುರದ ೧೦ನೇ ಅಡ್ಡ ರಸ್ತೆಗೆ   ಪೆಹಲ್ವಾನ್ ಫಾರೂಕ್ ಪಾಷಾ ಸಾಬ್ ರಸ್ತೆ
  3. ಪಾದರಾಯನ ಪುರದ ೭ನೇ ಅಡ್ಡ ರಸ್ತೆಗೆ   ಟೋಪಿ ರಫೀಕ್ ಸಾಬ್ ರಸ್ತೆ  
  4. ಪಾದರಾಯನ ಪುರದ ೭ನೇ ಮುಖ್ಯ ರಸ್ತೆಗೆ   ರೋಷನ್ ಫಯಾಜ್ ಸಂಗಮ ಸರ್ಕಲ್
  5. ಪಾದರಾಯನ ಪುರದ ೯ನೇ ಅಡ್ಡ ರಸ್ತೆಗೆ   ಆಲೀಲ್ ಪಟೇಲ್ ರಸ್ತೆ
  6. ವಿನಾಯಕ ನಗರದ  ೭ ನೇ ಅಡ್ಡ ರಸ್ತೆಗೆ    ಎಲ್ಡಿರ್ ಬಾಬು ಸಾಬ್ ರಸ್ತೆ
  7. ಪಾದರಾಯನ ಪುರದ ೮ ನೇ ಮುಖ್ಯ ರಸ್ತೆಗೆ    ಹಾಜೀ ಹಬೀಬ್ ಬೇಗ್ ರಸ್ತೆ
  8. ಪಾದರಾಯನ ಪುರ ೧೧ನೇ ಸಿ ಅಡ್ಡ ರಸ್ತೆಗೆ ಹಾಜೀ ವಜೀರ್ ಸಾಬ್ ರಸ್ತೆ
  9. ಪಾದರಾಯನ ಪುರ ೯ನೇ ಅಡ್ಡ ರಸ್ತೆಗೆ  ಹಾಜೀ ಶಾಮಿರ್ ಸಾಬ್ ರಸ್ತೆ
  10. ಪಾದರಾಯನ ಪುರ ೧೩ನೇ ಸಿ ಅಡ್ಡ ರಸ್ತೆಗೆ  ಹಾಜೀ ದಸ್ತಗೀರ್ ರಸ್ತೆ
  11. ಪಾದರಾಯನ ಪುರದ ೮ ನೇ ಮುಖ್ಯ ರಸ್ತೆಗೆ  ಹಾಜೀ ನೂರ್ ಸಾಬ್ ರಸ್ತೆ

ಹೀಗೆ ಎಲ್ಲಾ ಹನ್ನೊಂದು ರಸ್ತೆಗಳಿಗೂ ಸಾಲಾಸಾಲು ಮುಸ್ಲಿಮರ ಹೆಸರನ್ನೇ ಇಡುವ ಹುನ್ನಾರ ನಡೆದಿದ್ದು....! ಸೆಪ್ಟೆಂಬರ್ ೮ ನೇ ತಾರೀಕಿಗೆ ನಡೆದಿರುವ ಬಿಬಿಎಂಪಿ ಸಭೆಯಲ್ಲಿ ಈ ಎಲ್ಲಾ ಹನ್ನೊಂದು ಸ್ಥಳಗಳಿಗೆ ಮರುನಾಮಕರಣ ಮಾಡುತ್ತಿರುವ ಹೆಸರುಗಳೆಲ್ಲಾ ಸಮಾಜಸೇವಕರುಗಳ ಹೆಸರು ಅಂತ ಒಪ್ಪಿಕೊಂಡೂ ಆಗಿದೆ..! ಹಾಗಾದರೆ ಪಾದರಾಯನಪುರದಲ್ಲಿ ಮುಸ್ಲಿಮರನ್ನು ಬಿಟ್ಟರೆ ಬೇರೆ ಮತ ಧರ್ಮದ ಸಮಾಜ ಸೇವಕರು ಯಾರೂ ಇಲ್ಲವೇ..? ಪಾದರಾಯನಪುರದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚು, ಅಲ್ಲಿನ ಕಾರ್ಪೊರೇಟರ್ ಕೂಡಾ ಮುಸ್ಲಿಮನೇ, ಹಾಗಾಗಿ ಇದ್ದಬದ್ದ ರಸ್ತೆಗಳಿಗೆಲ್ಲ ಮುಸ್ಲಿಮರ ಹೆಸರನ್ನೇ ಇಡಬೇಕು ಅನ್ನೋದೇ ಬಿಬಿಎಂಪಿಯ ಲಾಜಿಕ್ ಆದರೆ ಮುಂದಿನ ಬಾರಿ ಪಾದರಾಯನಪುರ ಎಂಬ ಹೆಸರನ್ನೇ ಬದಲಿಸಬೇಕು ಎಂಬ ಬೇಡಿಕೆ ಇಟ್ಟರೆ..? ಪಾದರಾಯನ ಪುರ ಇರೋ ಜಗಜೀವನರಾಮ್ ನಗರದಲ್ಲಿಯೂ ಮುಸ್ಲಿಮರೇ ಹೆಚ್ಚುಸಂಖ್ಯೆಯಲ್ಲಿ ಇದ್ದಾರೆ ಅನ್ನೋ ನೆಪ ಹೇಳಿ ತಮಗೆ ಈ "ಜಗಜೀವನರಾಮ್" ಎಂಬ ಹೆಸರು ಬೇಡ ಯಾಕೆಂದರೆ ಅದರಲ್ಲಿ ಹಿಂದೂ ದೇವರಾದ ರಾಮನ ಹೆಸರಿದೆ... ಅದಕ್ಕೋಸ್ಕರ ಅದನ್ನು ಬದಲಿಸಬೇಕು ಅಂತ ಬೇಡಿಕೆಯಿಟ್ಟರೆ ಬಿಬಿಎಂಪಿ ಏನು ಮಾಡುತ್ತದೆ...?  ಶಿವಾಜಿನಗರದಲ್ಲೂ ಮುಸ್ಲಿಮರೇ ಹೆಚ್ಚಿದ್ದಾರೆ, ಹಾಗಾಗಿ ಶಿವಾಜಿನಗರ ಎಂಬ ಹೆಸರನ್ನೇ ಬದಲಿಸಿ "ಶಾಹಿಸ್ತೇ ಖಾನ್ ನಗರ" ಅಂತ ಇದೇ ರೀತಿ  ಅಂತ ಅರ್ಜಿ ಸಲ್ಲಿಸಿದರೆ ಏನಾಗಬಹುದು..? 

ಮುಸ್ಲಿಮರ ಜನಸಂಖ್ಯೆ ಹೆಚ್ಚು ಇರುವ ಪ್ರದೇಶಗಳಲ್ಲಿ ಬಿಬಿಎಂಪಿ ರಸ್ತೆಗಳಿಗೆ, ವೃತ್ತಗಳಿಗೆ, ಸಾರ್ವಜನಿಕ ಸ್ಥಳಗಳಿಗೆ ಮುಸ್ಲಿಂ ಹೆಸರಿಡೋ ಪ್ರಯತ್ನ  ಈ ಹಿಂದೆಯೂ ಹಲವು ಬಾರಿ ನಡೆದಿತ್ತು.  ಬಾಪೂಜೀ ನಗರದಲ್ಲಿಯೂ ಮುಸ್ಲಿಮರ ಜನಸಂಖ್ಯೆ ಹೆಚ್ಚು. ಇಲ್ಲಿನ ಕಾರ್ಪೊರೇಟರ್ ಅಜ್ಮದ್ ಬೇಗ್ ರಸ್ತೆಗಳಿಗೆ ತನ್ನ ತಂದೆ ತಾಯಿಯ ಹೆಸರನ್ನೇ ಇಡಲು ಹೊರಟಿದ್ದ.!

ಶಾಮಣ್ಣ ಗಾರ್ಡನ್ ಅಂಡರ್ ಪಾಸ್ ರಸ್ತೆಗೆ “ಗಪೂರ್ ರಸ್ತೆ ಮತ್ತು ಪೈಪ್‍ಲೈನ್ ರೈಲ್ವೆ ಗೇಟ್ ಅಂಡರ್‍ಪಾಸ್ ನಿಂದ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಮಿಷಿನ್ ಎಚ್ ಸ್ವೀಟ್ ರಸ್ತೆಗೆ ಫಾತಿಮಾ ಬೀ ಬಡಾವಣೆ ಎಂದು ಹೆಸರಿಡಲು ಪಾಲಿಕೆಯಲ್ಲಿ ಅನುಮೋದನೆ ಕೂಡಾ ಸಿಕ್ಕಿತ್ತು..! ಈ ಪೈಕಿ ಗಫೂರ್ ಮತ್ತು ಫಾತಿಮಾ ಬೀ ಯಾರು ಅಂತ ತಿಳಿದರೆ ನಿಮಗಾಶ್ಚರ್ಯವಾದೀತು!  ಅವರಿಬ್ಬರೂ ಕಾರ್ಪೊರೇಟರ್ ಅಜ್ಮದ್ ಬೇಗ್ ನ ತಂದೆ ತಾಯಿ..! ಈಗಾಗಿರುವಂತೆ ಆಗ ಕೂಡಾ ಏಳು ಸ್ಥಳಗಳಿಗೆ ಎಲ್ಲಾ ಮುಸ್ಲಿಂ ಹೆಸರುಗಳನ್ನೇ ಇಡುವ ಕುತಂತ್ರ ನಡೆದಿತ್ತಾದರೂ ಬಿಜೆಪಿ ಕಾರ್ಪೊರೇಟರ್ ಗಳ ಸಕಾಲಿಕ ಮಧ್ಯಪ್ರವೇಶ ದಿಂದ ಈ ಕುತಂತ್ರವೂ ವಿಫಲವಾಗಿತ್ತು..! ಆಗ ಹೆಸರು ಬದಲಿಸಲು ಹೊರಟ ರಸ್ತೆಗಳ ವಿವರ ಕೆಳಗಿನಂತಿದೆ...

  •  ಶಾಮಣ್ಣ ಗಾರ್ಡನ್ ಅಂಡರ್ ಪಾಸ್ ರಸ್ತೆಗೆ ಗಪೂರ್ ರೋಡ್
  •  ಸುನ್ನಿ ಚೌಕ್‍ನಿಂದ ಮೈಸೂರು ರಸ್ತೆವರೆಗಿನ ಪೈಪ್ ಲೈನ್ ರೋಡ್‍ಗೆ ಸುಬಾನಿಯಾ ಮಸೀದಿ ರೋಡ್
  •  ಸಂತೋಷ್ ಟೆಂಟ್‍ನಿಂದ ಶೋಭಾ ಟೆಂಟ್‍ವರೆಗಿನ ರೋಡ್‍ಗೆ ಜಾಮಿಯಾ ಮಸೀದಿ ರೋಡ್
  • ಶಾಮಣ್ಣ ಗಾರ್ಡನ್ 6ನೇ ಕ್ರಾಸ್ ರಸ್ತೆಗೆ ಖುದಾದತ್ ಮಸೀದಿ ರೋಡ್
  • ಬಾಪೂಜಿನಗರ 1ನೇ ಮೇನ್ ರೋಡ್‍ಗೆ ಹೀರಾ ಮಸೀದಿ ರೋಡ್
  • ಪೈಪ್‍ಲೈನ್ ರೈಲ್ವೇ ಗೇಟ್ ಅಂಡರ್ ಪಾಸ್ ನಿಂದ ರಾಗಿ ಮಿಷನ್ ಹೆಚ್ ಸ್ಟ್ರೀಟ್‍ವರೆಗಿನ ಪ್ರದೇಶಕ್ಕೆ ಫಾತೀಮಾ ಬೀ ಬಡಾವಣೆ
  • ಪೈಪ್‍ಲೈನ್ ರಸ್ತೆ, 6ನೇ ಮುಖ್ಯರಸ್ತೆಯಿಂದ ಸ್ಟಾರ್ಮ್‍ವಾಟರ್ ಡ್ರೈನ್‍ವರೆಗಿನ ಪ್ರದೇಶಕ್ಕೆ ಅಮಿರ್ ಕಲಿಮಿ ನಗರ

ಇದಷ್ಟೇ ಅಲ್ಲ. ಕನ್ನಡದ ಕುಲಪುರೋಹಿತ ಎಂದೇ ಕರೆಸಿಕೊಂಡಿರುವ ಶ್ರೀ ಆಲೂರು ವೆಂಕಟರಾಯರ ಹೆಸರಿದ್ದ ರಸ್ತೆಗೆ ಕನ್ನಡ ದ್ರೋಹಿ ಟಿಪ್ಪು ಸುಲ್ತಾನ್ ಹೆಸರಿಡಲು ಕೂಡಾ ಬಿಬಿಎಂಪಿ ಮುಂದಾಗಿತ್ತು..! ಚಾಮರಾಜ ಪೇಟೆಯ ಒಂದನೇ ಮುಖ್ಯ ರಸ್ತೆಗೆ ಈ ಹಿಂದೆ ಆಲ್ಬರ್ಟ್ ವಿಕ್ಟರ್ ರಸ್ತೆ ಅಂತ ಹೆಸರಿತ್ತು .. ಅದನ್ನೆಲ್ಲರೂ ಎ.ವಿ ರೋಡ್ ಅಂತಲೇ ಕರೆಯುತ್ತಿದ್ದರು. ಈ ಬ್ರಿಟಿಷ್ ಹೆಸರಿನ ಬದಲಿಗೆ ಅದೇ  ಎ.ವಿ ರೋಡ್ ಅನ್ನು ಉಳಿಸಿಕೊಂಡೇ ಇರಲು ತೀರ್ಮಾನಿಸಿ ಅದಕ್ಕೆ ಸರಿಹೊಂದುವಂತೆ ಆಲೂರು ವೆಂಕಟರಾಯ ರಸ್ತೆ ಅಂತ ನಾಮಕರಣ ಮಾಡಲಾಗಿತ್ತು. ಆದರೆ ಇದನ್ನು ಬದಲಿಸಲು ಕುತಂತ್ರ ನಡೆದಿತ್ತು. ಈ ರಸ್ತೆಗೆ ಟಿಪ್ಪು ಸುಲ್ತಾನ್ ಅರಮನೆ ರಸ್ತೆ ಅಂತ ನಾಮಕರಣ ಮಾಡುವ ಹುನ್ನಾರ ನಡೆದಿತ್ತು...! ಆದರೆ ಭಾರೀ ಪ್ರತಿಭಟನೆ ವ್ಯಕ್ತವಾದುದರಿಂದ ಈ ಅವಘಡ ತಪ್ಪಿತ್ತು.

ಅದೆಲ್ಲ ಬಿಡಿ... ಈ ಸೋಗಲಾಡಿ ಹೋರಾಟಗಾರರ ಅಸಹ್ಯಕರ ಮುಸ್ಲಿಂ ಓಲೈಕೆಯ ಚಟ ಹೇಗಿದೆಯೆಂದರೆ ಒಂದು ಕಡೆ ಅವರು ಸಾರ್ವಜನಿಕ ಸ್ಥಳಗಳಿಗೆ ಮುಸ್ಲಿಂ ಹೆಸರಿಡುವ ಷಡ್ಯಂತ್ರವನ್ನು ಬೆಂಬಲಿಸುತ್ತಾರೆ... ಅದೇ ವೇಳೆ ಯಲಹಂಕ ಮೇಲುಸೇತುವೆಗೆ ವೀರ್ ಸಾವರಕರ್ ಅವರ ಹೆಸರಿಡಲು ಹೊರಟರೆ ಅದನ್ನು ವಿರೋಧಿಸಿ ಇದೇ ಸೆಕ್ಯುಲರ್ ಮುಖವಾಡದವರು ಹೋರಾಟ  ಮಾಡುತ್ತಾರೆ..! ಆದರೆ ಕನ್ನಡ ಏಕೀಕರಣಕ್ಕಾಗಿ ಶ್ರಮಿಸಿದ ಮಹಾನ್  ಜಾತ್ಯಾತೀತ ಹೋರಾಟಗಾರ ಆಲೂರು ವೆಂಕಟರಾಯರ ಹೆಸರಿರುವ ರಸ್ತೆಗೆ,  ಕರ್ನಾಟಕದಲ್ಲಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡಿದ, ಮೈಸೂರು ರಾಜಕುಟುಂಬವನ್ನು  ಖೈದಿಗಳನ್ನಾಗಿಟ್ಟು ಕನ್ನಡ ನಾಡನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದ ಕನ್ನಡ ದ್ರೋಹಿ ಟಿಪ್ಪುಸುಲ್ತಾನನ ಹೆಸರಿಡಲು ಹೊರಟಾಗ ಬಾಯಿಗೆ ಬೂಸಾ ತುಂಬಿಕೊಂಡು ಮೌನವಾಗಿರುತ್ತಾರೆ... 

ಆದರೂ ಜಾತ್ಯಾತೀತ ಟೋಪಿ ಧರಿಸಿ ಮುಸ್ಲಿಮರ ಓಲೈಕೆಗೆಂದೇ ಪಂಚೆ ಎತ್ತಿಕಟ್ಟುವ ಕೆಲವು ರಾಜಕೀಯ ನಾಯಕರು  ಇಮ್ರಾನ್ ಪಾಷಾನಂಥವರ ತಲೆಸವರುತ್ತಾ ನಿಂತಿರುತ್ತಾರೆ..! ಇದು ಹೀಗೆಯೇ ಮುಂದುವರಿದರೆ ಮುಂದೊಮ್ಮೆ 'ಜಮಾತ್ ದಳವೇ'  ನಮ್ಮನ್ನಾಳುವುದರಲ್ಲಿ ಸಂಶಯವೇ ಇಲ್ಲಾ...!!!!

ಅಂತೆಯೇ... ಬಿಬಿಎಂಪಿ ಆಯುಕ್ತರ ಕೋರಿಕೆಯನ್ನು ಇನ್ನೂ ಬಿಬಿಎಂಪಿ ಚುನಾಯಿತ ಪ್ರತಿನಿಧಿ ಮಂಡಳಿಯು ಒಪ್ಪಬೇಕಲ್ಲ?..

ಕಾದು ನೋಡೋಣ... ಏನೇ ಇರಲಿ... ವೀರ ಕೆಂಪೇಗೌಡರ ಬೆಂಗಳೂರು, ಬೆಂಗಳೂರು ಆಗಿಯೇ ಇರಬೇಕು..ಅದು ಬೇಗಮ್ಮನೂರು ಖಂಡಿತ ಆಗಬಾರದು...

#ಅನಂತಕುಮಾರಹೆಗಡೆ

Related posts