Latest News

Happenings & Events

ಶಿರಸಿಯ ಲಯನ್ಸ್ ಶಾಲೆಯಲ್ಲಿ Routes 2 Roots ಸಂಸ್ಥೆ ಉದ್ಘಾಟನಾ ಸಮಾರಂಭ!

ಇತ್ತೀಚಿಗೆ ಶಿರಸಿಯ ಲಯನ್ಸ್ ಶಾಲೆಯಲ್ಲಿ Routes 2 Roots ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿದರು. 

"ಇತ್ತೀಚಿನ ದಿನದಲ್ಲಿ ಯಾವುದೋ ಒಂದೆರಡು ಶಾಲೆಗಳಿಗೆ ಕಂಪ್ಯೂಟರ್ ಕೊಡುವುದು ಅಥವಾ ಹೊಟ್ಟೆಪಾಡಿಗಾಗಿ ವಿದ್ಯೆಯನ್ನು ಹೇಳಿಕೊಡುವುದು ಒಂದು ಹೊಸ ಟ್ರೆಂಡ್ ಆಗುತ್ತಿದೆ ಆದರೆ..... ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಈ ಸಮಾಜಕ್ಕೆ ಶಕ್ತಿಯನ್ನು ತುಂಬುವ ಕೆಲಸ Routes 2 Roots ನಂತಹ ಕೆಲವೇ ಕೆಲವು ಸಂಸ್ಥೆಗಳಿಂದಾಗುತ್ತಿದೆ.

ಮನುಷ್ಯನಿಗೆ ತೃಪ್ತಿಯನ್ನು ಕೊಡುವಂತದ್ದು ಹೊಟ್ಟೆಯಲ್ಲ, ಬದಲಿಗೆ ಆತನ ಸಂಸ್ಕಾರ" ಎಂದು ಮಾನ್ಯ ಸಂಸದರು ಹೇಳಿದರು.

ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಶಿರಸಿ ತಾಲೂಕಿನ 52 ಸರಕಾರಿ ಶಾಲೆಗಳಿಗೆ ಟಿ.ವಿ ಹಾಗು ವೆಬ್ ಕ್ಯಾಮೆರಾ ನೀಡುವ ಮೂಲಕ ಡಿಜಿಟಲ್ ಕಲಿಕೆಗೆ ಅವಕಾಶ ಮಾಡಲಾಗುತ್ತಿದ್ದು. ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಈ ಅನುಕೂಲ ದೊರೆಯುವಂತಾಗಲಿ ಎಂದು ಮಾನ್ಯ ಸಂಸದರು ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಎಸ್ ಹೆಗಡೆ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಂದನ ಸಾಗರ, Routes 2 Roots ಸಂಸ್ಥೆಯ ಗುರುಪ್ರೀತ್ ಕೌರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು. 

#ಅನಂತಕುಮಾರಹೆಗಡೆ_ಕಾರ್ಯಾಲಯ

Related posts