Outreach

Anant Sampark

Further continuing the programme, “Sampark for Samarthan”, met some more eminent people in their respective homes in Mundgod, yesterday.

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತಾ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಮುಂಡಗೋಡ ನಗರದ ಗಣ್ಯ ವ್ಯಕ್ತಿಗಳ ಮನೆಗೆ ತೆರಳಿ ಕೇಂದ್ರ ಸರ್ಕಾರವು ೪ ವರ್ಷಗಳ ಜನಪರ ಯೋಜನೆಗಳ ಕಿರುಹೊತ್ತಿಗೆಯನ್ನು ನೀಡಿದರು. ದೇಶಾದ್ಯಂತ “ಸಂಪರ್ಕ ಸೆ ಸಮರ್ಥನ್” ಎಂಬ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ೪ ವರ್ಷಗಳ ಸಾಧನೆಗಳನ್ನು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರದ ಗಣ್ಯರಾದ ಡಾ.ಹನುಮಂತ ಸಿಂದಗಿ, ಶ್ರೀ ಶಿವಾಜಿ ಮಟ್ಟಿಮನಿ, ಶ್ರೀ ಸೂರ್ಯಕಾಂತ ರಾಯ್ಕರ್, ಶ್ರೀ ಕೃಷ್ಟಾ ರಜಪೂತ್, ಶ್ರೀ ರವಿ ಹಾವೇರಿ ಇವರುಗಳ ಮನೆಗೆ ತೆರಳಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು ಅಭಿವೃದ್ಧಿಯ ಪಥದಲ್ಲಿ ಹೇಗೆ ಸಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ವಿ ಎಸ್ ಪಾಟೀಲ್, ಬಿ ಜೆ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಎಸಳೆ, ಶ್ರೀ ಎನ್ ಎಸ್ ಹೆಗಡೆ, ಮಂಡಲ ಅಧ್ಯಕ್ಷರಾದ ಶ್ರೀ ಗುಡ್ಡಪ್ಪ ಕಾತೂರ, ಪ್ರಮುಖರಾದ ಶ್ರೀ ಎಲ್ ಟಿ ಪಾಟೀಲ್, ಶ್ರೀ ನಾಗಬೂಷಣ ಹಾವಣಗಿ, ಶ್ರೀ ಫಣಿರಾಜ ಹದಳಗಿ, ಶ್ರೀ ಉಮೇಶ ಬಿಜಾಪುರಿ ಮುಂತಾದವರು ಪಾಲ್ಗೊಂಡಿದ್ದರು.

 

Further continuing the programme, “Sampark for Samarthan”, Union Minister of State for Skill Development & Entrepreneurship, Sri Anantkumar Hegde met some more eminent people in their respective homes in Mundgod, yesterday. The Minister conveyed the achievements of NDA Government for the past 4 years, under the able leadership of our Prime Minister, Shri Narendra Modi.

He visited the residence of Dr. Hanumant Sindagi, Shri Shivaji Mattimani, Shri Suryakanta Raikar, Shri Krishna Rajput and Shri Ravi Haveri, residents of Mundgod.

Shri V S Patil, Ex-MLA Yellapura, Shri Krishna Esale, Shri N S Hegde, Shri Gudappa Katoor, Shri L T Patil, Shri Nagabushan Haavanagi, Shri Phaniraj Hadalagi and Shri Umesh Bijapuri were present on the occasion.

Related posts