Outreach

Anant Sampark

Technical seminar 'Horticulture for Prosperity' held at University of Horticultural Sciences, Bagalkot, yesterday.

"ಭಾರತದಲ್ಲಿ ಶೇಕಡ ೬೦ಕ್ಕೂ ಹೆಚ್ಚು ಜನ ಈ ಮಣ್ಣನ್ನು ನಂಬಿ ಬದುಕುತ್ತಿದ್ದಾರೆ.  ಅವರಿಗೆ ಶಕ್ತಿ ತುಂಬಬೇಕಾದರೆ, ಹೊಸ ಆವಿಷ್ಕಾರಗಳನ್ನು, ಹೊಸ ಸಂಶೋಧನೆಗಳನ್ನೂ, ಹೊಸ ವಿಷಯಗಳನ್ನು ನಾವು ಹತ್ತಿರಕ್ಕೆ ತೆಗೆದುಕೊಂಡು ಹೋಗಬೇಕು.  ಇದು ನಮ್ಮ ಕರ್ತವ್ಯ. 

ತುಂಬಾ ಹಿಂದೆ ನಮ್ಮ ಹಿರಿಯರು ನೈಸರ್ಗಿಕವಾಗಿ ಕೃಷಿ ಮಾಡುತ್ತಿದ್ದರು.  ಈ ವಿಧಾನದಿಂದ ಹೆಚ್ಚು ಫಸಲನ್ನು ತಗೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.  ಅದಕ್ಕಾಗಿ ಅವರು ಪರಿಸರದಲ್ಲಿ ಸಿಗುತ್ತಿದ್ದ ವಸ್ತುಗಳಿಂದ ಜೈವಿಕ ಗೊಬ್ಬರವನ್ನು ತಯಾರಿಸಿ ಅದನ್ನು ಗಿಡಗಳಿಗೆ ಹಾಕುತ್ತಿದ್ದರು.  ಕ್ರಾಂತಿಯ ಹೆಸರಿನಲ್ಲಿ ಇನ್ನಷ್ಟು ಫಸಲನ್ನು ಹೆಚ್ಚಿಸಬೇಕು ಎನ್ನುವ ಶೋಕಿ ಶುರುವಾಯಿತು.  ಅದಕ್ಕಾಗಿ ರಾಸಾಯನಿಕಗಳನ್ನು ಗಿಡಗಳಿಗೆ ಸುರಿದರು.  ಅದರ ಪರಿಣಾಮವಾಗಿ ಇಂದು ಮಣ್ಣು ಅವಸಾನಗೊಂಡಿದೆ.

ಕೇವಲ ಬೆಳೆಯನ್ನು ಬೆಳೆದರೆ ಮಾತ್ರ ಸಾಕಾಗುವುದಿಲ್ಲ.  ಹಸಿರು ಕ್ರಾಂತಿ ನಡಿಯಿತು, ಮುಂದಿನ ದಿನಗಳಲ್ಲಿ ಇದನ್ನು ಉದ್ಯಮವಾಗಿ ಪರಿವರ್ತಿಸಬೇಕು. ಕೃಷಿ ಮುಂದಿನ ಉದ್ಯಮಕ್ಕೆ ಹೆಜ್ಜೆಯನ್ನಿಡಬೇಕು.  ಇದಾಗಬೇಕಾದರೆ, ನಾವು ಎಷ್ಟು ಬೆಳೆ ಬೆಳೆಯುತ್ತೇವೆ, ಅದರ ಇಳುವರಿ ಎಷ್ಟು ಜಾಸ್ತಿಯಾಯಿತು, ಯಾವ ಗೊಬ್ಬರ ಹಾಕಬೇಕು ಅಷ್ಟೇ ಅಲ್ಲ, ಬೇಕಾಗಿರುವಂತ ತಂತ್ರಜ್ಞಾನವನ್ನು ಇದರೊಂದಿಗೆ ಜೋಡಿಸಬೇಕು. ಇದು ಸಾಮಾನ್ಯವಾಗಿ ರೈತರಿಗೆ ಗೊತ್ತಾಗುವುದಿಲ್ಲ.  ರೈತರಿಗೆ ಗೊತ್ತಾಗುವ ಭಾಷೆಯ್ಲಲಿ ನಮ್ಮ ತಂತ್ರಜ್ಞರು ತಿಳಿಸಬೇಕು. 

ನೀರಾವರಿ ಜಮೀನು ಯಾರಿಗಿದೆ ಅವರು ಪುಣ್ಯವಂತ, ಯಾರ ಜಮೀನು ನೀರಾವರಿಯಾಗಿರುವುದಿಲ್ಲ, ಅವರು ಪಾಪ ಮಾಡಿ ಹುಟ್ಟಿದಾನೆ ಅನ್ನುವ ಮನೋಭಾವ ಇಲ್ಲಿ ಹಲವರಿಗಿದೆ.  ಆ ಒಣಮಣ್ಣಿನಲ್ಲೂ ಎಂತ ಶಕ್ತಿ ಇದೆ ಅಂತ ನೋಡುವ ಆ ದೃಷ್ಟಿಯನ್ನು ನಾವು ಕಳೆದುಕೊಂಡು ಬಿಟ್ಟಿದ್ದೇವೆ.  ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ. ಸಾವಿರಾರು ವರ್ಷದಿಂದ ಈ ಮಣ್ಣು ನಮ್ಮನ್ನು ಬೆಳೆಸಿದೆ.  ಇವತ್ತು ಅದು ನನಗೆ ಹಣ ಕೊಡುತ್ತಿಲ್ಲವೆಂದು ಆ ಅಮ್ಮನನ್ನು ಅನಾಥ ಮಾಡಿ ಹೋದರೆ ನನ್ನಂತ ಶತ ಮೂರ್ಖ ಮಗ ಮತ್ಯಾರು ಇರಲು ಸಾಧ್ಯವಿಲ್ಲ."

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ "ಸಮೃದ್ಧಿಗಾಗಿ ತೋಟಗಾರಿಕೆ" - ತಾಂತ್ರಿಕ ಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು.

ಶ್ರೀ ಪಿ ಸಿ ಗದ್ದಿಗೌಡರ, ಲೋಕಸಭಾ ಸದಸ್ಯರು - ಬಾಗಲಕೋಟೆ,  ಶ್ರೀ ಅಶೋಕ್ ಲಿಂಬಾವಳಿ - ಬಿಜೆಪಿ ಮುಖಂಡರು, ಶ್ರೀ ಮ.ನಿ.ಪ್ರ ಗುರು ಮಹಾಂತ ಸ್ವಾಮಿಗಳು, ಚಿತ್ತರಗಿ - ಇಳಕಲ್ ಸಂಸ್ಥಾನಮಠ, ಶ್ರೀ ಕೆ ಎಮ್ ಇಂದಿರೇಶ, ಉಪ ಕುಲಪತಿಗಳು ಮತ್ತು ಶಿಕ್ಷಣ ನಿರ್ದೇಶಕರು, ಹಾಗು  ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

“More than 60% of India’s population are dependent on agriculture for their livelihood.  In order to support our farmers excel in this field, it’s our responsibility to bring them towards new inventions and technologies taking place in agriculture industry.

 Organic farming was practiced in olden days by our ancestors, which helped them lead a healthier life.  In order to increase the yield, they started using the organic materials and wastes as fertilizers for the crops. In the name of revolution, the trend was set to use chemical fertilizers to boost the crop growth rate which eventually killed the fertility of soil.

The cycle got completed and today we have come back again to the ancient organic farming.  Agriculture should not be limited to profession, it should become an industry to serve lakhs of people.  To achieve this, we should merge our traditional agricultural practice with new technologies and guide the farming community in doing so.  This can be done by our agricultural scientists.

There is a myth believed by few people that those who have irrigational land are blessed and who do not have one, are cursed.  We need a vision to see fertility even in a dry land.  Maa Vasundhara has nurtured us for these years.  There cannot be a fool other than me if I leave my mother Earth for not giving me a better yield.”

Union Minister of State for Skill Development & Entrepreneurship Sri Anantkumar Hegde attended a technical seminar “Horticulture for Prosperity" held at University of Horticultural Sciences, Bagalkot, yesterday.

Sri P C Gaddigoudar , MP – Balgalkot, Sri Ashok Limbavali – BJP Leader, Sri Guru Mahanta Swamiji, Chittaragi – Ilakal matt, Sri K M Indiresh, Vice Chancellor of Horticulture University and many other dignitaries were present during the occasion.

Related posts