Outreach

Anant Sampark

Took part in Purandaradasara Aaradhana Mahotsava at Uttaradhi Mutt, Bengaluru

"ಸಾವಿರಾರು ವರ್ಷಗಳ ಪರಂಪರೆಯನ್ನು ನಡೆಸಿಕೊಂಡು ಹೋಗಬೇಕು ಎನ್ನು ಸಂಕಲ್ಪದೊಂದಿಗೆ ನಾವು ಇಂದು ಇಲ್ಲಿ ಸೇರಿದ್ದೇವೆ.  ನಾಡಿಗೆ ಹೊಸ ಜೀವ ಚೈತನ್ಯವನ್ನು ಕೊಟ್ಟಿರುವಂತ ಪರಂಪರೆ ದಾಸ ಸಾಹಿತ್ಯದ್ದು.  ಸಾಮಾಜಿಕ, ಸಾಂಸ್ಕೃತಿಕ ಜಾಗೃತಿ ಅಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಅತ್ಯಂತ ಉನ್ನತ ಜಾಗೃತಿಯನ್ನು ಸಮಾಜಕ್ಕೆ ಕೊಟ್ಟಿರುವಂತ ಪರಂಪರೆ ಇದು.  ಇಲ್ಲಿ ಪ್ರಾರಂಭವಾದಂತ ಈ ಒಂದು ಪರಂಪರೆ, ದೇಶದ ಮೂಲೆ ಮೂಲೆಯಲ್ಲಿ ಚಿಗುರೊಡೆದಿದೆ.  ನಿಜಕ್ಕೂ ಇದು ಅಸಾದೃಶ್ಯ.  ದಾಸರಿಂದ ಪ್ರೇರಣೆ ಪಡೆದಿರುವಂತ ಎಷ್ಟೋ ಮಹಾನುಭಾವರು ದೇಶದ ಮೂಲೆ ಮೂಲೆಗಳಲ್ಲಿದ್ದಾರೆ.  ಸಾಮಾನ್ಯವಾಗಿ ದಾಸ ಪರಂಪರೆ ಒಂದು ಪಂಥಕ್ಕೆ ಮಾತ್ರ ಸೀಮಿತವೆಂದು ನಾವು ಭಾವಿಸುತ್ತೇವೆ.  ಆದರೆ ವಾಸ್ತವದಲ್ಲಿ ಇದು ಹಾಗಿಲ್ಲ.  ಈ ಸಾಹಿತ್ಯದಲ್ಲಿ ದ್ವೈತ ಮಾತ್ರವಲ್ಲ, ಅದ್ವೈತವೂ ಇದೆ.  ಶೈವ ಸಿದ್ದಂತವೂ ಇದೆ, ಶಕ್ತಿಯ ಆರಾಧನೆಯೂ ಇದೆ.  

ಕೇವಲ ಹಾಡುಗಾರಿಕೆ ಅಥವಾ ಕಾವ್ಯಗಳ ರಚನೆಗಳ ಮಾತ್ರದಿಂದ ದಾಸಪರಂಪರೆಗೆ ನಮ್ಮನ್ನು ಜೋಡಿಸುವುದಿಲ್ಲ.  ಉತ್ತಮ ಕೇಳುಗರು ಕೂಡ ದಾಸ ಪರಂಪರೆಯನ್ನು ಬೆಳೆಸುವವರೇ.  ಒಂದು ಸಿದ್ದಾಂತ ಆಳವಾಗಿ ಬೇರು ಬಿಡಬೇಕಾದರೆ, ಆ ಸಿದ್ದಾಂತದ ಪ್ರತಿಪಾಲಕರು, ಅನುಕರಣೆ ಮಾಡುವವರು ಬೇಕೇ ಬೇಕು.  ದೇಶದ ಯಾವುದೇ ಮೂಲೆಯಲ್ಲಿ ಭಕ್ತಿ ಸಾಹಿತ್ಯ ರಚನೆಯಾಗಿರಲಿ, ಆದರೆ ದಾಸ ಸಾಹಿತ್ಯದ ಅಂದವೇ ಬೇರೆ... ಅದಕ್ಕೊಂದು ರಾಗ ಇದೆ, ಒಂದು ಭಾವವಿದೆ.  ಅದರ ತುಂಬಾ ಅಲಂಕಾರವಿದೆ. 

ನಮ್ಮ ಸಾಹಿತ್ಯ ಮನೋರಂಜನೆಯ ವಸ್ತು ಅಲ್ಲ.  ಭಗವಂತನ ಪಾದದ ಕೆಳಗೆ ತನ್ನನ್ನು ತಾನೇ ಹೊತ್ತುಕೊಂಡಾಗ ಮೂಡಿ ಬಂದ ಭಾವ ನಮ್ಮ ದಾಸ ಸಾಹಿತ್ಯ.  ಇದನ್ನು ಆರಾಧನೆಯ ಕೇಂದ್ರವನ್ನಾಗಿ ನೋಡಬೇಕು."

#ಅನಂತಕುಮಾರಹೆಗಡೆ

ಬೆಂಗಳೂರಿನ ಉತ್ತರಾದಿ ಮಠದಲ್ಲಿ ಶ್ರೀನಿವಾಸ ಉತ್ಸವ ಬಳಗದ ವತಿಯಿಂದ ನಡೆದ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಭಾಗವಹಿಸಿ ಮಾತನಾಡಿದರು.

“We all have gathered here today to celebrate the greatness of our culture and continue the tradition for our next generations.  Dasa tradition guided our societies for the past 5-6 centuries.  The bhakti traiditon not only served the society through social and cultural awareness, but also through literature in the most humble way.  The culture that sprouted here, has spread its root across the globe.  There are many legends across the world serving the society, following the footsteps of the eminent Dasa saints.    

We cannot be connected to Dasa tradition just through the bhajans of Dasa saints.  We should not only grow in the bhakti tradition but also let the culture grow by implementing it in our lives.   For a tradition to penetrate its roots deep in to the soul of the society, people should accept it whole-heartedly and live with it.  The beauty of Dasa literature is impeccable, no matter where it is written.  It fills the soul with divinity.

Dasa literature is not a subject of social entertainment.  It’s a divine feel, attained only through the intimacy of praising the Lord with total devotion and getting blessed by being under his feet.”

#AnantkumarHegde

Union Minister of State for Skill Development & Entrepreneurship Sri Anantkumar Hegde took part in Purandaradasara Aaradhana Mahotsava organised by Srinivasa Utasava Balaga at Uttaradhi Mutt, Bengaluru, recently.

 

 

Related posts