Outreach

Anant Sampark

Took part in a party meet organised at Bekwada of Khanapur taluk

ಸಂಪರ್ಕ ಕಾರ್ಯಕ್ರಮದ ಅಂಗವಾಗಿ, ಖಾನಾಪುರ ತಾಲೂಕಿನ ಬೇಕವಾಡದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಈ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.  ಚುನಾವಣೆ ಹತ್ತಿರ ಬರುತ್ತಿದ್ದು ಪ್ರಚಾರಕ್ಕೆ ಅನುವಾಗುವಂತೆ ಸಚಿವರು ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು. 

ಶ್ರೀ ಸುನೀಲ ಹೆಗಡೆ, ಮಾಜಿ ಸಚಿವರು - ಹಳಿಯಾಳ, ಶ್ರೀ ವಿಠ್ಠಲ ಪಾಟೀಲ, ಖಾನಾಪುರ ತಾಲೂಕು ಬಿಜೆಪಿ ಅಧ್ಯಕ್ಷರು, ಶ್ರೀ ಲಿಂಗರಾಜ ಪಾಟೀಲ, ಶ್ರೀ ಪ್ರಮೋದ ಕೋಚರಿ, ಶ್ರೀ ಸಂಜಯ ಕುಬಾಳ, ಶ್ರೀ ವಿಠ್ಠಲ ಹಲಗೇಕರ್ ಹಾಗೂ ಹಲವಾರು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

As part of outreach programme, a meeting of BJP Karyakartas was organized today at Bekwada of Khanapur taluk.  Union Minister of State for Skill Development & Entrepreneurship Sri Anantkumar Hegde attended the meet and addressed the party karyakarthas.

Hon’ble Minister discussed about organising the party cadres for the upcoming elections and also explained about various welfare programmes and schemes of Union Government being implemented in the district along with its performance details.

Sri Sunil Hegde, Ex-MLA Haliyal, Sri Vithal Patil, Khanapur taluk BJP president, Sri Lingaraj Patil, Sri Pramod Kochri, Sri Sanjay Kubal, Sri Vithal Halagekar and many others were present during the meet.

 

 

 

Related posts