Outreach

Anant Sampark

Attended BJP karyakarta's meetings at Sampagoan and Naganur villages of Kittur taluk, recently

ಸೃಜನಾತ್ಮಕ ದೃಷ್ಟಿಕೋನ ಹೊಂದಿರುವ ಶ್ರೀ ನರೇಂದ್ರ ಮೋದಿಜಿಯವರ ನಾಯಕತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು, ಇತಿಹಾಸವನ್ನು ಪುನರಾವರ್ತಿಸುವ ಉತ್ಸಾಹದಿಂದ  ಬಿಜೆಪಿ ಕಾರ್ಯಕರ್ತರು ಕ್ರಿಯಾಶೀಲರಾಗುತ್ತಿದ್ದಾರೆ.  ಸಂಪರ್ಕ ಕಾರ್ಯಕ್ರಮದ ಅಂಗವಾಗಿ, ಕಿತ್ತೂರು ತಾಲೂಕಿನ ಸಂಪಗಾಂವ್ ಹಾಗು ನಾಗನೂರು ಗ್ರಾಮಗಳ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡು, ಕಾರ್ಯಕರ್ತನ್ನು ಉದ್ದೇಶಿಸಿ ಮಾತನಾಡಿದರು.

ಪಕ್ಷ ಸಂಘಟನೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಸಮಾಜಪೂರಕ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು. ಸರಕಾರ ಜಾರಿಗೊಳಿಸಿರುವ ಎಲ್ಲಾ ಯೋಜನೆಗಳ ಬಗ್ಗೆ , ಜನರಿಗೆ ಶ್ರುತಪಡಿಸಿ ಹಾಗೂ ಅದರ ಪೂರ್ಣ ಲಾಭ ಪಡೆದುಕೊಳ್ಳುವಲ್ಲಿ ಅವರಿಗೆ ಸಹಾಯ ಮಾಡಬೇಕೆಂದು ಸಚಿವರು ಕಾರ್ಯಕರ್ತರಿಗೆ ತಿಳಿಸಿದರು.   

ಶ್ರೀ ಮಹಾಂತೇಶ ದೊಡ್ಡಗೌಡ್ರ, ಶಾಸಕರು - ಕಿತ್ತೂರು, ಬಿಜೆಪಿ ಅಧ್ಯಕ್ಷರಾದ ಶ್ರೀ ಚೆನ್ನಪ್ಪ ಮುತ್ನಾಳ್, ಶ್ರೀ ಹನುಮಸಾಗರ ಹಾಗು ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತದ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು.

Under the visionary leadership of Sri Narendra Modiji, our BJP karyakartas are geared up with great zeal to repeat another history by enabling more more seats for BJP in the upcoming Lok Sabha elections.  Union Minister of State for Skill Development and Entrepreneurship, Sri Anantkumar Hegde addressed these karyakartas in an outreach programme organised at Sampagoan and Naganur villages of Kittur taluk, recently.

Hon'ble Minister, explained the developmental works initiated and the progress of various welfare programmes implemented  across the district.  He also urged them to take initiative to educate the people about the various flagship programmes initiated by the Union Government and communicating the same to their people effectively. 

Sri Mahantesh Doddagoudar, MLA – Kittur, Sri BJP Presidents Sri Chennappa Mutnal, Sri Hanumasagar, Members of Zilla Panchayat and Taluk Panchayat were present during the meet.

 

Related posts