Outreach

Anant Sampark

Attended BJP karyakarta's meeting at Balkur village of Honnavar taluk, yesterday

ಸೃಜನಾತ್ಮಕ ದೃಷ್ಟಿಕೋನ ಹೊಂದಿರುವ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು, ಇತಿಹಾಸವನ್ನು ಪುನರಾವರ್ತಿಸುವ ಉತ್ಸಾಹದಿಂದ  ಬಿಜೆಪಿ ಕಾರ್ಯಕರ್ತರು ಕ್ರಿಯಾಶೀಲರಾಗುತ್ತಿದ್ದಾರೆ.  ಸಂಪರ್ಕ ಕಾರ್ಯಕ್ರಮದ ಅಂಗವಾಗಿ, ಭಾನುವಾರದಂದು  ಹೊನ್ನಾವರ  ತಾಲೂಕಿನ, ಬಾಲ್ಕುರು ಗ್ರಾಮದಲ್ಲಿ  ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಪಾಲ್ಗೊಂಡು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಚುನಾವಣೆಯ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಮಾನ್ಯ ಸಚಿವರು, ಕಾರ್ಯ ರೂಪಕ್ಕೆ ಬಂದಿರುವ ಕೇಂದ್ರ ಸರಕಾರದ ಸಮಾಜಪೂರಕ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾ, ಮೋದಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು. ಸರಕಾರ ಜಾರಿಗೊಳಿಸಿರುವ ಎಲ್ಲಾ ಯೋಜನೆಗಳ ಬಗ್ಗೆ, ಜನರಿಗೆ ಶ್ರುತಪಡಿಸಿ ಹಾಗೂ ಅದರ ಪೂರ್ಣ ಲಾಭ ಪಡೆದುಕೊಳ್ಳುವಲ್ಲಿ ಅವರಿಗೆ ಸಹಾಯ ಮಾಡಬೇಕೆಂದು ಸಚಿವರು ಕಾರ್ಯಕರ್ತರಿಗೆ ತಿಳಿಸಿದರು.   

ಶ್ರೀ ಸುನಿಲ್ ನಾಯ್ಕ್, ಮಾನ್ಯ ಶಾಸಕರು - ಭಟ್ಕಳ,  ಶ್ರೀ ಕೇಶವ ನಾಯ್ಕ್, ಅಧ್ಯಕ್ಷರು - ಗ್ರಾಮ  ಪಂಚಾಯತ, ಶ್ರೀ  ಬಿ ಟಿ ನಾಯ್ಕ್, ಉಪಾಧ್ಯಕ್ಷರು - ಗ್ರಾಮ  ಪಂಚಾಯತ, ಶ್ರೀ  ಮಂಜುನಾಥ ನಾಯ್ಕ್, ಪ್ರಧಾನಕಾರ್ಯದರ್ಶಿ - ಬಿಜೆಪಿ, ಶ್ರೀಮತಿ ಸುಮನಾ ಭಟ್, ಅಧ್ಯಕ್ಷರು - ಇಡಗುಂಜಿ  ಗ್ರಾಮ ಪಂಚಾಯತ, ಶ್ರೀ ಮಾರುತಿ ನಾಯ್ಕ್, ಅಧ್ಯಕ್ಷರು - ಮಹಾ ಶಕ್ತಿ ಕೇಂದ್ರ,  ಮುಂತಾದವರು  ಸಭೆಯಲ್ಲಿ ಭಾಗಿಯಾಗಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Under the visionary leadership of Sri Narendra Modiji, our BJP karyakartas are geared up with great zeal to repeat another history by enabling more seats for BJP in the upcoming Lok Sabha elections.  Union Minister of State for Skill Development and Entrepreneurship, Sri Anantkumar Hegde addressed these karyakartas in an outreach programme organised at Balkur village of Honnavar taluk, yesterday.

Hon'ble Minister, explained the developmental works initiated and the progress of various welfare programmes implemented  across the district.  He also urged them to take initiative to educate the people about the various flagship programmes initiated by the Union Government and communicating the same to their people effectively.

 Sri Sunil Naik, MLA – Bhatkal, Sri Keshava Naik, President – Grama Panchayat, B T Naik, Vice President – Grama Panchayat, Sri Manjunath Naik, General Secretary, - BJP, Smt. Sumana Bhat, President – Idagunji - Grama Panchyat, Sri Maruthi Naik, President - Maha Shakti Kendra and others were present during the meet.

#OfficeOfAnantkumarHegde

Related posts