Outreach

Anant Sampark

Participated in the election campaign at Ankola taluk, yesterday

ಮಂಗಳವಾರದಂದು ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದರು ಆದ ಶ್ರೀಯುತ ಅನಂತಕುಮಾರ ಹೆಗಡೆಯವರು ಅಂಕೋಲ ಕ್ಷೇತ್ರದ ಆವೇರ್ಸ, ಬೇಲಿಕೇರಿ, ಹಿಲ್ಲೂರ್ ಮುಂತಾದ ಸ್ಥಳಗಳಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.

ಮಾನ್ಯ ಸಂಸದರು ಈ ಸಂದರ್ಭದಲ್ಲಿ ಮಾತನಾಡಿ ಇಂದು ಮೋದಿಯವರಿಂದಾಗಿ ಜಾತಿ, ಭಾಷೆ ಮುಂತಾದ ಎಲ್ಲ ನಕಾರಾತ್ಮಕ ಅಂಶಗಳನ್ನು ಬದಿಗೊತ್ತಿ ದೇಶಕ್ಕಾಗಿ ಮತ ನೀಡುತ್ತಿದ್ದೇವೆ ಎಂಬ ದೊಡ್ಡ ಬದಲಾವಣೆಯನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ ಎಂದರು.  ಹಾಗೆ ಮೋದಿಯವರು ತಿಳಿಸಿದ ಹಾಗೆ ಇಂದು ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ಯಾವುದೇ ರೀತಿಯಲ್ಲಿ ಸಹಿಸಲು ಸಾಧ್ಯವಿಲ್ಲವೆಂತಲು ಹಾಗೂ ಆಂತರಿಕ ಸುರಕ್ಷತೆಗೆ ಹೆಚ್ಚು ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.  ಹಗರಣ ಮುಕ್ತ ಅಭಿವೃದ್ಧಿ ಪೂರಕ ಆಡಳಿತ ನೀಡಿದ ಶ್ರೇಯಸ್ಸು ನಮ್ಮ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.  ಹಿಂದಿನ 4 ಸಲ ಸಂಸದರಾದರೂ, ಕಾರ್ಯ ನಿರ್ವಹಿಸಿ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾದದ್ದು ಕಳೆದ 5 ವರ್ಷದ ಅವಧಿಯಲ್ಲಿ ಮಾತ್ರವೆಂದು, ಸಂಸದರು ಅಭಿಪ್ರಾಯಪಟ್ಟರು.  ಕಾಂಗ್ರೆಸ್ ತನ್ನ ಸರ್ಕಾರದ ಆವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಯನ್ನು ಜಾರಿಗೊಳಿಸದೆ ಕೇವಲ ಭ್ರಷ್ಟಾಚಾರ ವ್ಯವಸ್ಥೆಯನ್ನು ಹುಟ್ಟುಹಾಕುವಲ್ಲಿ ಮಗ್ನನಾಗಿತ್ತು ಎಂದರು.

ಈ ಸಂದರ್ಭದಲ್ಲಿ ಕಾರವಾರದ ಶಾಸಕಿಯಾದ ಶ್ರೀಮತಿ ರೂಪಾಲಿ ನಾಯ್ಕ್, ಅರುಣ್ ನಾಡಕರ್ಣಿ, ಅರುಣ್ ಕುಮಾರ್, ನಾಗರಾಜ್ ನಾಯ್ಕ್, ನಾಗರಾಜ್ ನಾಯ್ಕ್ ತೋರ್ಕಿ, ಮತ್ತಿತರ ಬಿಜೆಪಿಯ ಧುರೀಣರು ಭಾಗವಹಿಸಿ ಪಕ್ಷದ ಚಿಹ್ನೆಯಾದ ಕಮಲಕ್ಕೆ ಮತ ನೀಡಿ,  ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವಂತೆ ಆಗಬೇಕೆಂದು ಕೋರಿದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

Uttara Kannada Loksabha candidate for BJP & the present MP of the constituency, Sri Anantkumar Hegde participated in the election campaign at Aversa, Belekeri, Hilluru and other villages of Ankola taluk, yesterday.

Speaking on the occasion, Sri Hegde opined that it was because of PM Narendra Modi-ji, that negative issues such as caste, money and language have been sidelined with nationalism taking the centre stage, in this election campaign.  People have rejected the narrow minded politics and have chosen Nation first agenda, which is very positive to the growth of the Nation as a whole. 

He also conveyed that Modi-ji's prime focus of zero-tolerance towards terrorism & corruption besides strengthening internal security has been well accepted by the people of this Nation.  It is to the credit of BJP government that a corruption-free but yet developmental oriented government has been provided to the people for the past five years.

Sri Hegde also said that though he was elected for 5 terms as MP, it was only in the last term that he was successfull in getting developmental works done, which was due to our own government in New Delhi.  He said Congress deliberately involved in corrupt practices and never supported any developmental activities in Uttara Kannada constituency, all these years.

 He was accompanied by Karwar-Ankola MLA, Smt. Roopali Naik, Arun Nadkarni, Nagaraj Naik, Arunkumar, Nandu Gaonkar, Nagaraj Naik Torke and other BJP leaders who requested people to vote for Lotus symbol and thereby enable Modi-ji to become Prime Minister again in the interest of the Nation.

#OfficeOfAnantkumarHegde

Related posts

Last, but not least!