Outreach

Anant Sampark

Participated in the post election review meet held at Kumta

"ನಮ್ಮೆಲ್ಲರಿಗು ಈ ಬಾರಿಯ ಚುನಾವಣೆ ಸುಲಭವೆನಿಸಿದ್ದು ಕಾಂಗ್ರೆಸ್ ಕಣದಲ್ಲಿ ಇಲ್ಲವೆಂದು, ಆದರೆ ಇದರ ಹಿಂದೆ ಬಹಳ ದೊಡ್ಡ ಪ್ರಮಾಣದ ರಾಜಕೀಯ ಚಟುವಟಿಕೆ ನಡೆದಿದೆ. ಇದರ ಪರಿಣಾಮವಾಗಿ ನಮ್ಮ ದಾರಿ ಬಹಳ ಸುಲಭವಾಯಿತು.  ಜನತಾ ದಳ ಹಾಗೂ ಕಾಂಗ್ರೆಸ್ಸಿನ ನಡುವೆ ಒಪ್ಪಂದವಾಯಿತು, ಅವರ ಒಪ್ಪಂದದಿಂದ ಮೈತ್ರಿಯಾಗಿ ಜನತಾದಳಕ್ಕೆ ಕ್ಷೇತ್ರ ಬಿಟ್ಟುಕೊಟ್ಟರು.... ಇದು ಅಷ್ಟು ಸುಲಭವಾಗಿ ನಡೆದಿಲ್ಲ... ಇದು ರಾಜಕೀಯದ ಚದುರಂಗದಾಟದ ಪರಿಣಾಮವಿದು, ಅದರಿಂದಾಗಿ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. 
 
ರಾಜಕರಣವು ಅಷ್ಟು ಸುಲಭವಾಗಿ ಎಲ್ಲರಿಗೂ ಬೇಗ ಅರ್ಥವಾಗುವುದಿಲ್ಲ.  ಎಲ್ಲೋ ಸಣ್ಣ ಹಳ್ಳ, ತೂಗು ಸೇತುವೆ, ಜಾತಿ, ದುಡ್ಡು ಇವಷ್ಟೇ ರಾಜಕಾರಣ ಎಂದುಕೊಂಡಿದ್ದಾರೆ.  ಒಂದು ಸುಧೀರ್ಘ ರಾಜಕಾರಣದ ಚದುರಂಗದಾಟದ ಪರಿಣಾಮವಾಗಿ ಕಾಂಗ್ರೆಸ್, ಈ ಕ್ಷೇತ್ರವನ್ನು ಜನತಾದಳಕ್ಕೆ ಬಿಟ್ಟುಕೊಟ್ಟಿದ್ದು. 
 
ಖಂಡಿತವಾಗಿ ಪಕ್ಷವನ್ನು ಗೆಲ್ಲಿಸಲು ಅತ್ಯಂತ ಪರಿಶ್ರಮವಹಿಸಿರುವ ನಮ್ಮ ಕಾರ್ಯಕರ್ತರನ್ನು ಕೃತಜ್ಞತೆಯಿಂದ ನೆನೆಸಿಕೊಳ್ಳಬೇಕು.  ಹಾಗೆಯೇ ಪರದೆಯ ಹಿಂದೆ ರಾಜಕರಣದಲ್ಲಿ ಪ್ರಮುಖ ಪಾತ್ರವಹಿಸಿರುವವರನ್ನು ಅಪ್ರತ್ಯಕ್ಷವಾಗಿ ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು!! 
 
ಅದರ ಜೊತೆಯಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಬೂತ್ ಮಟ್ಟದ ಪ್ರಚಾರ ಪ್ರಾರಂಭಿಸುವ ಮೊದಲೇ, ಸಂಘ ಪರಿವಾರದ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಮುಂತಾದ ಸಂಘಟನೆಯ ಕಾರ್ಯಕರ್ತರು ತಮ್ಮ ಪ್ರಚಾರ ಕಾರ್ಯವನ್ನು ಬಹು ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಿದ್ದರು.  ಅವರೆಲ್ಲರೂ ಎಂದೂ ಬಿಜೆಪಿ ನಾಯಕರ ಭಾಷಣಕ್ಕೆ ಕಾಯ್ದು ಕುಳಿತಿರಲಿಲ್ಲ, ಅಥವಾ ಬೂತಿಗೆ ಹಣ, ಕರಪತ್ರ ಬರುವುದೆಂದು ನೋಡುತಿರಲಿಲ್ಲ.  ಅವರ ಕಲ್ಪನೆಯೇ ಬೇರೆಯಾಗಿತ್ತು.  ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೆಲ್ಲುತ್ತಿರುವ ಕಾರಣ ಅವರ ಪರಿಶ್ರಮ, ನೆನಪಿರಲಿ!
 
ಕಳೆದ ಆರು ಭಾರಿಯಿಂದ ನಿರಂತರವಾಗಿ ನಾವು ಗೆಲ್ಲುತ್ತಿರುವ ಕಾರಣ, ಕೇವಲ ರಾಜಕೀಯವಲ್ಲ!  ಯಾವುದೇ ಹೆಸರು, ಪ್ರಸಿದ್ಧಿಯ ಅಪೇಕ್ಷೆ ಪಡೆಯದೆ ಅನಾಮಧೇಯರಾಗಿದ್ದು, ಈ ಸಮಾಜದ ಕೆಲಸ ಮಾಡುತ್ತಿರುವ ನಮ್ಮ ಪರಿವಾರದ, ಸಂಘಟನೆಯ ಉಳಿದ ಕಾರ್ಯಕರ್ತರಿಗೆ ನಾವು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು." - ಅನಂತಕುಮಾರಹೆಗಡೆ
 
 
ಭಾನುವಾರದಂದು ಕುಮಟಾದಲ್ಲಿ ನಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಅಭಿನಂದನೆ ಹಾಗೂ ಚುನಾವಣೆ ಅವಲೋಕನ ಸಭೆಯನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿ ಮಾತನಾಡಿದರು. 
 
ಈ  ಸಭೆಯಲ್ಲಿ  ಪ್ರಭಾರಿ ಶ್ರೀ ಲಿಂಗರಾಜ್ ಪಾಟೀಲ್,  ಶ್ರೀ ವಿನೋದ್ ಪ್ರಭು, ನ್ಯಾಯವಾದಿ ಶ್ರೀ ನಾಗರಾಜ್ ನಾಯಕ್, ಶ್ರೀ ಎಮ್ ಜಿ ಭಟ್, ಶ್ರೀ ಗಣೇಶ್ ಅಂಬಿಗ, ಶ್ರೀ ನಾಗರಾಜ್ ನಾಯ್ಕ್,  ಶ್ರೀ ಏನ್ ಎಸ್ ಹೆಗಡೆ, ಶ್ರೀ ವೆಂಕಟೇಶ್ ನಾಯಕ್, ಶ್ರೀ ಮಂಜುನಾಥ್ ಜನ್ನು ಮುಂತಾದವರು ಉಪಸ್ಥಿತರಿದ್ದರು.
 
Uttara Kannada Loksabha Constituency Member, Sri Anantkumar Hegde,  participated in the post election review meet held at Kumta, recently.
 
Sri Lingaraj Patil, District In-charge, BJP, Sri Vinod Prabhu, Sri Pramod Hegde, Sri Nagaraj Naik, Advocate, Sri M G Bhat, Sri Ganesh Ambiga, Sri Nagaraj Naik, Sri ANS Hegde, Sri Venkatesh Nayak, Shri Manjunath Jannu and others were present on the occasion. 
 

Related posts