Outreach

Anant Sampark

Participated in the post election review meet held at Bhatkal, recently

"ಮೊದಲನೇ ಬಾರಿ, 1996ರ ಚುನಾವಣೆಯಿಂದ ಪ್ರಾರಂಭಿಸಿ, ಪ್ರಸ್ತುತ ಚುನಾವಣೆಯವರೆಗೂ  ನಾನು ಏನು ಮಾತನಾಡಿರುವೆ ಎಂದು ನನಗೆ ಚೆನ್ನಾಗಿ ನೆನಪಿದೆ.  ಅಂದು ಸಹ ಇದೆ ಹೇಳಿದ್ದೆ, ಅನಂತಕುಮಾರ ಹೆಗಡೆ ಇಲ್ಲಿ ಅಭ್ಯರ್ಥಿಯಲ್ಲ, ಇಲ್ಲಿ ನಮ್ಮ ಪಕ್ಷ ಅಭ್ಯರ್ಥಿ, ನಮ್ಮ ವಿಚಾರ ಇಲ್ಲಿಯ ಅಭ್ಯರ್ಥಿ.  ನಾವು ಬೇರೆ ರಾಜಕಾರಣಿಗಳ ರೀತಿಯಲ್ಲಿ ಚಮಚಾಗಳನ್ನು ಹುಟ್ಟುಹಾಕಿ ರಾಜಕಾರಣವನ್ನು ಮಾಡಲಿಲ್ಲ.  ನಾವು ಒಂದು ವಿಚಾರ ಹಾಗೂ ಸಿದ್ಧಾಂತದ ಆಧಾರದ ಮೇಲೆ  ಜನರನ್ನು ಜೋಡಿಸಿದೆವು. ಜೊತೆಯಲ್ಲಿ ಜಾತಿಯನ್ನು ಮೀರಿ ಸಂಘಟನೆಯನ್ನು ತಗೆದುಕೊಂಡು ಹೋಗುತ್ತಿದ್ದೇವೆ. 

ಪಕ್ಷ ಎಲ್ಲದಕ್ಕಿಂತ ದೊಡ್ಡದು, ವ್ಯಕ್ತಿ ಪೂಜೆಗೆ ಎಲ್ಲಿಯೂ ನಾವು ಅವಕಾಶ ಕೊಟ್ಟಿಲ್ಲ.  ಎಲ್ಲೆಲ್ಲಿ ವ್ಯಕ್ತಿ ಪೂಜೆಯ ಸಂಭ್ರಮ ಶುರುವಾಯಿತೋ ಅಲ್ಲಲ್ಲಿ ನಮ್ಮ ಕಾರ್ಯಕರ್ತರು ಪ್ರಭುದ್ಧ ರೀತಿಯಲ್ಲಿ ಅದನ್ನು ಅಲ್ಲಗಳದಿದ್ದಾರೆ.  ಇಂತಹ ಪ್ರಭುದ್ಧತೆಯನ್ನು, ಸಂಘಟನೆಯು ಕಾರ್ಯಕರ್ತರಲ್ಲಿ ಕಳೆದ 2 ದಶಕಗಳಿಂದ ನಿತ್ಯ-ನಿರಂತರವಾಗಿ ಬೆಳೆಸಿದೆ.  ಅದರ ಪರಿಣಾಮವಾಗಿಯೇ ಇಂದು ಇಷ್ಟು ಸರಳ ಚುನಾವಣೆ ನಡೆಯುವುದಕ್ಕೆ ಕಾರಣ, ಹಾಗೆಯೇ ಒಂದು ಸಂಘಟನೆ ಸುಂದರವಾಗಿ ಬೆಳೆಯುವುದಕ್ಕೆ ಸಹ ಇದೆ ಕಾರಣ.

 ನಿಮಗೆಲ್ಲ ತಿಳಿದಿರುವ ಹಾಗೆ ನಾವು ಬಿಜೆಪಿ ಕಾರ್ಯಕರ್ತರು ಎಷ್ಟು ಕೆಲಸ ಮಾಡಿದ್ದಿವೋ, ಅದಕ್ಕಿಂತ ಹೆಚ್ಚು ಪರಿಶ್ರಮ ಈ ಕ್ಷೇತ್ರದಲ್ಲಿ  ನಮ್ಮ ಪರಿವಾರದ ಕಾರ್ಯಕರ್ತರು ಮಾಡಿದ್ದಾರೆ. 

ಅವರಿಗೆ ಪ್ರೇರಣೆ ಕೊಟ್ಟಿದ್ದು ಯಾರು? ಯಾಕೆ ಅವರು ಎಲ್ಲಾ ಮನೆಗಳಿಗೂ ತೆರಳಿ ಪ್ರಚಾರ ಮಾಡಿದ್ದು?  ಅವರು ಅನಂತಕುಮಾರ ಹೆಗಡೆ ಮುಖ ನೋಡಿಕೊಂಡು ಮಾಡಲಿಲ್ಲಾ, ನರೇಂದ್ರ ಮೋದಿಯವರ ಮುಖ ನೋಡಿಕೊಂಡು ಮಾಡಲಿಲ್ಲಾ, ಬಿಜೆಪಿ ಕಾರ್ಯಕರ್ತರು ಬರ್ತಾರೆ, ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ ಎಂದು ಮಾಡಲಿಲ್ಲ.  

ಅವರ ಎದುರು ಕಂಡಿದ್ದು ಹಿಂದುತ್ವ, ಹಿಂದುರಾಷ್ಟ್ರ, ನಮ್ಮ ದೇಶ, ಧರ್ಮ.  ಇವಿಷ್ಟಕ್ಕೆ ಈ ಪಕ್ಷ ಕೆಲಸ ಮಾಡುತ್ತಿದೆ, ಆದರಿಂದ ಈ ಸಂಘಟನೆಗೆ ನಾವು ಕೆಲಸ ಮಾಡಬೇಕು; ಇದೊಂದೇ ಅವರ ಪ್ರೇರಣೆ. ಅವರಿಗೆ ಪ್ರೇರಣೆ ನಮ್ಮ ಭಗವಾದ್ವಜ.

ಮೊದಲನೇ ಬಾರಿ ಗೆಲ್ಲುವುದು ಬಹಳ ಸುಲಭ, ಆದರೆ ಎರಡನೇ ಬಾರಿ Anti-incumbency ಶುರುವಾಗುತ್ತದೆ.  ಸ್ವಾಮಿ, ಎಲ್ಲೋ ನಮ್ಮ ಕಾರ್ಯಕರ್ತರು ಮಾತನಾಡುತ್ತಾ ಹೇಳಿದರು, ನಾವು ಕಳೆದ ಎರಡು ಮೂರು ಚುನಾವಣೆಗಳಿಂದ Accidental Candidate ಎಂದು.  ಒಟ್ಟು ಸಂಘಟನೆಯ, ಪಕ್ಷದ  ಅಭಿಪ್ರಾಯವೋ ಏನೋ ನಾವು ಅಭ್ಯರ್ಥಿಯಾಗಿದ್ದೇನೆ.  ಕೆಲವು ಮಂದಿ ಕನಸು ಕಾಣುತ್ತಿರಬಹುದು, ಈ ಅನಂತಕುಮಾರ ಹೆಗಡೆಯನ್ನು ನಿವಳಿಸುವುದು ಹೇಗೆ ಅಂತ.  ಅದರ ಅವಶ್ಯಕತೆ ಏನಿಲ್ಲಾ, ನಾನೇ ಬಿಟ್ಟುಕೊಡುತ್ತೇನೆ.  ಆದರೆ ಬಂದು ಕುಳಿತುಕೊಳ್ಳುವ ತಾಕತ್ತು ಅವರಿಗಿದೆಯ ಎಂದು ಕೇಳಿ.  ಒಟ್ಟು ಯಾವನೋ ದಾರಿಮೇಲೆ ಹೋಗುವವನಿಗೆ ಈ ಕುರ್ಚಿ ಬಿಟ್ಟು ಕೊಡುವುದಿಲ್ಲ, ಆ capacity ಇದ್ದವರು ಬಂದರೆ ಖಂಡಿತವಾಗಿ ಬಿಟ್ಟು ಕೊಡುತ್ತೇನೆ. 

ಬಂಧುಗಳೇ, ಒಂದು ವಿಷಯವನ್ನು ನಾನು ನಿಮ್ಮ ಮುಂದೆ ಹಂಚಿಕೊಳ್ಳಲೇಬೇಕು, ಹೌದು ಎಲ್ಲರೂ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ, ಅವರಿಗೆ ಯಾರ ಹತ್ತಿರ ಏನು ಕೇಳಬೇಕು, ಯಾರಿಂದ ಏನು ಕೆಲಸವಾಗುವುದು, ಎನ್ನುವುದರ ಕಲ್ಪನೆಯೇ ಇರುವುದಿಲ್ಲ.  ಆದರೆ ಇಲ್ಲಿ ಕುಳಿತಿರುವ ನೀವು ಸಾರ್ವಜನಿಕರಲ್ಲ.... ನೀವು ಪಕ್ಷದ ಪ್ರಮುಖರು, ಕಾರ್ಯಕರ್ತರು, ಹಾಗೂ ಪದಾಧಿಕಾರಿಗಳು. Season ಬಂದಾಗ ಎಲ್ಲೋ ಹಮಾಲಿಗಳ ಹಾಗೆ ಕೆಲಸ ಮಾಡುವವರಲ್ಲಾ ನಾವು. ಚುನಾವಣೆ ಬಂದಕೂಡಲೇ, ಎಲ್ಲೋ ಸುನೀಲ ನಾಯ್ಕ್ ರನ್ನು, ಅನಂತಕುಮಾರ್ ಹೆಗಡೆಯನ್ನು, ದಿನಕರ್ ಶೆಟ್ಟಿಯವರನ್ನು ಗೆಲ್ಲಿಸಬೇಕು ಎಂದು ಕೆಲಸ ಮಾಡುವ ಚಮಚಾಗಳಲ್ಲಾ ನೀವು. ಮತ್ತೊಮ್ಮೆ ಹೇಳುತ್ತೇನೆ, ಇಲ್ಲಿ ಕುಳಿತಿರುವವರು ಒಂದು ರಾಷ್ಟ್ರೀಯ ಪಕ್ಷದ ಪ್ರಭುದ್ಧ ಕಾರ್ಯಕರ್ತರು ನೀವು.  ಹೇಗೆ ನಾವು ಚುನಾವಣೆಯ ಸಂಧರ್ಭದಲ್ಲಿ ಪಕ್ಷಕ್ಕೆ ಕೆಲಸ ಮಾಡಿರುತ್ತೇವೋ ಹಾಗೆಯೇ ಮುಂದಿನ ದಿನಗಳಲ್ಲಿ ಸರಕಾರ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಾಗಿ ದೇಶಕ್ಕೆ ಸೇವೆ ಸಲ್ಲಿಸಬೇಕು."

#ಅನಂತಕುಮಾರಹೆಗಡೆ

ಇತ್ತೀಚೆಗೆ, ಭಟ್ಕಳದಲ್ಲಿ ನಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಅಭಿನಂದನೆ ಹಾಗೂ ಚುನಾವಣೆ ಅವಲೋಕನ  ಸಭೆಯನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿ ಮಾತನಾಡಿದರು. 

ಈ  ಸಭೆಯಲ್ಲಿ  ಪ್ರಭಾರಿ ಶ್ರೀ ಲಿಂಗರಾಜ್ ಪಾಟೀಲ್,  ಶ್ರೀ ವಿನೋದ್ ಪ್ರಭು, ಶ್ರೀ ಸುನಿಲ್ ನಾಯ್ಕ್ , ಮಾನ್ಯ ಶಾಸಕರು - ಭಟ್ಕಳ, ಶ್ರೀ ರಾಜೇಶ್ ನಾಯ್ಕ್, ಅಧ್ಯಕ್ಷರು - ಬಿಜೆಪಿ, ಭಟ್ಕಳ, ಶ್ರೀ ಉಮೇಶ್ ನಾಯ್ಕ್, ಶ್ರೀ ಗೋವಿಂದ್ ನಾಯ್ಕ್, ಶ್ರೀ ಕೃಷ್ಣ ನಾಯ್ಕ್, ಶ್ರೀ ಕೃಷ್ಣ ಎಸಳೆ, ಶ್ರೀಮತಿ ನಾಗಮ್ಮ ಗೊಂಡ, ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀ ಈಶ್ವರ್ ನಾಯ್ಕ್, ಅಧ್ಯಕ್ಷರು - ಕಾಸ್ಕಾರ್ಡ್, ಮುಂತಾದವರು ಉಪಸ್ಥಿತರಿದ್ದರು. 

 #ಅನಂತಕುಮಾರಹೆಗಡೆ_ಕಾರ್ಯಾಲಯ

"I remember each word uttered since my first election in1996. I had said earlier that Anantkumar Hedge wasn't contesting from the constituency, it was the party and it's prinicipal thoughts that was contesting from Uttara Kannada. We are not such politicians who created  slaves to do dirty politics. Rather we united the people over a thought, cause, principles, irrespective of the castes.

We have not gone for glorifying individuals but on the contrary we have always stood with the party and considered it as above all other issues. Whenever individual glorification sneaked in, our matured karyakartas have rejected it. Such wisdom have been inculcated by our organization to our kaaryakartas since 2 decades. This has contributed for a healthy organization, resulting in a smooth election process which we all witnessed recently.

We all know that karyakartas from Sangha Parivar and other in house organisations have strived harder apart from our BJP karyakartas. 

Who inspired them? Why did they approach each and every doorstep to campaign towards our cause?

They didn't do it for Anantkumar Hegde, nor for Sri Narendra Modi-ji. 

It was our party's vision and dedication towards Hindutva, Hindurasthra, our nation and Dharma which inspired them. It was our Bhagawadwaja which contiously inspired them to campaign in our support. 

It's very easy to win for the first time, but it's not the same from subsequent election onwards as anti-incumbency issues raises across the people. I heard some of our karyakartas calling me as an accidental candidate for this constituency.  It's our party and organisations decision that I am being selected to contest from this constituency.  Some people might be day dreaming to dethrone Anantkumar Hegde from this position. I suggest them not to think too much over it, as I am willing to leave this position voluntarily if only the right person emerges.

I would like to share a thought among you all, that people without notion or  knowledge of duites and responsibility of an MP talk about development.  You people aren't just normal citizen, you are leaders, kaaryakartas, Incharge of our party. You are not mere Hamalis to work during a particular season. You people aren't chamachas of Anantkumar Hegde, Sunil Naik, Dinakar Shetty or likes to work for their victory.  Will repeat again, people present here are proud karyakartas of a Nationalistic Party.  We strive hard during election for our party, and similarly we should work in bridging the Government and people after the election."

#AnantkumarHegde

Uttara Kannada Loksabha Constituency Member, Sri Anantkumar Hegde,  participated in the post election review meet held at Bhatkal, recently.

Sri Lingaraj Patil, District In-charge, BJP, Sri Vinod Prabhu, Sri Sunil Naik, MLA-Bhatkal, Sri Rajesh Naik, President- BJP, Bhatkal, Sri Umesh Naik, Sri Govind Naik, Sri Krishna Naik, Sri Krishna Esale, Smt. Nagamma Gonda, Member-Zilla Panchayat and Sri Ishwar Naik, President, KASCARD and others were present on the occasion. 

#OfficeOfAnantkumarHegde


Related posts