Outreach

Anant Sampark

Participated in the post election review meet with Sirsi Urban & Rural Karyakartas held, recently

 

"ಚುನಾವಣೆ ಬರುವುದಕ್ಕಿಂತ ಮುಂಚೆ, ಅಂದರೆ 3 ವರ್ಷಗಳಿಂದ, ವಿಧಾನಸಭಾ ಚುನಾವಣೆ, ನಂತರದಲ್ಲಿ ನಿರಂತರ ಸಂಘಟನೆಯ ಚಟುವಟಿಕೆ, ನಮ್ಮ ಪ್ರಭಾರಿಗಳು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜೊತೆಯಲ್ಲಿ ನಮ್ಮ ಶಕ್ತಿ-ಕೇಂದ್ರದ ಪ್ರಮುಖರು ಬರುತ್ತಿದ್ದರು.  ಇವೆಲ್ಲ ಹೆಸರುಗಳು ಪದ್ಧತಿ, ಹೊಸದಾಗಿ ಸೇರಿರುವಂತಹ ಕಾರ್ಯಕರ್ತರಿಗೆ ತಿಳಿಯುತ್ತಿರಲಿಲ್ಲ.  ಅವರೆಲ್ಲರಿಗೂ, ಇದೇನಿದು ಇದು ಚುನಾವಣೆ ನಡೆಯುವ ರೀತಿಯಲ್ಲ, ಈ ಶಕ್ತಿ-ಕೇಂದ್ರ ಎಂದರೇನು, ಪ್ರಭಾರಿ ಯಾರು ಅವರೇನು ಮಾಡುತ್ತಾರೆ, ಹೀಗೆಲ್ಲ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.  ಆದರೆ ಪ್ರತಿಯೊಂದು ಮನೆಯವರೆಗೂ ಸಂಘಟನೆಯನ್ನು ತಗೆದುಕೊಂಡು ಹೋಗಲು channel ಮಾಡಿಕೊಟ್ಟಿದ್ದು ಅವರೇ.

 

ಎಲ್ಲರೂ ಹೇಳುತ್ತಾರೆ ದೇಶದಲ್ಲಿ ಮೋದಿ ಅಲೆಯಿದೆಯೆಂದು, ಹೌದು ಇದೆ.  ಆದರೆ 540ಕ್ಕೆ 540 ಕ್ಷೇತ್ರಗಳನ್ನು ಯಾಕೆ ಗೆಲ್ಲುವುದಿಲ್ಲ. ಕರ್ನಾಟಕದಲ್ಲಿ ಇದೆ, ಬೇರೆ ಕಡೆ ಇಲ್ಲವೇ, ಯಾಕೆ ಎಲ್ಲಾ ಕಡೆ ಕೆಲಸ ಆಗಲಿಲ್ಲವೇ? ಎಲ್ಲಾ ಕಡೆಯಲ್ಲೂ ಕೇಂದ್ರ ಸರಕಾರದ ಕಾರ್ಯಕ್ರಮ ಒಂದೇ ರೀತಿಯಲ್ಲಿದೆ.  ಮಾಧ್ಯಮಗಳು ಅದನ್ನು ಒಂದೇ ರೀತಿಯಲ್ಲಿ ಬಿತ್ತರ ಮಾಡಿದ್ದರೆ, ಪತ್ರಿಕೆಗಳಲ್ಲಿ ಒಂದು ರೀತಿ ಬಂದಿದೆ, ಆದರೂ ಈ ವ್ಯತ್ಯಾಸ ಯಾಕೆ..?  ನಿಂತಿರುವ ಎಲ್ಲ  ಅಭ್ಯರ್ಥಿಗಳು ಗೆಲ್ಲುವುದಿಲ್ಲಾ ಯಾಕೆ?  ನಾವು ಉತ್ತರ ಪ್ರದೇಶದಲ್ಲಿ ಎಷ್ಟು ಸೀಟು ಬರುವುದು, ಬಂಗಾಳದಲ್ಲಿ ಎಷ್ಟು ಬರುವುದು, ಒಟ್ಟು 280 ಅಥವಾ 300 ಬರಬಹುದು ಎಂದು ಚರ್ಚಿಸುತ್ತೇವೆ.  ಅಲೆಯಲ್ಲಿ ಗೆಲುವುದಾದರೆ ಎಲ್ಲ ಕಡೆ ಗೆಲ್ಲಬೇಕಿತ್ತು, ಹಾಗಾದರೆ ಅಲೆ ಇಲ್ಲವಾ?  ಅಲೆ ಇಲ್ಲಾಂತ ಅಲ್ಲ, ಆದರೆ ಅಲೆಯನ್ನು ಹಿಡಿದಿಡುವ ಸಾಮರ್ಥ್ಯ ಇರುವುದು ಸಂಘಟನೆಗೆ ಮಾತ್ರ.  ಯಾವ ಸಂಘಟನೆ ಶಕ್ತಿಶಾಲಿಯಾಗಿದ್ದು, ಅಭಿವೃದ್ಧಿ ಸಂದೇಶವನ್ನು ಕೊನೆಯ ಮನೆಯವರೆಗೂ ತಲುಪಿಸುತ್ತದೋ ಅಲ್ಲಿ, ಅಲೆ encash ಆಗುತ್ತದೆ. 

 

ಸಮುದ್ರದಲ್ಲಿ, ನದಿಯಲ್ಲಿ ಅಲೆಯಿರುತ್ತದೆ...... ನೀರು ಇರುತ್ತದೆ ಆದರೆ ನಮಗೆ ನೀರು ಬೇಕೆಂದರೆ ನಾವು ಕೂಡ ಅಥವಾ ನಮಗೆ ಬೇಕಾಗುವಷ್ಟು ನೀರು ಹಿಡಿದುಕೊಳ್ಳುವ ಪಾತ್ರೆಯನ್ನು ತಗೆದುಕೊಂಡು ಹೋಗಬೇಕು, ಬರೆ ಕೈಯಲ್ಲಿ ಹೋದರೆ ಬರೆ ಅಲೆಯಷ್ಟೇ, ನೀರಷ್ಟೇ ಇರುತ್ತದೇ, ಅದನ್ನು ನೋಡಬಹುದಷ್ಟೇ. 

 

ದೇಶದದಲ್ಲಿರುವ ರಾಜಕೀಯ ವಾತಾವರಣ ಹೇಗಿದೆಯಂದರೆ ನಮಗೆ ಮೋದಿಯವರೆ ಬರಬೇಕು ಎನ್ನುವ ವಾತವರಣವೇನಿದೆ, ಅದನ್ನು ಹಿಡದಿಟ್ಟುಕೊಂಡು, ಮತವಾಗಿ ಪರಿವರ್ತನೆ ಮಾಡುವುದಕ್ಕೆ ಪ್ರಯತ್ನ ಮಾಡಿರುವಂತವರು ನಮ್ಮ ಪಕ್ಷ ಹಾಗೂ ಪರಿವಾರದ ಕಾರ್ಯಕರ್ತರು.  ಜಿಲ್ಲಾಧ್ಯಕ್ಷರಿಂದ ಹಿಡಿದು ಕಟ್ಟಕಡೆಯ ಪೇಜ್ ಪ್ರಮುಖರನ್ನು ಹಿಡಿದು, ಇವರೆಲ್ಲರನ್ನು ನೇಮಿಸಿದಾಗ ಎಷ್ಟೋ ಜನರಿಗೆ ಕಿರಿಕಿರಿ ಎನಿಸಿತ್ತು, ಆದರೆ ಯುದ್ಧಕ್ಕೆ ಹೋಗುವಾಗ ಕೈಗೆ ಬಂದೂಕು ಕೊಟ್ಟರೆ ಸಾಲದು, ಯುದ್ಧದಲ್ಲಿ ಎಷ್ಟು ಬುಲ್ಲೆಟ್ ಖಾಲಿಯಾಗುತ್ತದೋ, ಅದರ ಹತ್ತರಷ್ಟು ಯುದ್ಧದ ಅಭ್ಯಾಸದಲ್ಲಿ ಬಳಸಬೇಕು, ಅಂದರೆ ಮಾತ್ರ ಯುದ್ಧ ಗೆಲ್ಲಲು ಸಾಧ್ಯ. 

 

ನಮ್ಮ ಆಯ್ಕೆ ಸ್ಪಷ್ಟವಾಗಿರಬೇಕು, ಯಾವುದೇ ಗೊಂದಲಗಳಿರಬಾರದು, ಈ ನಿಟ್ಟಿನಲ್ಲಿ ಕೆಲಸ ಮಾಡಿ, ಇದನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ನಮ್ಮ ಕಾರ್ಯಕರ್ತರು ಮಾಡಬೇಕು. 

 

ಮೊಟ್ಟ ಮೊದಲನೆಯದಾಗಿ ಹೀಗೆ ಪ್ರಯತ್ನ ಮಾಡಿರುವಂತಹ ನಮ್ಮ ಎಲ್ಲಾ ಕಾರ್ಯಕರ್ತರಿಗೆ ಅತ್ಯಂತ ಕೃತಜ್ಞತೆಯಿಂದ, ನಮ್ಮ  ಹೃತಪೂರ್ವಕ ಅಭಿನಂದನೆ ಸಲ್ಲಿಸಲೇಬೇಕು.

 

ಒಬ್ಬ ವ್ಯಕ್ತಿಯ ಸಾಮರ್ಥ್ಯಕ್ಕೆ ಯಾವಾಗಲೂ ಇತಿ-ಮಿತಿಗಳಿರುತ್ತದೆ.  ಆದರೆ ಅದೇ ಒಂದು ಸಂಘಟನೆಯ ಸಾಮರ್ಥ್ಯಕ್ಕೆ ಯಾವ ಇತಿ-ಮಿತಿಯಿರಲೂ ಸಾಧ್ಯವೇ ಇಲ್ಲ ಎಂದು ಒಂಮನಸ್ಸಿನಿಂದ ನಾವು ಸಂಘಟನೆಯವರು ಕೆಲಸಮಾಡಿದರೆ, ನಮ್ಮೆದರು ನಿಲ್ಲಲು ಯಾರಿಗೂ ಸಾಧ್ಯವೇ ಇಲ್ಲ. 

 

ಕಳೆದ ೫ ಬಾರಿಯಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆಯೆಂದರೆ, ಇಲ್ಲಿಯ ಸಂಘಟನೆಯು ಅಷ್ಟು ಗಟ್ಟಿಯಿದೆ ಎಂದರ್ಥ.  ಚುನಾವಣೆಯ ಮುಂಚೆಯೇ ಕಾಂಗ್ರೆಸ್ ಈ ಕ್ಷೇತ್ರವನ್ನು ಕೈಚಲ್ಲಬೇಕಾದರೆ, ಈ ಕ್ಷೇತ್ರದಲ್ಲಿ ನಿಲ್ಲಿಸಲು ನಮ್ಮಲ್ಲಿ ಅಭ್ಯರ್ಥಿ ಇಲ್ಲ, ನಾವು ಇಲ್ಲಿ ಗೆಲ್ಲುವುದಿಲ್ಲವೆಂದೇ ಅರ್ಥ.  ಇದು ಸಾಮಾನ್ಯವಾದ ಅಭಿಪ್ರಾಯವಲ್ಲ.  ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ, ನೆನಪಿರಲಿ.  ಏಪ್ರಿಲ್ 23ಕ್ಕೆ ಚುನಾವಣೆ ಮುಗಿದಿದೆ, ಕಾಂಗ್ರೆಸ್ ಮತ್ತೆ ತನ್ನ ಸಂಘಟನೆಯನ್ನು ಚುರುಕುಗೊಳಿಸಲಿದೆ. ಬೇರೆ ಬೇರೆ ಕಾರಣಗಳಿಂದ ಕಳೆದ ಚುನಾವಣೆಯ ಚಿತ್ರಣ ಬೇರೆಯಾಗಿರಬಹುದು, ಆದರೆ ಮುಂದೆ ಬರುವ ನಗರಸಭೆ, ಜಿಲ್ಲಾ ಪಂಚಾಯತ್ ಮುಂತಾದ ಚುನಾವಣೆಯಲ್ಲಿ ಕಾಂಗ್ರೆಸ್ ನಮ್ಮ ವಿರುದ್ಧವಾಗಿ ನಿಲ್ಲುವುದು. ಅದೊಂದು ರಾಷ್ಟ್ರೀಯ ಪಕ್ಷ, ಪ್ರಜಾಪ್ರಭುತ್ವದಲ್ಲಿ ಎಂದಿಗೂ ನಮ್ಮ ವಿರೋಧಿಗಳು ಕೂಡ ಗಟ್ಟಿಯಾಗೇ ಇರಬೇಕು, ಅದಿಲ್ಲವೆಂದರೆ ಪ್ರಜಾಪ್ರಭುತ್ವ ತನ್ನ ಮಹತ್ವ ಕಳೆದುಕೊಳ್ಳುತ್ತದೆ.

 

ನಾನು ಇಲ್ಲಿಯವರೆಗೂ ನನಗೆ ವೋಟ್ ಕೊಡಿಯೆಂದು ಕೇಳಲಿಲ್ಲ, ಈ ಬಾರಿಯೂ ಕೇಳಲಿಲ್ಲ, ಮುಂದೆಯೂ ಕೇಳುವುದಿಲ್ಲ. ನಾನೊಬ್ಬ leader ಅಲ್ಲ, ನಮ್ಮ ಸಿದ್ಧಾಂತದಲ್ಲಿ leader ಅನ್ನೋ ಪದವಿಲ್ಲ.  ಶ್ರೀ ನರೇಂದ್ರ ಮೋದಿಯವರಾಗಲಿ ಶ್ರೀ ಅಮಿತ್ ಶಾ ರವರಾಗಲಿ, ಶ್ರೀ ಯಡಿಯೂರಪ್ಪನವರಾಗಲಿ, ನಮಗೆ ನಮ್ಮ ಭಗವಾಧ್ವಜವೇ ಗುರು.  ಅದನ್ನೇ ನಂಬಿಕೊಂಡು ನಾವು ಬಂದಿದ್ದೇವೆ....... ಪ್ರತಿಯೊಂದು ಕ್ಷಣ ಸಿಕ್ಕಿರುವಂತಹ ಸಂಸ್ಕಾರ ಅದರದ್ದೇನೆ...... ಈ ಸಂದರ್ಭದಲ್ಲಿ ಆ ಸಿದ್ಧಾಂತವನ್ನು ಬದಿಗಿಟ್ಟು, ನಾನೇ ದೊಡ್ಡಮನುಷ್ಯ, ನನಗೆ ನೀವು ವೋಟ್ ಕೊಡಿ ಎಂದು ಕೇಳಿದರೆ ನನ್ನಷ್ಟು ದೊಡ್ಡ ಮೂರ್ಖ ಯಾರಿಲ್ಲ!!! ಖಂಡಿತವಾಗಿಯೂ ನಾನು ಇಷ್ಟು ದಿನದವರೆಗೂ ಅಂತಹ ಮೂರ್ಖ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. 

 

ನಮ್ಮ ಪಕ್ಷವೇ ಇಲ್ಲಿಯ ಪ್ರತಿನಿಧಿ, ನಮ್ಮ ಸಿದ್ಧಾಂತವೇ ಇಲ್ಲಿಯ ಪ್ರತಿನಿಧಿ, ನಮ್ಮ ಭಗವಾನೇ ನಮ್ಮ ಪ್ರತಿನಿಧಿ ಎಂದು ನೀವೆಲ್ಲರೂ ಮತ ನೀಡಿದ್ದೀರಿ ವಿನಹ, ಅನಂತಕುಮಾರ ಹೆಗಡಯಂತಲ್ಲ. 

 

ನಮ್ಮ ರಾಷ್ಟ್ರೀಯ ಅಧ್ಯಕ್ಷರು ಒಮ್ಮೆ ಎಲ್ಲಾ ಶಾಸಕರನ್ನ, ಸಂಸದರನ್ನು ಸೇರಿಸಿಕೊಂಡು ಒಂದು ಮಾತು ಹೇಳಿದ್ದರು.... 'ಇಲ್ಲಿ ನಾವು ಯಾರನ್ನೋ ಶಾಸಕರನ್ನಾಗಿ ಮಾಡಬೇಕು, ಇನ್ಯಾರನ್ನೋ ಸಂಸದನಾಗಿ ಮಾಡಬೇಕು, ಮತ್ತೊಬ್ಬರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಚುನಾವಣೆಯಲ್ಲಿ ಭಾಗವಹಿಸುತ್ತಿಲ್ಲ.  ನಮ್ಮೆದರಿಗೆ ಭಗವಾಧ್ವಜವಿದೆ..... ಇದಕ್ಕೆ ಜಗತ್ತಿನಲ್ಲಿ ಗೌರವ ಸಿಗುವ ಹಾಗೆ ನಡೆದುಕೊಳ್ಳಬೇಕು, ಜಗತ್ತಿನಲ್ಲಿ ನಮಗೆ ಎಲ್ಲಾ ಕಡೆ ಗೌರವ ಸಿಗುವ ಹಾಗೆ ಆಗಬೇಕು.  ಅಲ್ಲಿಯವರೆಗೂ ನಮ್ಮ ಅಭಿಯಾನ ನಿಲ್ಲುವುದಿಲ್ಲ.

 

ಚುನಾವಣೆ ಮುಗಿತು, ಇನ್ನು ನಾವು free, rest, ಈ ಪದಗಳು ಯಾರ dictionary ನಲ್ಲಿದೆಯೋ ಅವರು ಎಂದಿಗೂ ಉದ್ಧಾರ ಆಗಲು ಸಾಧ್ಯವಿಲ್ಲ.  ಯಾರಿಗೆ ತನ್ನ ಬದುಕಿನಲ್ಲಿ free ಅನ್ನುವ ಪದವನ್ನು ಅಳವಡಿಸಿಕೊಂಡಿರುತ್ತಾರೋ ಅಂಥವರು ಬದುಕಿನಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ.  ಯಾರ ಬದುಕಿನಲ್ಲಿ ಮಹತ್ವಾಕಾಂಕ್ಷೆ ಇದೆಯೋ, ಛಲ ಇದೆಯೋ, ಯಾರ ಜೇವನದಲ್ಲಿ ಏನೋ ಒಂದು ದೊಡ್ಡ ಸಾಧನೆ ಮಾಡಬೇಕೋ ಅಂಥವರು rest, free, impossible ಈ ಮೂರು ಪದಗಳನ್ನು ಅವರ ಜೀವನದಿಂದ ತಗೆದು ಹಾಕಬೇಕು. 

 

ಹಿಂದೆ ನನ್ನನ್ನು ಪೊಲೀಸರು ಭಟ್ಕಳದಲ್ಲಿ ಅರೆಸ್ಟ್ ಮಾಡಿ ಬಳ್ಳಾರಿ ಜೈಲಿನಲ್ಲಿ ಹಾಕಿದ್ದರು..... ಚಿತ್ರಹಿಂಸೆ ಕೊಟ್ಟಿದ್ದರು ಎದ್ದೇಳಿಕ್ಕೂ ಆಗುತ್ತಿರಲಿಲ್ಲ..... ಆಗ ಮರುದಿವಸ ನಮ್ಮ ಪ್ರಮುಖರೊಬ್ಬರು ಬಂದು ಅನಂತ ಏನ್ಮಾಡೋದಪ್ಪಾ, ನಿನಗೆ TADA ಹಾಕುತ್ತಾರಂತೆ.  TADA ಹಾಕಿದರೆ ಜೀವನವೇ ಮುಗಿತು ಅಲ್ಲೇ ಇರಬೇಕು ಎಂದರು.  ನನಗೆ ಏನು ಅನಿಸಲಿಲ್ಲ.... ಅವರಿಗೆ ಹೇಳಿದೆ, ಒಳ್ಳೆಯದಾಯಿತು ನನಗೆ ಸ್ವಲ್ಪ ಪುಸ್ತಕಗಳನ್ನು ತಂದುಕೊಡಿ ಒಡ್ಕೊಂಡ್ ಇರ್ತೀನಿ ಅಂದೆ.  ನಾನು ಅಲ್ಲಿಂದ ಬರುವಾಗ ನನ್ನ ಪ್ಯಾಂಟು ಷರ್ಟು ಎಲ್ಲಾ ಅಲ್ಲೇ ಇಟ್ಟು ಬಂದೆ; ಬರಬೇಕಾದರೆ ಜೈಲರ್ ಹೇಳಿದರು 'ಇದನ್ನು ತಗೆದುಕೊಂಡು ಹೋಗು' ಎಂದು... ಅವರಿಗೆ ಹೇಳಿದ್ದೆ ಇವೆಲ್ಲಾ ಇಲ್ಲೇ ಇರಲಿ ನಾನು ಮತ್ತೆ ಬರುತ್ತೇನೆ ಎಂದು.  ಆ ಹೆದರಿಕೆ, ನಿರಾಸೆ ಯಾರ ಬದುಕಿನಲ್ಲಿ ಇರುತ್ತದೋ ಅವರು ಎಂದು ಏನನ್ನು ಸಾಧಿಸುವುದಕ್ಕೆ ಆಗುವುದಿಲ್ಲ.  

 

23ರ ನಂತರದಲ್ಲಿ ಅವಲೋಕನಾ ಸಭೆ ಮಾಡಬೇಕು, ಆದರೆ ಅದಕ್ಕಿಂತ ಮುಂಚೆಯೇ ಮಾಡುತ್ತಿದ್ದೇವೆ, ನಾವು rest ನಲ್ಲಿ ನಂಬಿಕೆ ಇಟಿಲ್ಲಾ, ನಾವು free ಆಗುವುದರಲ್ಲಿ ನಂಬಿಕೆ ಇಟ್ಟಿಲ್ಲಾ, ಅದಕ್ಕೋಸ್ಕರ "ತನ್ನಂತೆ ಪರರ,ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ" ಅಂತ ನಿಮ್ಮನ್ನು ನಾನು free ಆಗಿ ಬಿಡಬೇಕು ಎಂದು ಅನಿಸುತ್ತಿಲ್ಲ, ನಿಮಗೆ rest ಕೊಡಬೇಕು ಎಂದು ಅನಿಸುತ್ತಿಲ್ಲ, ಅದಕ್ಕೋಸ್ಕರವೇ ಇಂದಿನ ಸಭೆ ಕರೆದಿರುವುದು.

 

ನಾನು ಇಂದು ಈ ಕುರ್ಚಿಯಲ್ಲಿದ್ದೇನೆ, ನಾಳೆ ಇರುತ್ತೇನೋ ಇಲ್ಲವೋ ಗೊತ್ತಿಲ್ಲ, ಹಿಂದೆ ಯಾರೋ ಇದ್ದರು, ಮುಂದೆ ಯಾರು ಬೇಕಾದರು ಬರಬಹುದು ನಮಗೆ ಗೊತ್ತಿಲ್ಲ, ಆದರೆ ನಮ್ಮ ಗುರಿ ಸಂಘಟನೆಯಲ್ಲಿ!  ನಾವು ಇಟ್ಟುಕೊಂಡಿರುವ ಗುರಿ ಯಾರನ್ನೋ ಗೆಲ್ಲಿಸುವುದಲ್ಲ... ಅಧಿಕಾರದಲ್ಲಿರುವುದಲ್ಲ.... ಒಂದು ಬಾರಿ ಗೆಲ್ಲುವುದು, ಒಂದು ಬಾರಿ ಪ್ರಧಾನಮಂತ್ರಿಯಾಗುವುದು, ಸರಕಾರ ನಡೆಸುವುದು ಅಲ್ಲ,  ನಮ್ಮ ದೇಶದಲ್ಲಿ ಭಗವಾಧ್ವಜಕ್ಕೆ ಯಾವ ರೀತಿ ಗೌರವ ಸಿಗುತ್ತಿದೆಯೋ ಜಗತ್ತಿನ ಎಲ್ಲಾ ಮೂಲೆ ಮೂಲೆಗಳಲ್ಲೂ ಅದೇ ರೀತಿಯ ಗೌರವ ಸಿಗಬೇಕು, ಅಲ್ಲಿಯವರೆಗೂ ನಮ್ಮ ಅಭಿಯಾನ ನಿಲ್ಲುವುದಿಲ್ಲ."

 

#ಅನಂತಕುಮಾರಹೆಗಡೆ

 

ಸೋಮವಾರದಂದು, ಶಿರಸಿಯಲ್ಲಿ ನಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ, ಶಿರಸಿ ನಗರ ಹಾಗೂ ಗ್ರಾಮಾಂತರ ಕಾರ್ಯಕರ್ತರ ಅಭಿನಂದನೆ ಹಾಗೂ ಚುನಾವಣೆ ಅವಲೋಕನ  ಸಭೆಯನ್ನು ಮಾನ್ಯ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿ ಮಾತನಾಡಿದರು. 

ಈ ಸಭೆಯಲ್ಲಿ ಶ್ರೀ ಗಣಪತಿ ನಾಯ್ಕ್, ನಗರ ಬಿಜೆಪಿ,ಅಧ್ಯಕ್ಷರು, ಶ್ರೀ ರಮಾಕಾಂತ ಹೆಗಡೆ, ಗ್ರಾಮಾಂತರ ಅಧ್ಯಕ್ಷರು, ಶ್ರೀ ಕೃಷ್ಣ ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಶ್ರೀ ಗಣೇಶ್ ಸಣ್ಣಲಿಂಗಣ್ಣನವರ್,ರೈತ ಮೋರ್ಚಾ ಜಿಲ್ಲಾಧ್ಯಕ್ಷರು, ಶ್ರೀಮತಿ ಉಷಾ ಹೆಗಡೆ, ಜಿಲ್ಲಾ ಪಂಚಾಯತ್ ಸದಸ್ಯರು,ಶ್ರೀಮತಿ ಪ್ರಭಾವತಿ ಗೌಡ, ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀ ಚಂದ್ರು ದೇವಾಡಿಗ, ತಾಲೂಕು ಪಂಚಾಯತ್ ಉಪಾಧ್ಯಕ್ಷರು, ಶ್ರೀಮತಿ ರೇಖಾ ಹೆಗಡೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರು, ಶ್ರೀ ನಂದನ ಸಾಗರ, ಮುಂತಾದವರು ಉಪಸ್ಥಿತರಿದ್ದರು.

 #ಅನಂತಕುಮಾರಹೆಗಡೆ_ಕಾರ್ಯಾಲಯ

Uttara Kannada Loksabha Constituency Member, Sri Anantkumar Hegde,  participated in the post election review meet with Sirsi Urban & Rural Karyakartas held, recently.

Sri Ganapathi Naik, President, Sirsi Town - BJP,   Sri Ramakanth Hegde, President, Sirsi-Rural, Sri Krishna Esale, General Secretary, Uttara Kannada District, Sri Ganesh Sannalingannanavar, District President, Raita Morcha, Smt. Usha Hegde, Zilla Panchayat Member, Smt.Prabhavati Gowda, Zilla Panchayat Member, Sri Chandru Devadiga, Vice President, Taluk Panchayat, Smt. Rekha Hegde, District President, BJP - Mahila Morcha, Smt.Nandana Sagar and others were present on the occasion. 

#OfficeOfAnantkumarHegde

Related posts