Outreach

Anant Sampark

ಸಾಂಪ್ರದಾಯಕ ಕೃಷಿ ತನ್ನ ಇತಿ-ಮಿತಿಯೊಳಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ!

ಸಾಂಪ್ರದಾಯಕ ಕೃಷಿ ತನ್ನ ಇತಿ-ಮಿತಿಯೊಳಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ರೋಗ-ನಿರೋಧಕ ಶಕ್ತಿ, ಬೆಳೆ ಇಳುವರಿ, ಬದಲಾಗುತ್ತಿರುವ ಮಾರುಕಟ್ಟೆ ಬೇಡಿಕೆಗಳು, ರೈತನ ಆರ್ಥಿಕ ಸ್ಥಿತಿ-ಗತಿ ಎಲ್ಲವೂ ಅಯೋಮಯವಾಗುತ್ತಿದೆ!  ಹೆಚ್ಚಿನದಾಗಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿರುವ ಈ ಸಂದರ್ಭದಲ್ಲಿ ಕೃಷಿಗೆ ನೀರು ನಿರೀಕ್ಷಿಸುವುದು ಮುಗ್ಧತೆಯ ಮೂರ್ಖತನವಾಗಬಹುದು..!!   ಈ ಸವಾಲುಗಳ ಹಿನ್ನಲೆಯಲ್ಲಿ ಕದಂಬದ ಸುಮಾರು ೨ ದಶಕಕ್ಕೂ ಹೆಚ್ಚಿನ ಕಾಲದ, ಕೃಷಿ ಮತ್ತು ತೋಟಗಾರಿಕೆಯ ಪ್ರಯೋಗಗಳು ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳು ನೀಡುತ್ತಲಿವೆ.  ಹಾಗು ಹಲವು ನೂತನ ಬೆಳೆಗಳ ಆವಿಷ್ಕಾರಗಳನ್ನು ರೈತ ಸಮಾಜಕ್ಕೆ ಕದಂಬದಿಂದ ಪರಿಚಯಿಸಲ್ಪಟ್ಟಿದೆ.  ಅರಗು ಕೃಷಿ, ಅಗರ್ ಮರ, ಪಾಮರೊಸಾ ಸುಗಂಧ ಬೆಳೆ, citronella, ಮಜ್ಜಿಗೆ ಹುಲ್ಲು, ಪುನಶ್ಚೇತನಗೊಂಡ ವೆನಿಲ್ಲಾ ಹಾಗು ಗೋಡಂಬಿಬೆಳೆ,dragon fruit, chia seeds ಹಾಗು teff seeds ಹೀಗೆ ಕೆಲವು ಸಾಕ್ಷಾತಗೊಂಡ ಕದಂಬದ ಪರಿಶ್ರಮದ ಬೆಳೆಗಳು.  ಇವೆಲ್ಲವೂ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ತಮ್ಮ ಪ್ರಯೋಗಗಳನ್ನು ಕಂಡು ಇಂದು ದೂರದ ಮೈಸೂರಿನ ರೈತರ ಮನಗೆದ್ದಿದೆ ಎಂದರೆ ಆಶ್ಚರ್ಯ ಪಡಬೇಕಿಲ್ಲ.  ನನ್ನ ಇತ್ತೀಚಿನ ಮೈಸೂರಿನ ಭೇಟಿ ಸಂದರ್ಭದಲ್ಲಿ ಅಲ್ಲಿನ ನನ್ನ ರೈತ ಮಿತ್ರರು ತಮ್ಮ ಹೊಲ-ತೋಟಗಳಲ್ಲಿ ಅರಗು ಕೃಷಿ, ಪಾಮರೊಸಾ, ಸಿಟ್ರೋನೆಲ್ಲಾ ಎಲ್ಲವನ್ನು ಸ್ವೀಕರಿಸಿ ವಸುಧೆಯ ಮಡಿಲಲ್ಲಿ ಹುಲುಸಾಗಿ ಪ್ರೀತಿಯಿಂದ ಬೆಳೆಸುತ್ತಿರುವುದು ಗಮನಿಸಿದಾಗ ಸಾರ್ಥಕ್ಯದ ಕ್ಷಣಗಳ ಅನುಭವ  ಪಡೆದೆ..!  ಅದರಲ್ಲೂ ಹಲವು ರೈತರು ತಮ್ಮ ಎಂದಿನ ತಂಬಾಕು ಬೆಳೆಯನ್ನು ವಿಸರ್ಜಿಸಿ ಅರಗನ್ನು ದೊಡ್ಡ ಮಟ್ಟದಲ್ಲಿ ತೆಗೆದುಕೊಂಡಿರುವುದು ಈ ರೈತರ ಸಾಮಾಜಿಕ ವೈಚಾರಿಕತೆ ಮತ್ತು ಪರಿಸರ ಕಾಳಜಿಯನ್ನು ಬಹಳ ಗೌರವಯುತವಾಗಿ ವಂದಿಸುತ್ತಾ ತಲೆಬಾಗಿಸುತ್ತೇನೆ.  ನಾನು ಈ ಹಿಂದೆ ಅವರಿಗೆ ಈ ರೀತಿಯ ಬದಲಾವಣೆ ಮಾಡಬಹುದು ಎಂದು ತಿಳಿಸಿದಾಗ ಈ ರೈತರು ಅದಕ್ಕೆ ಸ್ಪಂದಿಸಿ, ಬದಲಾದ ಅವರ ಚಿಂತನೆ ಮತ್ತು ಕಾರ್ಯ-ಸೂಚಿ ನಂಬಲಸದಲ ರೀತಿಯಲ್ಲಿ ಬದಲಾವಣೆಗೊಂಡಿರುವುದು ಬಹು ಅನನ್ಯ.   ಧನ್ಯೋಸ್ಮಿ!

Related posts

Last, but not least!