Outreach

Anant Sampark

Took part in the Gandhi Sankalpa Yatra a walk march at Kumta from Bastipete to Gandhi Chowk

" ಗಾಂಧಿ ಜಯಂತಿಯ 150ನೇ ವಾರ್ಷಿಕೋತ್ಸವದ ಅಂಗವಾಗಿ  ನಮ್ಮ ಸರಕಾರವು ದೇಶದೆಲ್ಲೆಡೆ ಈ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.  ಗಾಂಧಿಯವರ ತತ್ವವನ್ನು ಕಾರ್ಯಾನುಷ್ಠಾನಗೊಳಿಸುತ್ತಿರುವವರು ಬಿಜೆಪಿಯವರು.  ರಾಮರಾಜ್ಯದ ಕನಸನ್ನು ಕೊಟ್ಟಂತವರು ಗಾಂಧೀಯವರು.  ಇದನ್ನು ವಿಶ್ವ ಹಿಂದೂ ಪರಿಷತ್, ಆರ್ ಎಸ್ ಎಸ್ ಅಥವಾ ಬಿಜೆಪಿಯವರು ನೀಡಿದ್ದಲ್ಲ. ಆದರೆ ಅದನ್ನು ನನಸಾಗಿ ಮಾಡುವುದಕ್ಕೆ ಹೊರಟಿರುವವರು ಬಿಜೆಪಿಯವರು. 

ಗ್ರಾಮದ ಸ್ವಚ್ಛತೆಯ ಬಗ್ಗೆ, ದೇಶದ ಸ್ವಚ್ಛತೆಯ ಬಗ್ಗೆ, ಸಮಾಜದ ಸ್ವಚ್ಛತೆಯ ಬಗ್ಗೆ ಗಾಂಧಿಯವರು ತಮ್ಮ ಜೀವನದ ಉದ್ದಕ್ಕೂ ಹೇಳುತ್ತಾ ಬಂದವರು.  ಆದರೆ ಇದನ್ನು ಅಭಿಯಾನದ ರೀತಿಯಲ್ಲಿ ತಗೆದುಕೊಡಿರುವವರು ನಾವು, ಬಿಜೆಪಿಯವರು......

ಅಂತ್ಯೋದಯವನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು, ಆದರೆ ಅಂತ್ಯೋದಯವನ್ನ ನಿಜವಾದ ಅರ್ಥದಲ್ಲಿ ಸಮಾಜದಲ್ಲಿ ಕಾರ್ಯಾನ್ವಯಗೊಳಿಸುತ್ತಿರುವರು ನಾವು, ಬಿಜೆಪಿಯವರು.....

ಸುಮಾರು 85 ವರ್ಷಗಳ ಹಿಂದೆ ಗಾಂಧೀಯವರು ನಮ್ಮ ಜಿಲ್ಲೆಗೆ ಬಂದಿದ್ದರು.  ಆಗ, ಅವರು ಕಾರವಾರದ ಒಂದು ಮನೆಯಲ್ಲಿ ನೆಲೆಸಿದ್ದರು, ಅದೇ ಮನೆಯಿಂದ ನಿನ್ನೆ ಪಾದಯಾತ್ರೆ ಪ್ರಾರಂಭಿಸಿದ್ದೇವೆ. 

ಅವರು ಕಾರವಾರಕ್ಕೆ ಬಂದು ಅಲ್ಲಿಂದ ಅವರು ಅಂಕೋಲ, ಕುಮಟಾ, ಶಿರಸಿ, ಹೀಗೆ ಅವರ ಪ್ರವಾಸ ಮುಂದುವರಿದಿತ್ತು.  ಆದರೆ ಅಂದು ಅವರು ಬಂದಿದ್ದು ಸ್ವಾತಂತ್ರ್ಯ ಹೋರಾಟದ ದೃಷ್ಟಿಯಿಂದ ಅಲ್ಲಾ, ಹರಿಜನರ ಉದ್ಧಾರದ ದೃಷ್ಠಿಯಿಂದ ಬಂದಿದ್ದರು.  ಎಲ್ಲಾ ಕಡೆಯಲ್ಲಿ ಈ ಅಸ್ಪೃಶ್ಯತೆಯ ನಿವಾರಣೆಯು ಹೇಗೆ ಮಾಡಬೇಕೆನ್ನುವ ಸಂದೇಶವನ್ನು ಗಾಂಧೀಯವರು ತಂದಿದ್ದರು.  ಆದರೆ ಅವರು ಬಂದು ಹೋಗುವಾಗ ಅದರ ಬಿರುಗಾಳಿ ಹೇಗಿತ್ತು ಎಂದರೆ, ನಂತರದಲ್ಲಿ ಸ್ವಾತಂತ್ರ್ಯ ಹೋರಾಟದ ಕಹಳೆ ಇಲ್ಲಿ  ಮೊಳಗಿತು.

ಗಾಂಧೀ ಅವರು ಹೇಳಿರುವುದನ್ನು ನಾವು ಇಂದು ಮಾಡುತ್ತಿದ್ದೇವೆ..... ಆದರೆ ಅವರ ಹೆಸರು ಹೇಳಿ ವೋಟು ತಗೆದುಕೊಂಡು ಮಜಾ ಮಾಡಿದವರು ಬೇರೆಯವರು.  ಇನ್ನು ಅವರಿಗೆ ಗಾಂಧಿ ಹೆಸರು ಬಿಟ್ಟು ಬದುಕುವುದಕ್ಕೆ ಸಹ ಆಗುವುದಿಲ್ಲಾ.  ಅವರಿಗೆ ಆ ಹೆಸರೇ ಬೇಕು.  ಗಾಂಧಿಯವರ ತತ್ವಕ್ಕೆ ತಿಲಾಂಜಲಿಯನಿಟ್ಟು, ಗಾಂಧಿ ಹೆಸರನ್ನ ಮಾತ್ರ ಉಳಸಿಕೊಂಡು ರಾಜಕರಣ ಮಾಡುತ್ತಾ ಬಂದಿದ್ದಾರೆ.  

ಆದರೆ ನಮಗೆ ಗಾಂಧಿ ಹೆಸರಿನಲ್ಲಿ ರಾಜಕಾರಣ ಮಾಡಬೇಕಾಗಿಲ್ಲ.    ಒಬ್ಬ ಮಹಾಪುರುಷರು ಯಾವ ಕಲ್ಪನೆಯನ್ನು ಹೊಂದಿದ್ದರೋ, ಯಾವ ತತ್ವ ಆದರ್ಶಗಳನ್ನು ಇಟ್ಟು ಕೊಂಡಿದ್ದರೋ ಅದರಂತೆ ನಡೆಯಬೇಕು ಎನ್ನುವ ಪಕ್ಷ ನಮ್ಮದು.  ನಾವು ಎಲ್ಲವನ್ನು ರಾಜಕೀಯ ದೃಷ್ಟಿಯಿಂದ ನೋಡುವುದಿಲ್ಲ. ಯಾರು ಒಳ್ಳೆಯದನ್ನು ಮಾಡಿರುತ್ತಾರೋ ಅದನ್ನು ಒಪ್ಪಿಕೊಳ್ಳುತ್ತೆವೆ.

|| ಆನೋ ಭದ್ರ ಕ್ರತವೋ ಯಂತು ವಿಶ್ವತಹ ||

ಒಳ್ಳೆಯ ವಿಚಾರಗಳು ಜಗತ್ತಿನ ಯಾವುದೇ ಮೂಲೆಯಲಿದ್ದರು, ನಮ್ಮ ಬಳಿ ಹರಿದುಬರಲಿ ಎನ್ನುವ ಸಂಪ್ರದಾಯ, ಸಂಸ್ಕೃತಿ ನಮ್ಮದು.  ಯಾರು ಒಳ್ಳೆಯದನ್ನು ಮಾಡಿದ್ದರು ಅದನ್ನು ನಾವು ಮಾಡುತ್ತಿದ್ದೇವೆ.  ಗಾಂಧೀಯವರೆ ಕರೆಕೊಟ್ಟಿದ್ದರು ರಾಮರಾಜ್ಯವಾಗಬೇಕು ಎಂದು.... ಅದಕ್ಕೋಸ್ಕರ ನಾವು ಇಂದು ರಾಮರಾಜ್ಯಕ್ಕೆ ಹೆಜ್ಜೆಯಿಟ್ಟಿದ್ದೇವೆ. November 17 ಕ್ಕೆ ಅಥವಾ ಅದಕ್ಕೂ ಮೊದಲೇ ನೀವೆಲ್ಲರೂ ಅದಕ್ಕೆ ಸಾಕ್ಷಿಯಾಗುತ್ತೀರಿ.  

ಮುಂದಿನ ದಿನಗಳಲ್ಲಿ ಈ ಸಮಾಜವನ್ನು ಕಿತ್ತು ತಿನ್ನುತಿರುವ ಅನೇಕ ಸಮಸ್ಯೆಗಳಿಗೆ  ಗಾಂಧೀಯವರು ತಮ್ಮ ಜೀವನದಲ್ಲಿ ಪರಿಹಾರವನ್ನು ಸೂಚಿಸಿದ್ದರು..... ಅದನ್ನು ಇಂದು ನಮ್ಮ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಂಕಣಬದ್ಧರಾಗಿ ಸಮಾಜಕ್ಕೆ ತಗೆದುಕೊಂಡು ಹೊರಟಿದ್ದೇವೆ.... ಇಡೀ ದೇಶದಲ್ಲೇ ಇದು ಒಂದು ದೊಡ್ಡ ಆಂದೋಲನವೆಂದು ಮನದಟ್ಟಾಗಿದೆ........  ಜಗತ್ತು ನಮ್ಮನು ಒಪ್ಪಿಕೊಳ್ಳುತ್ತಿದೆ... ಹಾಗೆ ನಮ್ಮ ವಿಚಾರಧಾರೆಗಳನ್ನು ಆರಾಧಿಸುತ್ತಿವೆ...

ಇಂದು ನಾವು ಇಲ್ಲಿ ಕೆಲವೇ ಜನರು ಸೇರಿರಬಹುದು ಆದರೆ ಮುಂದಿನ ದಿನದಲ್ಲಿ ಇದು ದೊಡ್ಡ ಪ್ರವಾಹದ ಹಾಗೆ ಎಲ್ಲೆಡೆ ಹರಡಬೇಕು ಎಂದು ನಿಮ್ಮೆಲ್ಲರಲ್ಲಿ ವಿನಂತಿಸುತ್ತೇನೆ.."

#ಅನಂತಕುಮಾರಹೆಗಡೆ

ಗಾಂಧೀಯವರ 150ನೇ ಜಯಂತಿಯ ಅಂಗವಾಗಿ ದೇಶದೆಲ್ಲೆಡೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಹಮ್ಮಿ ಕೊಂಡಿರುವ  ಗಾಂಧಿ ಸಂಕಲ್ಪ ಯಾತ್ರೆಯ ನಿಮಿತ್ತ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಅನಂತಕುಮಾರ ಹೆಗಡೆಯವರು, ಗುರುವಾರದಂದು ಕುಮಟಾದ ಬಸ್ತಿಪೇಟೆಯಿಂದ ಗಾಂಧಿ ಚೌಕದವರೆಗೆ ನಡೆದ "ಗಾಂಧಿ ಸಂಕಲ್ಪ" ಪಾದ-ಯಾತ್ರೆಯಲ್ಲಿ ಭಾಗವಹಿಸಿದರು.  

ಈ ಸಂದರ್ಭದಲ್ಲಿ ಶ್ರೀ ದಿನಕರ ಶೆಟ್ಟಿ, ಶಾಸಕರು, ಕುಮಟಾ, ಬಿಜೆಪಿ ಜಿಲ್ಲಾ ಮುಖಂಡರಾದ ಶ್ರೀ ವಿನೋದ ಪ್ರಭು, ಶ್ರೀ ವೆಂಕಟೇಶ್ ನಾಯಕ, ಶ್ರೀ ಎನ್.ಎಸ್.ಹೆಗಡೆ, ಡಾ.ಜಿ.ಜಿ ಹೆಗಡೆ, ಶ್ರೀ ನಾಗರಾಜ ನಾಯಕ, ವಕೀಲರು, ಶ್ರೀ ನಾಗರಾಜ ನಾಯಕ ತೊರ್ಕೆ, ಶ್ರೀ ಗಜಾನನ ಗುನಗಾ, ತಾಲೂಕಾ ಅಧ್ಯಕ್ಷರಾದ ಶ್ರೀ ಕುಮಾರ್ ಮಾರ್ಕಂಡೇಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಗಜಾನನ ಪೈ, ಶ್ರೀ ಹೇಮಂತ್ ಕುಮಾರ, ಶ್ರೀ ನವೀನಕುಮಾರ್ ಹಾಗೂ ಹಲವಾರು ಬಿಜೆಪಿ ಮುಖಂಡರು ಪಾಲ್ಗೊಂಡಿದ್ದರು.

#ಅನಂತಕುಮಾರಹೆಗಡೆ_ಕಾರ್ಯಾಲಯ

"On the occasion of 150th birth anniversary of Mahatma Gandhi, we, on behalf of our party have organised this foot march across the country.  Today, BJP has been sincerely following principle's of Gandhi.  It was he who dreamt of having a Ramrajya across the nation and it was not an idea proposed either by Vishwa Hindu Parishat, RSS or BJP..... 

Today, such dreams are realized, thanks to BJP governments.

Gandhi preached about having cleanliness across villages, society and country  throughout his life.  But it is his thoughts which are reformed and brought into action mode as a movement  by BJP government.

He embraced Antyodaya in his life, but in the true sense it was BJP, which implemented the same in our societies.

Gandhi had visited our district, around 85 years back.  Yesterday, we flagged off our foot March from the same residence where Gandhi had resided during his visit to Karwar.

He came to Karwar & from there he continued his tour across Ankola, Kumta, Sirsi and so on.  But the motto of the tour wasn't national independence struggle, rather it was independence upliftment of Harijan's.  He had come here to spread the social awareness on abolishing untouchability everywhere.  His visit was such that it ignited the spark of freedom fight in everyone.

Today, we are following the path laid by Gandhi, but people who took vote and enjoyed power in the name of Gandhi have denounced his principle's and are just enjoying the privilege using his name.  They can't survive  without the name of Gandhi.  We, in BJP, don't have to do rely upon the name of Gandhi, for politics.  

Our party sincerely abides the principles and the path showed by the great personalities who sacrificed themselves for national cause.  We don't consider doing dirty politics in each and everything, rather we accept and follow the good works initiated from any quarters.

|| आ नो भद्राः क्रतवो यन्तु विश्वतः ||

As goes the Rig Veda quote, we believe and practise the sookta "Let the noble thoughts come to us from all parts of the world".....

Our culture is so vibrant that we welcome and accept the good thoughts flowing to us from all parts of the world.....  Gandhi had called for Ramarajya, and we are on the path of realizing his dream......  You will witness the first benchmark towards Ramarajya on or before17th November, itself...!!!

Gandhi had suggested several solutions for the problems and hurdles that we face today.....  We the karyakartas of BJP on warfoot basis have decided to spread the thoughts of Gandhi and make this a revolutionary moment across the nation. 

Today, we may be less in numbers who have gathered here.  But I would urge everyone to take this task and create a great impact of this movement in a bigger way across the nation."

#AnantkumarHegde


Sri Anantkumar Hegde, Hon'ble Member of Parliament, Uttara Kannada constituency, took part in the "Gandhi Sankalpa Yatra" a walk march at Kumta from Bastipete to Gandhi Chowk. The programme has been a brainchild of our Hon'ble Prime Minister, Sri Narendra Modi to commemorate the 150th birth anniversary of Gandhi.

Sri Dinakar Shetty, MLA, Kumta, Sri Vinod Prabhu, BJP District Leader, Sri Venkatesh Nayak, Sri S S Hegde, Dr G G Hegde, Sri Nagraj Nayak, Advocate, Sri Nagraj Nayak Torke, Sri Gajanan Gunaga, Sri Kumar Markandeya, BJP- Taluk President, Sri Gajanan Pai, Zilla Panchayat Member, Sri Hemanth Kumar, Sri Naveen Kumar and other BJP leaders and karyakartas were present on the occasion.

 

#OfficeOfAnantkumarHegde

Related posts