ಡಿ.ಸಿ.ಸಿ ಬ್ಯಾಂಕಿನ ಚುನಾವಣೆಯ.....!

ಉತ್ತರ ಕನ್ನಡ ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಹಾಗೂ ಉಪಾಧ್ಯಕ್ಷರಾಗಿ ಸಹಕಾರ ಭಾರತಿಯ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಮೋಹನದಾಸ ನಾಯಕ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದು ಇವರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಸಹಕಾರ ಭಾರತಿಯು ಪಕ್ಷಾತೀತ ನಿಲುವಿನೊಂದಿಗೆ ಸಹಕಾರಿ ಶುದ್ದೀಕರಣ, ವೃದ್ಧೀಕರಣ ಹಾಗೂ ಆಧುನಿಕರಣ ಎಂಬ ಗುರಿಯೊಂದಿಗೆ ಸಹಕಾರ ಭಾರತಿಯ ಹೆಚ್ಚಿನ ಸದಸ್ಯರು ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ದಿಸಿ, ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ.
ಸಹಕಾರ ಭಾರತಿಯು ಜಿಲ್ಲೆಯಲ್ಲಿ ಕಳೆದ ೨-೩ ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದರ ಪರಿಣಾಮವಾಗಿ ಈ ಬದಲಾವಣೆ ಸಾಧ್ಯವಾಗಿದೆ.
ಡಿ.ಸಿ.ಸಿ ಬ್ಯಾಂಕಿನ ನೂತನ ಅಧ್ಯಕ್ಷ ಉಪಾಧ್ಯಕ್ಷರ ನೇತೃತ್ವದ ಆಡಳಿತ ಮಂಡಳಿಯು ಸ್ವಚ್ಚ ಹಾಗೂ ಪಾರದರ್ಶಕ ಆಡಳಿತವನ್ನು ನೀಡಲಿ ಹಾಗೂ ಜಿಲ್ಲೆಯ ಸಹಕಾರಿ ಕ್ಷೇತ್ರ, ಕೃಷಿ,ಮೀನುಗಾರಿಕೆ, ಹೈನುಗಾರಿಕೆ ಹಾಗೂ ಕೂಲಿ ಕಾರ್ಮಿಕರ ಕ್ಷೇತ್ರವು ಅಭಿವೃದ್ಧಿಯತ್ತ ಸಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸುತ್ತೇನೆ.
ಹಾಗೂ ಸಹಕಾರ ಕ್ಷೇತ್ರಕ್ಕೆ ತನ್ನದೇ ಆದಕೊಡುಗೆಯನ್ನು ನೀಡುತ್ತಿರುವ ಸಹಕಾರ ಭಾರತಿ ರಾಜಾಧ್ಯಕ್ಷರಾದ ಶ್ರೀ ಎಸ್.ಆರ್.ಸತಿಶ್ಚಂದ್ರ ಹಾಗೂ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸಹಕಾರ ಭಾರತಿಯ ಕೊಂಕೊಡಿ ಪದ್ಮನಾಭ ಇವರಿಗೂ ತುಂಬು ಹೃದಯದ ಅಭಿನಂದನೆಗಳು.
#ಅನಂತಕುಮಾರಹೆಗಡೆ