ಉಪಚುನಾವಣಾ ಪ್ರಚಾರ ಸಭೆ - ಯಲ್ಲಾಪುರ
ಇಂದು ಮಾನ್ಯ ಸಂಸದ ಶ್ರೀ ಅನಂತಕುಮಾರ ಹೆಗಡೆಯವರು ಯಲ್ಲಾಪುರ ತಾಲೂಕಿನ ಉಪಳೇಶ್ವರದಲ್ಲಿ ನಡೆದ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾನ್ಯ ಸಂಸದರು ಯಲ್ಲಾಪುರ ಪಟ್ಟಣದಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಶಿವರಾಮ ಹೆಬ್ಬಾರ್ ಪರವಾಗಿ ಮತ ಯಾಚಿಸಿದರು.
ಮಾನ್ಯ ಸಂಸದರೊಂದಿಗೆ ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು - ಕುಮಟಾ, ಶ್ರೀ ಕೃಷ್ಣ ಎಸಳೆ, ಪ್ರಧಾನ ಕಾರ್ಯದರ್ಶಿ, ಬಿಜೆಪಿ-ಉತ್ತರ ಕನ್ನಡ, ಶ್ರೀ ಗೋಪಾಲಕೃಷ್ಣ ಭಟ್, ತಾಲೂಕ ಅಧ್ಯಕ್ಷರು, ಶ್ರೀಮತಿ ರೇಖಾ ಹೆಗಡೆ, ಶ್ರೀ ಪ್ರಮೋದ ಹೆಗಡೆ, ಹಾಗೂ ಮುಂತಾದವರು ಉಪಸ್ಥಿತರಿದ್ದರು.
#ಅನಂತಕುಮಾರಹೆಗಡೆ_ಕಾರ್ಯಾಲಯ