Outreach

Anant Sampark

Visited the residence of fishermen who went missing along with the fishing boat “Suvarna Tribhuja” from deep seas fishing area.

ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗು ಉದ್ಯಮಶೀಲತೆಯ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು, ಕಳೆದ ತಿಂಗಳು “ಸುವರ್ಣ ತ್ರಿಭುಜ” ಬೋಟ್‌ನಲ್ಲಿ  ಮೀನುಗಾರಿಕೆಗೆ ತೆರಳಿ ಕಾಣೆಯಾದ ಹೊನ್ನಾವರದ ಅನಂತವಾಡಿಯ ಶ್ರೀ ರವಿ ಹರಿಕಾಂತ,  ಕುಮಟಾ ತಾಲೂಕಿನ ಮದನಗೇರಿಯ ಶ್ರೀ ಸತೀಶ್ ಹರಿಕಾಂತ ಹಾಗು ಕುಮಟಾ ತಾಲೂಕಿನ ಹೊಲನಗದ್ದೆಯ ಶ್ರೀ ಲಕ್ಷ್ಮಣ್ ಹರಿಕಾಂತರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಧೈರ್ಯ ತುಂಬಿದರು.  ಈ ಸಂದರ್ಭದಲ್ಲಿ ಕುಟುಂಬದವರು ಮಗನನ್ನು ಆದಷ್ಟು ಬೇಗ ಹುಡುಕಿಕೊಡುವಂತೆ ಸಚಿವರಲ್ಲಿ ವಿನಂತಿಸಿದರು.

ಸಚಿವರು, ಭಾರತೀಯ ನೌಕಾ ಸೇನೆ, ಕೋಸ್ಟಲ್ ಗಾರ್ಡ, ಕರಾವಳಿ ರಕ್ಷಣಾ ಪಡೆ ಸಂಪೂರ್ಣವಾಗಿ ಶೋಧ ಕಾರ್ಯ ನಡೆಸುತ್ತಿದ್ದು, ಆದಷ್ಟು ಕೂಡಲೇ ಮಾಹಿತಿ ದೊರೆಯಲಿದೆ ಎಂದು ಆಶಿಸಿದರು. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ತನಿಖೆಗೆ ಆಗ್ರಹಿಸಿದ್ದು, ಸಂಬಂಧಿಸಿದ ಇಲಾಖೆಗೆ ಬೋಟ್ ಹಾಗೂ ಮೀನುಗಾರರನ್ನು ಹುಡುಕುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಸುನಿಲ ನಾಯ್ಕ, ಶಾಸಕರು - ಭಟ್ಕಳ, ಬಿ.ಜೆ.ಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ಎಸ್.ಹೆಗಡೆ, ಶ್ರೀ ಕೃಷ್ಣ ಎಸಳೆ, ಶ್ರೀ ವೆಂಕಟೇಶ ನಾಯ್ಕ್, ಶ್ರೀ ಸುಬ್ರಾಯ ನಾಯ್ಕ, ಮಂಡಲ ಅಧ್ಯಕ್ಷರು, ಶ್ರೀ ರಾಜು ಭಂಡಾರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳು, ಮುಂತಾದವರು ಜೊತೆಯಲ್ಲಿದ್ದರು.

 

Hon'ble Union Minister of State for Skill Development & Entrepreneurship Sri Anantkumar Hegde visited the residence of Sri Ravi Harikanta at Anantavadi of Honnavara taluk, Sri Satish Harikanta at Madanagere of Kumta taluk and Sri Laxman Harikanta at Holanagadde of Kumta taluk, three among those fishermen who went missing along with the fishing boat “Suvarna Tribhuja” from deep seas fishing area, last month.  He consoled the family and asked them not to lose their hopes.  The fisherman's family requested to speed up the search operations.

 The Minister conveyed the family that, Coastal Guard and Naval authorities are conducting extensive search operations to trace the missing boat and its fishermen at the earliest.  He also pointed out that the  Union Government has passed strict orders in this context, and urged all the concerned rescue teams to consider this as top priority.

 

 Sri Sunil Naik, MLA – Bhatkal, district general secretaries Sri N S Hegde, Sri Krishna Yesale, Sri Venkatesh Naik, Sri Subraya Naik, President – BJP Mandala, Sri Raju Bhandari, BJP General Secretary and many others were present during this visit.

 

Related posts