Infinite Thoughts

Thoughts beyond imagination

ಶ್ರೀ ಶಂಕರಾಚಾರ್ಯ ಜಯಂತಿ !

ಆಧುನಿಕ ಜಗತ್ತಿನ ವಿಜ್ಞಾನ ನಿನ್ನೆ- ಮೊನ್ನೆ ಹೇಳಿದ ಅನೇಕ ಸಂಗತಿಗಳನ್ನು ಅವರು 1200 ವರ್ಷಗಳ ಹಿಂದೆಯೇ  ಪ್ರಸ್ತುತ ಪಡಿಸಿದ್ದರು ಶ್ರೀಮದ್ ಆದಿಶಂಕರರು.

ನಾವು ನೋಡುವ, ಗ್ರಹಿಸುವ ಪ್ರಪಂಚವು ನಿಜವಲ್ಲ, ಅದು ಭೌತಿಕ ಜಗತ್ತಿನ ತ್ರಿಮೂರ್ತ ಅನಾವರಣ.. (೩D ಪ್ರಕ್ಷೇಪ ) ಎಂದು ಆಧುನಿಕ ಭೌತಶಾಸ್ತ್ರ ( Quantum Physics) ಹೇಳಿದ್ದಾರೆ .ಇದನ್ನೇ ಆಚಾರ್ಯ ಶಂಕರರು ಮಾಯಾ ಜಗತ್ತು ಎಂದು ಸಂಭೋಧಿಸಿದ್ದರು..ಮಾಯೆ ಎಂದರೆ ಏನು ಎಂಬುದನ್ನು ಕಾಲ-ಕಾರ್ಯ-ಕಾರಣಗಳ (೩D ಪ್ರಕ್ಷೇಪ )  ಸ್ಪಷ್ಟ ವಿವರಣೆಯೊಂದಿಗೆ ಜಗತ್ತಿನ ಮುಂದಿಟ್ಟಿದ್ದರು.

ಅದೇ ರೀತಿ, ಪ್ರತಿ ಜೀವಿಯೂ ಒಂದು ಮಹಾಪ್ರಜ್ಞೆಯ (consciousness) ಭಾಗವಾಗಿದ್ದು, ಪ್ರತ್ಯೇಕಗೊಂಡು ನಂತರ ಅದೇ ಪ್ರಜ್ಞೆಯಲ್ಲಿ ವಿಲೀನಗೊಳ್ಳುತ್ತದೆ ಅನ್ನುವುದನ್ನು  ಆಧುನಿಕ ಭೌತಶಾಸ್ತ್ರ (Quantum Physics) ಹೇಳುತ್ತದೆ.

ಜೀವಾತ್ಮವು ಪರಬ್ರಹ್ಮನ ಒಂದು ಅಂಶವಾಗಿದ್ದು ಮೋಕ್ಷದೊಂದಿಗೆ ಪುನಃ ಅದೇ ಪರಬ್ರಹ್ಮದೊಂದಿಗೆ ವಿಲೀನಗೊಳ್ಳುತ್ತದೆ ಎಂದು ಶಂಕರರು ನಿಖರವಾಗೇ ಸಾರಿದ್ದರು.ಆಧುನಿಕ ವಿಜ್ಞಾನದ ಚಿಂತನೆ ಎಲ್ಲಿ ಕೊನೆಗೊಳ್ಳುತ್ತದೆಯೋ ಅಲ್ಲಿಂದ ಭಾರತೀಯ  ತತ್ವಶಾಸ್ತ್ರ ಪ್ರಾರಂಭವಾಗುತ್ತದೆ. ಅದು ಈ ನೆಲದ ವೈಶಿಷ್ಟ್ಯ.

ಜೀವನದ ಪ್ರತಿ ಹೆಜ್ಜೆಯಲ್ಲಿಯೂ ಈ ಸತ್ಯವನ್ನು ಬದುಕಿ ತೋರಿಸಿದವರು ಆಚಾರ್ಯ ಶಂಕರರು.

ಅವರ ಜಯಂತಿಯ ಪುಣ್ಯ ದಿನದಿಂದ ಅವರನ್ನು ಸ್ಮರಿಸಿ ಧನ್ಯರಾಗೋಣ.. ಅವರ ವಿಚಾರದೊಂದಿದೆ ನಮ್ಮ  ಬದುಕನ್ನೂ ಅನುಸಂಧಾನಿಸುವ ಪ್ರಯತ್ನದಲ್ಲಿ ಶ್ರೀಮದ್ ಆಚಾರ್ಯರ ಸ್ಮರಣೆಯಲ್ಲಿ ಅನಂತ ಪ್ರಣಾಮಗಳು 

 

#ಅನಂತಕುಮಾರಹೆಗಡೆ

Related posts