ನರಸಿಂಹ ಜಯಂತಿ ದಿನವಾದ ಇಂದು ದುಷ್ಟರ ಕಪಿಮುಷ್ಟಿಯಿಂದ ನಮ್ಮ ರಾಜ್ಯವನ್ನು ಮುಕ್ತಿ ಮಾಡಿಸು ಎಂದು ಬೇಡಿಕೊಳ್ಳೋಣ.
“ಉಗ್ರಂ ವೀರಂ ಮಹಾವಿಷ್ಣುಮ್ ಜ್ವಲಂತಃ ಸರ್ವತೋಮುಖಮ್
ನೃಸಿಂಹಂ ಭೀಷಣಮ್ ಭದ್ರಂ ಮೃತ್ಯುಂಮೃತ್ಯು ನಮ್ಯಾಮ್ಯ ಹಮ್”
ಮುಗ್ಧ ಬಾಲಕನ ಪರಮ ಭಕ್ತಿಗೆ ಮೆಚ್ಚಿ ಕಂಬದಿಂದ ಉದಿಸಿ, ದುಷ್ಟ ಸಂಹಾರ ಮಾಡಿದ ನರಸಿಂಹನ ಜಯಂತಿ ಇಂದು. ಇವತ್ತು ನಮ್ಮ ಜಗತ್ತಿನಲ್ಲಿ ಧರ್ಮವನ್ನೊಡೆದು ಅಧರ್ಮದ ಮಾರ್ಗದಲ್ಲೇ ಸಾಗುವವರ ಸಂಹಾರಕ್ಕೂ ಅವನ ನಾಮದ ನೆನಕೆ ಬೇಕಾಗಿದೆ….. ಅವನ ಉಗ್ರತೆ ಮತ್ತು ಕೋಪ ಸಕಾರಣವಾದದ್ದು ಎಂದೂ, ಅಂತಹ ಸಾತ್ವಿಕ ಕೋಪವು ಸದಾ ಕೆಟ್ಟದ್ದನ್ನು ಪರಿಹರಿಸಿ ಒಳ್ಳೆಯದ್ದನ್ನು ತರಲು ಮಾತ್ರವೇ ಉಪಯೋಗವಾಗುತ್ತದೆ ಎಂದೂ ನಾವು ಗಮನಿಸಬೇಕು. ದುಷ್ಟರ ಕಪಿಮುಷ್ಟಿಯಿಂದ ನಮ್ಮ ರಾಜ್ಯವನ್ನು ಮುಕ್ತಿ ಮಾಡಿಸು ಎಂದು ಆ ಸರ್ವ ಶಕ್ತ ನಮ್ಮ ನರಸಿಂಹನಲ್ಲಿ ಬೇಡಿಕೊಳ್ಳೋಣ.