Infinite Thoughts

Thoughts beyond imagination

ರಾಜ್ಯ ಸರಕಾರ-ರಾಕ್ಷಸ ಸರಕಾರ

ಮತಾಂಧ, ಹೆಣ್ಣುಬಾಕ, ಕನ್ನಡ ವಿರೋಧಿ ಟಿಪ್ಪುವಿನ ಜಯಂತಿಯನ್ನು ಕಾಂಗ್ರೆಸ್ ಸರಕಾರ ರಾಜ್ಯದ ತುಂಬಾ ಆಚರಿಸಿತು.  ಸರಕಾರಿ ಖರ್ಚಿನಲ್ಲಿ ಮುಲ್ಲಾ ಮುತವಲ್ಲಿಗಳ ಸಂಗಡ ಗೋ ಮಾಂಸ ತಿಂದು ಮುಸಲ್ಮಾನರನ್ನು ಮುದ್ದು ಮಾಡಿದರು. ಕೋಟಿ-ಕೋಟಿ  ಖರ್ಚು ಮಾಡಿ ಮತಾಂತರಿ ಟಿಪ್ಪುವಿನ ಗುಣಗಾನ ಮಾಡಿದರು. ರೂಪದಲ್ಲೂ ಸ್ವಭಾವದಲ್ಲೂ ಕುರೂಪಿಯಾಗಿದ್ದ ಮತಾಂಧ ಟಿಪ್ಪುವನ್ನು ವೀರ ಮದಕರಿ ನಾಯಕನಂತೆ ಚಿತ್ರಿಸಿ ಸಂಭ್ರಮಿಸಿದರು. ಪ್ರತಿ ವರ್ಷ ಟಿಪ್ಪು ಜಯಂತಿಯನ್ನು ಸರಕಾರೀ ಹಬ್ಬವಾಗಿ ಆಚರಿಸಲು ಸಿದ್ದು ಸರಕಾರ ನಿರ್ಣಯಿಸಿತು.  ಅಲ್ಪಸಂಖ್ಯಾತರ ತುಷ್ಟಿಕರಣಕ್ಕಾಗಿ ಏನು ಮಾಡಲು ಹೇಸದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿಯನ್ನು ವಿರೋಧಿಸಿದವರನ್ನು ಸರಕಾರ ಬಲ ಬಳಸಿ ಹತ್ತಿಕ್ಕಲು ಪ್ರಯತ್ನಿಸಿತು.  ಕೊಡಗಿನಲ್ಲಿ ಹಿಂದೂ ಕಾರ್ಯಕರ್ತರೊಬ್ಬರ ಬಲಿದಾನವಾಯಿತು. 
 
ಈಗ ಕಾಂಗ್ರೆಸ್ ನ ಹುರಿಯಾಳು ಜಮೀರ್ ಅಹಮದ್ ಖಾನ್ ಟಿಪ್ಪು ಜಯಂತಿಯನ್ನು ಆಚರಿಸಿದ ತಮ್ಮ ಸಾಹಸವನ್ನು ಲಜ್ಜೆ ಇಲ್ಲದೆ ವರ್ಣಿಸಿಕೊಂಡಿದ್ದಾರೆ.  ಅದನ್ನು ವಿರೋಧಿಸಿದ ಹಿಂದೂಗಳು ಪುಕ್ಕಲುಗಳೆಂದು ಹೀಯಾಳಿಸಿದ್ದಾರೆ. ಇಂಥವರನ್ನು ಕಟ್ಟಿಕೊಂಡು ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದ್ದಾರೆ, ಸಿದ್ಧರಾಮಯ್ಯನವರು…!!  ಮೈಸೂರಿನ ಅರಸು ಮನೆತನಕ್ಕೆ ಮೋಸ ಮಾಡಿದ, ಮೇಲುಕೋಟೆಯ ಮಂಡ್ಯಮ್ ಅಯ್ಯಂಗಾರಿ ಬ್ರಾಹ್ಮಣರ ಕಗ್ಗೊಲೆ ಮಾಡಿದ, ದುರ್ಗದ ಹುಲಿ ವೀರ ಮದಕರಿನಾಯಕನನ್ನು ಮೋಸದಿಂದ ಕೊಂದವನು ಇದೆ ಟಿಪ್ಪುಸುಲ್ತಾನನೆಂಬ ನರಹಂತಕ.   ನೂರಾರು ಹಿಂದೂ ಹೆಣ್ಣುಮಕ್ಕಳನ್ನು ಮತ್ತು ನಿಷ್ಪಾಪಿ ಯುವಕರನ್ನು ಬಲವಂತವಾಗಿ ಮತಾಂತರಿಸಿದ, ಒಪ್ಪದಿದ್ದವರನ್ನು ನಂದಿಯ ಟಿಪ್ಪು ಡ್ರಾಪಿನಲ್ಲಿ ಕುದುರೆಗಳಿಂದ ಒದ್ದು ಕೆಳತಳ್ಳಿಸಿ ಮಾರಣಹೋಮಗೈದವನು ಇದೆ ಟಿಪ್ಪು.  ಅವನನ್ನು ಆರಾಧಿಸುವ, ಅವನ ಸಂತಾನವನ್ನೇ ನಂಬಿ ಚುನಾವಣೆಗೆ ನಿಂತಿರುವ ಕಾಂಗ್ರೆಸ್ ನ ಹಿಂದೂ ವಿರೋಧಿ ರಾಜಕೀಯವನ್ನು ಜನ ತುಂಬಾ ಹತ್ತಿರದಿಂದ ಗಮನಿಸುತ್ತಿದ್ದಾರೆ….. ಅಲ್ಲವೇ?
 
ಮುಸಲ್ಮಾನರನ್ನು ಓಲೈಸುವ ಆತ್ಮಘಾತಕ ಕೆಲಸ ಒಂದೆಡೆಯಾದರೆ, ಹಿಂದೂ ಸಮಾಜಕ್ಕೆ ಈ ಕಾಂಗ್ರೆಸ್ ಪಕ್ಷ ಎಸಗಿದ ಮೋಸ ಇನ್ನು ದೊಡ್ಡದು.  ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದ  ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಸಿದ್ದು ಸರಕಾರದ ನಿಬಂಧನೆಗಳು ಹತ್ತಾರು.
 
*ಗಣಪತಿ ಪ್ರತಿಷ್ಠಾಪನೆಗೆ ಹತ್ತು ಲಕ್ಷ ರೂಪಾಯಿ ಬಾಂಡ್ ಇಟ್ಟು  ಅನುಮತಿ ಕೇಳಬೇಕು. 
*ವಿಗ್ರಹದ  ಅಳತೆಯನ್ನು ನಿರ್ಧರಿಸುವುದು ಸರಕಾರವೇ. 
*ವಿಗ್ರಹ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಸ್ಥಳ, ಸಮಯವನ್ನು ಸರಕಾರವೇ ನಿರ್ಧರಿಸುತ್ತದೆ. 
* ಗಣಪತಿಯ ಮೆರವಣಿಗೆ ಮಸೀದಿಯ ಮುಂದೆ ಹೋಗಬಾರದು. 
*ಮೆರವಣಿಗೆಯಲ್ಲಿ ಪಟಾಕಿ ಸಿಡಿಮದ್ದು ಸಿಡಿಸಬಾರದು. ಬಣ್ಣ ಎರಚಬಾರದು. ಡಿಜೆ ಬಳಸಬಾರದು. 
*ಮೆರವಣಿಗೆಯಲ್ಲಿ ಹೆಚ್ಚುಜನ ಸೇರಬಾರದು
 
ಇದು ಹಿಂದುಸ್ತಾನವೇ ಎಂದು ಅನುಮಾನ ಬರುವಂತಿದೆ…. ಅಲ್ಲವೇ,  ಸಿದ್ದು ಸರಕಾರದ ನಿಬಂಧನೆಗಳು! ಹಿಂದೂಗಳ ಶ್ರದ್ಧೆಗೆ ಸರಕಾರಿ ಸುನ್ನತಿ. ಜನಾಗ್ರಹದ ಎದುರು  ಈ ನಿಬಂಧನೆಗಳು ನಿಲ್ಲಲಿಲ್ಲ.  ಆದರೆ ಸಿದ್ದು ಕೃಪಾಪೋಷಿತ ಕಾಂಗ್ರೆಸ್ ಸರಕಾರದ ಈ ನಾಟಕಗಳ ಉದ್ದೇಶ ಬಲು ಸ್ಪಷ್ಟವಾಗಿದೆ.  ಟಿಪ್ಪುವಿಗೆ ಜಯಂತಿ-ಗಣೇಶನಿಗೆ ಸುನ್ನತಿ.  ಹಿಂದೂಗಳ ಭಾವನೆಗೆ ಕವಡೆ ಕಿಮ್ಮತ್ತಿಲ್ಲ. ಅಲ್ಪಸಂಖ್ಯಾತರನ್ನು ಓಲೈಸುವಲ್ಲಿ ಯಾವ ಲಜ್ಜೆಯೂ ಈ ಪಕ್ಷಕ್ಕಿಲ್ಲ. 
 
ಈ ರಾಕ್ಷಸ ರಾಜ್ಯವನ್ನು ಕೊನೆಗಾಣಿಸಲು ನಾಗರಿಕರಿಗೆ ಚುನಾವಣೆಯು ಅವಕಾಶ ಒದಗಿಸಿದ್ದು, ಪ್ರತಿ ಮತವು ದೈತ್ಯರ ವಿರುದ್ಧ ರಾಮಬಾಣವಾಗಲಿದೆ.  ಸರಕಾರದ ವಿರುದ್ಧ ಸಜ್ಜನರ ಸಂಕಲ್ಪ ಕಾರ್ಯಗತವಾದರೆ ರಾಜ್ಯದ ಭವಿಷ್ಯ ಕಮಲದಂತೆ ಅರಳಲಿದೆ.

Related posts