Infinite Thoughts

Thoughts beyond imagination

ಕಮಲ ಅರಳಿಸುವಂತೆ ಮಾಡಿದ ನಮ್ಮ ಅಸಂಖ್ಯ ಕಾರ್ಯಕರ್ತ ಬಂಧುಗಳಿಗೆ ಹೃದಯಪೂರ್ವಕ ಅಭಿನಂದನೆಗಳು

ಚುನಾವಣೆಯ ಕಾವು ಹೀರಿಕೊಂಡಿದೆ. ಇನ್ನುಳುದಿರುವುದು ಸರ್ಕಾರ ರಚನೆಯ ಕಸರತ್ತು ಮಾತ್ರ. ನಮ್ಮ ಜಿಲ್ಲೆಯ ಜನತೆ ಭಾರತೀಯ ಜನತಾ ಪಕ್ಷದ ಕರೆಗೆ ಸ್ಪಂದಿಸಿ ಹಿಂದೆಂದೂ ಕಾಣದಂತ ಒಂದು ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಮಲ ಅರಳಿದೆ. ಲೋಕಸಭಾ ವ್ಯಾಪ್ತಿಗೆ ಬರುವ ಕಿತ್ತೂರು ಸೇರಿದಂತೆ ಒಟ್ಟು ಐದು ಕ್ಷೇತ್ರಗಳು ಪಕ್ಷದ ವಶವಾಗಿದೆ. ಇದುವರೆಗೂ ಎಂದೂ ಜಿಲ್ಲೆ/ಕ್ಷೇತ್ರದಲ್ಲಿ ಈ ಮಟ್ಟಿನ ಕೇಸರಿಕರಣವಾಗಿರಲಿಲ್ಲ.

ಇಂತಹ ಒಂದು ಅಸಾಧಾರಣ ಸ್ಪಂದನೆಗೆ ಕಾರಣೀಕರ್ತರಾಗಿದ್ದು ನಮ್ಮ ನೆಚ್ಚಿನ ಪ್ರಧಾನಿ ಸನ್ಮಾನ್ಯ ಶ್ರೀ ಮೋದಿ-ಜಿ ಮತ್ತು ರಾಷ್ಟ್ರೀಯ ಅಧ್ಯಕ್ಷರಾದಂತ ಸನ್ಮಾನ್ಯ ಶ್ರೀ ಅಮಿತ್-ಜಿ ಯವರು. ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಜನ-ಕಲ್ಯಾಣ ಯೋಜನೆ ಹಾಗು ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಿ, ಅಮೂಲ್ಯವಾದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಹಾಗೆ ಪಕ್ಷದ ಸಂಘಟನೆ, ಪಕ್ಷದ ಬಲ-ವರ್ಧನೆ ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಮಹಾ ಕಾರ್ಯವನ್ನು ಅಮಿತ್-ಜಿಯವರು ಸಮರ್ಥವಾಗಿ ಪಕ್ಷದ ಮೂಲಕ ನಿಭಾಯಿಸಿದ್ದಾರೆ. ಇವರಿಬ್ಬರ ನೇತ್ರತ್ವದ ಪಕ್ಷದ ಕಾರ್ಯಪಡೆ ಸೂಕ್ತವಾಗಿಯೇ ಕಾರ್ಯ ನಿರ್ವಹಿಸಿತು. ಕಾರ್ಯಕರ್ತರು ಹಗಳಿರಲು ಲೆಕ್ಕಿಸದೆ ತಮ್ಮ-ತಮ್ಮ ಕ್ಷೇತ್ರಗಳಲ್ಲಿ ಜನರಿಗೆ ಪಕ್ಷದ ಉಮೇದವಾರಿಕೆಯನ್ನು ಮನವರಿಕೆ ಮಾಡಿಸಿದರು. ಇನ್ನು ನಮ್ಮ ರಾಜ್ಯಾಧ್ಯಕ್ಷರು ತಮ್ಮ ಇಳಿವಯಸ್ಸಿನಲ್ಲಿ ಇಡೀ ರಾಜ್ಯ ಸುತ್ತಿ ಜನರ ಮನವನ್ನು ಗೆದ್ದರು.

ನಮ್ಮ ಜಿಲ್ಲೆ/ಕ್ಷೇತ್ರದ ಜನತೆ ನಮ್ಮ ಪಕ್ಷವನ್ನು ಒಪ್ಪಿ, ನಮ್ಮಲ್ಲಿ ಭರವಸೆ ಇಟ್ಟು ನಮಗೆ ಆದೇಶ ನೀಡಿದ್ದಾರೆ. ಅವರ ಆಶೋತ್ತರಗಳನ್ನು ನಮ್ಮ ಪ್ರತಿನಿಧಿಗಳು ಗೌರವಿಸಿ ಈಡೇಸರಿಸುತ್ತಾರೆಂದು ನಾನು ಖಚಿತವಾಗಿ ನಂಬಿದ್ದೇನೆ. ನಮಗೆ ಮತ ನೀಡಿ ಹರಿಸಿದ ಜಿಲ್ಲೆ/ಕ್ಷೇತ್ರದ ಎಲ್ಲ ಜನತೆಗೂ ಅನಂತ ಧನ್ಯವಾದಗಳು.

ಕಮಲ ಅರಳಿಸುವಂತೆ ಮಾಡಿದ ನಮ್ಮ ಅಸಂಖ್ಯ ಕಾರ್ಯಕರ್ತ ಬಂಧುಗಳಿಗೆ ಹೃದಯಪೂರ್ವಕ ಅಭಿನಂದನೆಗಳು. ಪಕ್ಷ ಸಂಘಟನೆ ಹೀಗೆ ಮುಂದುವರಿಯಲಿ ಮತ್ತು ಇನ್ನಷ್ಟು ಹೆಚ್ಚಿನ ಯಶಸ್ಸು ದೊರೆಯುವಂತಾಗಲಿ ಎಂದು ಆಶಿಸುತ್ತೇನೆ.

Related posts