Infinite Thoughts

Thoughts beyond imagination

ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯು (PMKVY)

ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯು (PMKVY) ದೊಡ್ಡ ಪ್ರಮಾಣದ ಯುವ ಸಮೂಹವನ್ನು ಉತ್ತಮ ಜೀವನದೆಡೆಗೆ ಕೊಂಡೊಯ್ಯುವ ಸಲುವಾಗಿ ಅನೇಕ ಕೌಶಲ್ಯಾಧಾರಿತ ತರಬೇತಿಗಳನ್ನು ಯುವ ಜನತೆಗೆ ಪರಿಚಯಿಸಿತು. ಕೇವಲ ಎರಡೇ ವರ್ಷಗಳಲ್ಲಿ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಅಡಿಯಲ್ಲಿ ತರಬೇತಿ ಹೊಂದಿದ ೫ ಲಕ್ಷಕ್ಕೂ ಹೆಚ್ಚಿನ ಯುವ ಜನತೆ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಬಹಳಷ್ಟು ಜನ ಸ್ವಂತ ಉದ್ಯಮವನ್ನು ಆರಂಭಿಸಿ ಯಶಸ್ವಿಯಾಗಿದ್ದಾರೆ. ತನ್ಮೂಲಕ ನಮ್ಮ ಮೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸಿನ ಕೂಸಾದ ಮತ್ತು ದೂರದೃಷ್ಟಿಗಳ ಪ್ರತೀಕವಾದ ಈ PMKVY ಯೋಜನೆಯು ಅನೇಕ ಕ್ಷೇತ್ರಗಳಲ್ಲಿ ಕೌಶಲ್ಯ ಕೇಂದ್ರಿತ ಯುವ ಜನಾಂಗವನ್ನು ಸೃಷ್ಟಿಸುವುದರೊಂದಿಗೆ ಜಾಗತಿಕ ಮಟ್ಟದ ಸ್ಪರ್ಧೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ.
  •  

Related posts