ಇತ್ತೀಚಿಗೆ ದೆಹಲಿ ಮತ್ತು ಮುಂಬೈ ನಗರದ ಆರ್ಚ್ ಬಿಷಪ್ ಗಳು ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಲೇಖನದ ಕನ್ನಡ ತರ್ಜುಮೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಕೆಲಸ ಮಾಡಿರುವುದಕ್ಕೆ ಸೂಕ್ತವಾಗಿ ಉತ್ತರ ನೀಡಿದ ಡಾ| ಹಿಲ್ಡಾ ರಾಜ ರವರ
ಆರ್ಚ್ ಬಿಷಪ್ ಅನಿಲ್ ಕುಟೋ ಅವರು ‘ನಾವು ಈಗ ಹಾದುಹೋಗುವ ಪ್ರಕ್ಷುಬ್ಧ ಸಮಯವನ್ನು’ ಎಂದು ಪತ್ರದಲ್ಲಿ ಪ್ರಸ್ತಾಪಿಸಿದರೆ, ತಾವು ‘ಅಲ್ಪಸಂಖ್ಯಾತರಲ್ಲಿ ಬೆಳೆಯುತ್ತಿರುವ ಆತಂಕ’ವನ್ನು ನಿಮ್ಮ ಪತ್ರದಲ್ಲಿ ಉಲ್ಲೇಖಿಸಿರುವಿರಿ ಮತ್ತು ಈ ನಿಟ್ಟಿನಲ್ಲಿ “ಸಾಕಷ್ಟು” ಕೆಲಸ ಮಾಡದೆ ಇರುವ ಕಾರಣಕ್ಕಾಗಿ ಸರ್ಕಾರವನ್ನು, ಇಬ್ಬರು ದೂಷಿಸಿದ್ದೀರಿ. ಈ ಮೂಲಕ ಕ್ಯಾಥೋಲಿಕ್ ಚರ್ಚ್ ಏನು ಹೇಳಲು ಬಯಸುತ್ತಿದೆ? ಹೀಗೆ ಪದಗಳಲ್ಲಿ ಆಟವಾಡುವ ಬದಲು, ನೀವುಗಳು ಯಾಕೆ ಮೋದಿ ಸರಕಾರಕ್ಕೆ ನಮ್ಮ ಬೆಂಬಲವಿಲ್ಲವೆಂದು ನೇರವಾಗಿ ಹೇಳಿಕೆ ನೀಡಬಾರದು? ಇಟಲಿ ಮೂಲದ ಸೋನಿಯಾ ಗಾಂಧಿ ಮತ್ತು ಅವರ ಮಗನಾದ ರಾಹುಲ್ ಗೆ ಚರ್ಚ್ ನ ಬೆಂಬಲವಿದೆ ಎಂದು ಘೋಷಿಸಿಕೊಳ್ಳುವುದಕ್ಕೂ ಬಹುಶಃ ಅಗಾಧ ಗಡಸುತನ ಮತ್ತು ಧೈರ್ಯಬೇಕು!! ಚರ್ಚ್ ಗೆ ಈ ತರಹದ ಕಣ್ಣಾ ಮುಚ್ಚಾಲೆಯಾಟ ಒಪ್ಪುವುದಿಲ್ಲ.
ಸರ್ಕಾರ “ಸಾಕಷ್ಟು” ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ಇಲ್ಲಿ, ‘ಸಾಕಷ್ಟು’ ಅಂದರೆ ಏನು? ಎಂದು ನಾನು ಕೇಳಬಯಸುತ್ತೇನೆ – ಕಾರ್ಡಿನಲ್ ಓಸ್ವಾಲ್ಡ್ರವರೇ, ನೀವು ‘ಸಾಕಷ್ಟು’ ಅಂದರೆ ಏನು ಮತ್ತು ಅದರ ಪ್ರಮಾಣವನ್ನು ಸ್ಪಷ್ಟೀಕರಿಸಬೇಕು.
ನಾವು ಪ್ರಾಮಾಣಿಕವಾಗಿ ಗಮನಿಸಿದರೆ, ನೆರೆಹೊರೆಯ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಶೋಷಣೆ ಮತ್ತು ಮೂಲಭೂತ ಹಕ್ಕುಗಳ ನಿರಾಕರಣೆ, ಆ ಸರ್ಕಾರಗಳ ಕಾರ್ಯನಿರ್ವಹಣೆಯ ಭಾಗವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ನನ್ನ ವ್ಯಯಕ್ತಿಕ ಅನುಭವದಿಂದ ಹೇಳುವುದಾದರೆ, ಕ್ಯಾಥೊಲಿಕರು ಮತ್ತು ಚರ್ಚ್ ತಮ್ಮ ನಿಷ್ಠೆಯನ್ನು ವಿಭಜಿಸಿಕೊಂಡಿದೆ.
ದಯಮಾಡಿ ಆತ್ಮೀಯ ಕಾರ್ಡಿನಲ್ ರವರೇ, ಮೊತ್ತ ಮೊದಲನೆಯದಾಗಿ ಅಲ್ಪಸಂಖ್ಯಾತರ ಹಕ್ಕುಗಳ ಉಪಯೋಗವು ಮೊದಲಿಗೆ ಅಲ್ಪಸಂಖ್ಯಾತ ಜನರಿಗೆ ಎಂದು ತಮಗೆ ನೆನೆಪಿಸಬೇಕಾಗಿದೆ. ಸರ್ಕಾರವು ಈ ಸಂಸ್ಥೆಗಳಲ್ಲಿ ನಂಬಿಕೆಯಿಟ್ಟು ಅತೀವವಾಗಿ ಹೂಡಿಕೆ ಮಾಡುತ್ತಿದೆ ಮತ್ತು ಆದರೂ ಸಹ ನೀವು ಸರ್ಕಾರವು ‘ಸಾಕಷ್ಟು’ ಮಾಡುತ್ತಿಲ್ಲವೆಂದು ಬೊಬ್ಬೆ ಹೊಡೆಯುತ್ತಿದ್ದೀರಿ. ನಿಮ್ಮ ಸಂಸ್ಥೆಗಳಲ್ಲಿ ನೀವು ಕೇವಲ ಶ್ರೀಮಂತರಿಗೆ ಮತ್ತು ಉಳ್ಳವರ ವರ್ಗಗಳಿಗೆ ಆದ್ಯತೆ ನೀಡುವ ಮೂಲಕ, ನೀವು ಈ ಅಲ್ಪಸಂಖ್ಯಾತ ಹಕ್ಕುಗಳನ್ನು ಶ್ರೀಮಂತರಿಗೆ ಹೇಗೆ ಮತ್ತು ಯಾಕಾಗಿ ವರ್ಗಾಯಿಸುತ್ತಿದ್ದೀರಿ?
೮೦ರ ದಶಕದಲ್ಲಿ ನಾನು CBCI NAC ಗೆ ಹಾಜರಾಗಲು ಪಾಟ್ನಾಕ್ಕೆ ಹೋದಾಗ, ಪಾಟ್ನಾದ ಬಿಷಪ್ ಅವರ ಧರ್ಮಪ್ರಚಾರದಲ್ಲಿ, ಅಲ್ಲಿನ ಅವರ ಹಿಂಬಾಲಕರನ್ನು ಅತಿ ಬಡವರೆಂದು ಹೇಳಿದರು. ಮುಂದಿನ ವಾಕ್ಯದಲ್ಲಿ ಅವರು, ತಾವು ಮಾಡಿದ ಮೊದಲ ಕೆಲಸವೆಂದರೆ ಒಂದು ಕಾಲೇಜು ಸ್ಥಾಪಿಸಿದ್ದು ಎಂದು ಹೇಳಿದರು. ಅವರ ಈ ಬಡ ಹಿಂಬಾಲಕರು ಒಂದು ಶಾಲೆಯ ಆವರಣವನ್ನು ಪ್ರವೇಶಿಸಿದವರಾಗಿರಲಿಲ್ಲ. ಹಾಗಾ
ಹಾಗಾಗಿ ಕಾರ್ಡಿನಲ್ ರವರೇ, ನೀವಾಗಲಿ ಅಥವಾ ಚರ್ಚ್ ಆಗಲಿ ಉತ್ತಮರೆಂದು ತಿಳಿಯಬೇಡಿ – ಕಾರಣ ಸದಾ ಅಧಿಕಾರಕ್ಕಾಗಿ ಹಪಹಪಿಸುವ ತಮ್ಮ ಹುಂಬಲದಿಂದಾಗಿ! ಇದು ಆ ಬಡಗಿಯ ಮಗನ ವಿಚಾರಧಾರೆಯಾದ “ಆತನ ರಾಜ್ಯವು ಈ ಪ್ರಪಂಚದಲ್ಲ” ವೆನ್ನುವುದಕ್ಕೆ ಸಂಪೂರ್ಣ ವಿರೋಧವಾಗಿದೆ. ಅವರು ಅಂದು ಒಂದು ಮತವನ್ನು ಸ್ಥಾಪಿಸಲಿಲ್ಲ. ಅವರು ಮಾನವೀಯ ಮೌಲ್ಯಗಳಿಗಾಗಿ ನಿಂತರು ಮತ್ತು ಈ ಚರ್ಚ್ ಆ ಮೌಲ್ಯಗಳನ್ನಷ್ಟೇ ಎತ್ತಿಹಿಡಿಯಬೇಕು. ಇದು ಯೇಸುವಿನ ವಿರುದ್ಧ ಸಾಕ್ಷಿಯಾಗಿರಬಾರದು. ಹಾಗಾಗಿ ಸರಕಾರವು ‘ಸಾಕಷ್ಟು’ ಕೆಲಸ ಮಾಡುತ್ತಿಲ್ಲ ಎಂದು ನೀವು ಹೇಳಿದಾಗ, ಅಲ್ಪಸಂಖ್ಯಾತರ ಹೆಸರಿನಲ್ಲಿ ಎಲ್ಲ ಸರ್ಕಾರದ ಹಣವನ್ನು ತೆಗೆದುಕೊಂಡ ನೀವು, ನಿಮ್ಮ ಜವಾಬ್ದಾರಿಯನ್ನು ಏಕೆ ಮಾಡಲಿಲ್ಲ ಎಂಬುದು ನನ್ನ ಯಕ್ಷ ಪ್ರಶ್ನೆ.
ನೀವು ಪ್ರಸ್ತಾಪಿಸಿದ ಆತಂಕಗಳ ವಿಷಯಕ್ಕೆ ಈಗ ಮತ್ತೆ ಮರಳುತ್ತಿದ್ದೇನೆ. ಪ್ರಪಂಚದಲ್ಲಿ ಕ್ಯಾಥೊಲಿಕ್ ಜನರು ಅಲ್ಪಸಂಖ್ಯಾತರಾಗಿ ಶಾಂತಿಯಿಂದ ಮತ್ತು ಯಾವುದೇ ಆತಂಕವಿಲ್ಲದೆ ಜೀವಿಸುತ್ತಾ ಇದ್ದಾರೆಂದರೆ ಅದು ಭಾರತಲ್ಲಿ ಮಾತ್ರವೆಂದು, ನನಗಿಂತ ಚೆನ್ನಾಗಿ ತಾವು ಒಪ್ಪುತ್ತೀರಿ ಎಂದು ತಿಳಿಯುತ್ತೇನೆ. ಈಗ ಹೇಳಿ, ನಮ್ಮಲ್ಲಿ ೧.೨೫ ಶತಕೋಟಿ ಜನಸಂಖ್ಯೆವಿದ್ದಾಗ, ಕೆಲವೊಮ್ಮೆ ದಾರಿತಪ್ಪುವ ಸಂಗತಿಗಳು ಎಡೆಮಾಡಿ ಕೊಡವುದು ಸ್ವಾಭಾವಿಕವಲ್ಲವೇ? ಚರ್ಚ್ ಈ ದೇಶದಲ್ಲಿ ಅನಾದಿಕಾಲದಿಂದಲೂ ಹಿಂಸೆಯನ್ನು ಹುಟ್ಟುಹಾಕಿದೆ. ಅದಕ್ಕೆ ತಮಿಳುನಾಡು ಒಂದು ಉದಾಹರಣೆಯಾಗಿದೆ. ಕ್ರಿಶ್ಚಿಯನ್ ಎನ್. ಜಿ. ಓ ಗಳು ಸಹ ನಮಗೆ ಮತ್ತೊಂದು ತಲೆನೋವು ಆಗಿ ಪರಿಣಮಿಸಿದೆ. ನಮಗೆ ಸಿಕ್ಕಿರುವುದು ‘ವಿಪರೀತ’ ಸ್ವಾತಂತ್
ಕೆಲವು ವರ್ಷಗಳ ಹಿಂದೆ, ಒಂದು ಪ್ರಮುಖ ಪತ್ರಿಕೆಯ ರಕ್ಷಾ ಪುಟದಲ್ಲಿ ‘ಚರ್ಚ್ ಧ್ವಂಸಗೊಳಿಸಲಾಯ್ತು’ ಎಂಬ ಶಿರೋನಾ
ಎನ್. ಜಿ. ಓ ಗಳ ಕೆಲಸದ ಮೌಲ್ಯಮಾಪನ ಮಾಡಲು ನಾನು ಕೆಲವೊಮ್ಮೆ ದೂರದ ಸ್ಥಳಗಳಿಗೆ ಹೋಗುತ್ತಿರುತ್ತೇನೆ. ಮತ್ತು ಹೆಚ್ಚಿನ ಕ್ರಿಶ್ಚಿಯನ್ ಎನ್. ಜಿ. ಓ ಗಳು ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಶಿಲುಬೆ ನೆಟ್ಟು ತಮ್ಮದೆಂದು ಘೋಷಿಸಿಕೊಳ್ಳುವುದು ಕಂಡುಕೊಂಡಿದ್ದೇನೆ. ಒಂದು ಸಂಚಾರಿ ಆಂಬುಲೆನ್ಸ್ ತಂದು ನಿಲ್ಲಿಸಿದರೆ ಆಯಿತು! ಇನ್ನೇನು ಹೆಚ್ಚು ಬೇಡ… ಅಥವಾ ಕಡಿಮೆಯು ಆಗುವುದಿಲ್ಲ! ಆದರೆ ಎಕರೆಗಟ್ಟಲೆ ಜಾಗವನ್ನು ಶಿಲುಬೆಯ ಕೆಳಗೆ ಆಕ್ರಮಿಸಕೊಂಡ ಕ್ರಮ ಮಾತ್ರ ತುಂಬಾ ನಾಚಿಕೆಗೇಡಿನ ವಿಷಯ- ಯಾಕೆಂದರೆ ಇಂತಹ ಆಕ್ರಮ ಸ್ಥಳಗಳಲ್ಲಿ ಮೈಲುಗಟ್ಟಲೆ ನಡೆದರೂ ಯಾವುದೇ ಒಂದು ಸಣ್ಣ ಊರು ಸಹ ಸಿಗುವುದಿಲ್ಲ! ಜಾಗವನ್ನು ಸುಮ್ಮನೆ ಆಕ್ರಮಿಸಿಕೊಂಡು ಬೇಲಿ ಹೊದ್ದು, ಒಂದೋ ಶಿಲುಬೆ ಅಥವಾ ಅರ್ಧ ಚಂದ್ರಾಕೃತಿಯನ್ನು ಸ್ಥಾಪಿಸಿ್ದರೆ ಎಲ್ಲವೂ ಸುರಕ್ಷಿತ! ಆದರೆ ಹಿಂದೂಗಳು ಈ ಕೆಲಸ ಮಾಡಲು ಆಗುವುದಿಲ್ಲ!
ಬಹಳಷ್ಟು ಇಲ್ಲಿನ ಇಗರ್ಜಿಗಳು ಕೆಲವು ಬಿದಿರುಗಳಿಂದ ನಿರ್ಮಿಸಲ್ಪಟ್ಟಿವೆ ಮತ್ತು ಮೇಲ್ಛಾವಣಿಯು ಒಣಹುಲ್ಲಿನ ಅಥವಾ ಪ್ಲಾಸ್ಟಿಕ್ ಟಾರ್ಪೆಲ್ಲಿನ ಹಾಳೆಯ ಮುಚ್ಚಿಗೆಯಾಗಿವೆ. ಇದು ತುಸು ಗಾಳಿಗೆ ಅಲ್ಲಾಡಿ ಬಿದ್ದರು ಮಾಧ್ಯಮಗಳು “ಚರ್ಚ್ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ” ಎಂದು ಬೊಬ್ಬೆಹೊಡೆಯುತ್ತವೆ. ಇದು ಘೋರ ದುಷ್ಕೃತ್ಯ ವೆಂದು ಸಾರುತ್ತಾರೆ! ಈ ರೀತಿಯ ಭೂ-ತೆರಿಗೆ ಪಾವತಿಸದೇ ಭೂಮಿ ಆಕ್ರಮಿಸಿಕೊಳ್ಳುವ ಇಗರ್ಜಿಗಳ ‘ಸ್ವೇಚ್ಚಾಚಾರವನ್ನು’ ಯಾ
ಕಾಂಗ್ರೆಸ್ ತನ್ನ ಅಧಿಕಾರದ ಲಾಲಸೆಗಾಗಿ ರಾಷ್ಟ್ರದ ಧ್ರುವೀಕರಣವನ್ನು ಪ್ರಾರಂಭಿಸಿತು. ಬಾಬರಿ ಮಸೀದಿಯ ಬೀಗ ಮುರಿಯಲು ಆದೇಶಿಸಿ ರಾಮ ರಾಜ್ಯ ತರುವನೆಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಘೋಷಿಸಿದ್ದು, ನೀವು ತಿಳಿದಿರಬಹುದು. ಅಂದು ಸಣ್ಣ ಪ್ರಮಾಣದಲ್ಲಿ ತೊಟ್ಟಿಕ್ಕಲಿಕ್ಕೆ ಪ್ರಾರಂಭಿಸಿದ್ದು, ಇಂದು ಆತನ ಇಟಲಿ ಮೂಲದ ಹೆಂಡತಿಯ ಕಾಲದಲ್ಲಿ ರಭಸ ಪ್ರವಾಹದ ರೂಪ ಪಡೆದುಕೊಂಡಿದೆ. ಈಗ ಅವರ ಮಗ, ನಮ್ಮ ಕುಟುಂಬ ಶಿವ ಭಕ್ತ ಕುಟುಂಬವೆಂದು ಮತ್ತು ತಾನು ಜನಿವಾರ ಧರಿಸುವವನು ಎಂದು ಘೋಷಿಸಿಕೊಂಡಿದ್ದಾನೆ. ನೀವು ಅವನನ್ನು ಬಹಿಷ್ಕರಿಸಿದ್ದೀರಾ? ಮತಗಳಿಸಲು ಅವನು ಜಾತಿ-ಮತ ಉಪಯೋಗಿಸುತ್ತಿದ್ದಾನೆ ಎಂದು ನೀವು ಯಾವುದೇ ಕ್ರಮವನ್ನು ಅವನ ವಿರುದ್ಧ ಕೈಗೊಳ್ಳುವುದಿಲ್ಲ. ಇದು ಜನರನ್ನು ಮೋಸ ಮಾಡಿದ ಹಾಗಾಗಲಿಲ್ಲವೇ? ಈ ರೀತಿಯ ಜಾತ್ಯಾತೀತತೆಯನ್ನು ತಾವು ಸರ್ಕಾರದಿಂದ ನಿರೀಕ್ಷಿಸುತ್ತಿದ್ದೀರಾ?
ಹಾಗಿದ್ದಲ್ಲಿ, ಆತ ಮತ್ತು ಶ್ರೀಮತಿ ಸೋನಿಯಾ ಗಾಂಧಿ ಯಾವ ಮತಕ್ಕೆ ಸೇರಿದವರಾಗಿದ್ದಾರೆ? ಮೊದಲಿಗೆ ಜಾತಿ ಆಧಾರದಲ್ಲಿ ವಿಭಜಿಸುವುದು ನಂತರ ಮತ ಆಧಾರಿತವಾಗಿ ವಿಭಜನೆ ಮಾಡುವುದು ಅಭ್ಯಾಸವಾಗಿದೆ. ದಯಮಾಡಿ ಕಾರ್ಡಿನಾಲ್ ಓಸ್ವಾಲ್ಡ್ ರವರೇ, ತಾವು ಸಹ ಮತ್ತೊಬ್ಬ ರಾಜಕಾರಣಿಯಾಗಬೇಡಿ! ಕಾರಣ, ನೀವೇ ಯಾವ ಗುರುವನ್ನು ಪಾಲಿಸುತ್ತೀರಿ ಎಂದು ಪ್ರಮಾಣೀಕರಿಸಿದ್ದೀರೋ ಅವರಿಗೆ ನೋವನ್ನುಂಟು ಮಾಡಿದ ಹಾಗಾಗುತ್ತದೆ. ನೀವು ಹೇಳಿಕೆಗಳನ್ನು ಬಿಡುಗಡೆ ಮಾಡಿದರೆ, ಹಿಂದೂ ಸ್ವಾಮೀಜಿ ಮತ್ತು ಮಠ-ಮಾನ್ಯಗಳು ಸಹ ಅವರವರ ಹೇಳಿಕೆಗಳನ್ನು ಬಿಡುಗಡೆ ಮಾಡಬಹುದು. ಜಾತ್ಯತೀತ ಸರ್ಕಾರಕ್ಕಾಗಿ, ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಮರಳಿ ಬರುವಂತೆ ಅವರೆಲ್ಲ ಹೋಮ-ಹವನಗಳನ್ನು ಮಾಡಬಹುದು. ಅವರ್ಯಾರಿಗೂ ವ್ಯಾಟಿಕನ್ ಆಡಳಿತ ಅಥವಾ ಕುರಾನ್ ಮೂಲಕ ಶರಿಯತ್ ಆಡಳಿತ ಬೇಕಾಗಿಲ್ಲ.
ಈ ದೇಶ ಹಿಂದೂ ರಾಷ್ಟ್ರ. ಇದನ್ನು ಅಲ್ಲಗೆಳೆಯುವ ಹಾಗಿಲ್ಲ. ದೇಶದ ವಿಭಜನೆಯಾದ ನಂತರ, ಬಾಬಾ ಸಾಹೇಬ್ ಅಂಬೇಡ್ಕರ್ ರವರು, ಮುಸಲ್ಮಾನರು ಭಾರತ ಬಿಟ್ಟು ಪಾಕಿಸ್ಥಾನಕ್ಕೆ ಹೋಗಬೇಕಂತ ಸ್ಪಷ್ಟವಾಗಿ ತಿಳಿಸಿದ್ದರು. ಈ ವಿಷಯವನ್ನು ದಲಿತರು ಮತ್ತು ಜಾತ್ಯತೀತ ರಾಜಕಾರಣಿಗಳು ಉದ್ದೇಶಪೂರ್ವಕವಾಗಿ ಉಲ್ಲೇಖಿಸುವುದಿಲ್ಲ.
ಅನಾದಿ ಕಾಲದಿಂದಲೂ ಈ ದೇಶದಲ್ಲಿ ಹಿಂದೂಗಳು ದಬ್ಬಾಳಿಕೆಗೆ ಒಳಗಾಗಿದ್ದಾರೆ – ನಿರಂತರ ಕಿರುಕುಳ, ಅಪರಾಧಿಯಂತೆ ಬಿಂಬಿತರಾಗಿ ಮತ್ತು ಬಲವಂತದ ಮತ ಪರಿವರ್ತನೆಗೆ ಈಡಾಗಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ಹಿಂದೂಗಳು ಎಂದಿಗೂ ಯಾವುದೇ ಮತದವರನ್ನು ಹಿಂಸಿಸಿದವರಲ್ಲ – ಬದಲಿಗೆ ಅವರು ಯಹೂದಿ, ಕ್ರೈಸ್ತ, ಅಹ್ಮದಿ ಮುಂತಾದವರನ್ನು ಹಾರ್ದಿಕವಾಗಿ ತಮ್ಮ ಸಮುದಾಯದೊಂದಿಗೆ ಸ್ವಾಗತಿಸಿದ್ದಾರೆ. ಇಂದು ಕೆಲವು ನಗಣ್ಯ ಗುಂಪುಗಳು ಹಿಂಸಾತ್ಮಿಕವಾಗಿ ವರ್ತಿಸಿದರೆ, ಅವರ್ಯಾರು ಸಮಸ್ತ ಹಿಂದೂ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಹಿಂಸೆಯನ್ನು ಹಿಂದೂ ಮತವು ಎಂದೂ ಅಂಗೀಕರಿಸಿಲ್ಲ ಅಥವಾ ಖಡ್ಗದ ಮೂಲಕ ಮತ ಪರಿವರ್ತನೆಯನ್ನು ಸಹ ಮಾಡಿರುವುದಿಲ್ಲ. ಬದಲಿಗೆ ಹಿಂಸೆಗೆ ಅವರೇ ಬಲಿಯಾಗಿದ್ದಾರೆ. ಈ ಇತಿಹಾಸವನ್ನು ಯಾರೇ ಆಗಲಿ ಒಪ್ಪಲೇ ಬೇಕಾಗುತ್ತದೆ.
ಹಾಗಾಗಿ ಇಂತಹ ಸಣ್ಣ ಘಟನೆಗಳು ನಡೆದಾಗ ಅಷ್ಟು ದೊಡ್ಡ ಸದ್ದನ್ನು ಮಾಡುವ ಅವಶ್ಯಕತೆ ಏನಿದೆ? ‘ಹೆಚ್ಚುತ್ತಿರುವ ಆತಂಕ, ಪ್ರಕ್ಷುಬ್ಧ ಕಾಲ’ ವೆಂತೆಲ್ಲ ಏಕೆ ಕೂಗೆಬ್ಬಿಸಬೇಕು? ಹಿಂದೂಗಳು ತಮ್ಮನ್ನು ತಾವು ಸಮರ್ಥಿಸಿಕೊಂಡಾಗ, ನಾವೇಕೆ ಅರಚಬೇಕು? ಜಗತ್ತಿನಾದ್ಯಂತ ಇಂದು ಹಲವು ಇಸ್ಲಾಮಿ ಮತ್ತು ಕ್ರೈಸ್ತ ದೇಶಗಳಿದ್ದಾವೆ – ಯಾರು ಸಹ ಇದರ ಬಗ್ಗೆ ಹುಬ್ಬೇರಿಸುವುದಿಲ್ಲ! ಆದರೆ ಇದು ಹಿಂದೂ ರಾಷ್ಟ್ರವೆಂದಾಗ, ಆಕಾಶ ಯಾಕೆ ಕಳಚಿ ಬೀಳುತ್ತದೆ?
ನಿಮ್ಮ ‘ಅಲ್ಪಸಂಖ್ಯಾತ ಹಕ್ಕುಗಳ’ ವಿಷಯಕ್ಕೆ ಮರಳಿ ಬಂದಾಗ, ನೀವೇನಾದರೂ ಇದನ್ನು ನ್ಯಾಯಯುತವಾಗಿ ಮತ್ತು ಉದ್ದೇಶಪೂರಕವಾಗಿ ಉಪಯೋಗಿಸಿದ್ದರೆ, ನೀವು ಮತ್ತು ನಿಮ್ಮ ಬೆಂಬಲಿತ ರಾಜಕಾರಣಿಗಳು ದಲಿತರನ್ನು, ಶೋಷಿತರನ್ನು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಿದ್ದರೆ, ಇಂದು ಯಾವುದೇ ಬಡತನ ಅಥವಾ ದೌರ್ಜನ್ಯಕೊಳಗಾದ ವರ್ಗವನ್ನು ನಾವು ಕಾಣುತ್ತಿರಲಿಲ್ಲ. ನಾನು ರಾಜಕಾರಣಿಗಳನ್ನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ಈ ನಮ್ಮ ಚರ್ಚ್ ಗಳು ದಮನಿತರ ಹಾಗು ಶೋಷಿತರ ಹಕ್ಕುಗಳನ್ನು ಕ್ರೋಡೀಕರಿಸಿ ಜನರ ದುಡ್ಡನ್ನು ಸಹ ಪಡೆದು ಇವರೆನ್ನೆಲ್ಲ ಯಾಕೆ ಕಡೆಗಣಿಸಿತು?
ಈ ದೇಶದಲ್ಲಿ ಚರ್ಚ್ ಗಳು ದೊಡ್ಡ ಪ್ರಮಾಣದ ಆಸ್ತಿ (ಭೂ-ಸಂಪತ್ತು) ಹೊಂದಿರುವ ವಿಷಯ ತಮಗೂ ಸಹ ತಿಳಿದಿರುವುದೇ ಆಗಿದೆ. ಇದು ಏನನ್ನು ಸೂಚಿಸುತ್ತದೆ? ನೀವು ಸರ್ಕಾರವೇ ಜನರಿಗೆ ‘ಸಾಕಷ್ಟು’ ಸೇವೆ ಮಾಡಬೇಕೆಂದು ಏಕೆ ಹೇಳುತ್ತೀರಿ? ಚರ್ಚ್ ಏತಕ್ಕೆ ತನ್ನೆಲ್ಲ ಸಂಪತ್ತನ್ನು ಜನರ ಏಳಿಗೆಗಾಗಿ ಉಪಯೋಗಿಸಬಾರದು? ನೀವು ಇಂದು ಸಂವಿಧಾನ ನೀಡಿರುವ ಪ್ರಜಾಪ್ರಭುತ್ವಕ್ಕಾಗಿ ನಿಲ್ಲಬೇಕೆ ವಿನಹ ಒಂದು ವಂಶದ ಪರವಾಗಿಯಲ್ಲ!!
ನಿಮಗೆ ನಿಜವಾಗಲೂ ಸಂವಿಧಾನವನ್ನು ಎತ್ತಿ ಹಿಡಿಯುವ ಜಾತ್ಯಾತೀತ ಸರ್ಕಾರ ಬೇಕಿದ್ದರೆ, ಅದು ಖಂಡಿತವಾಗಿಯೂ ಕಾಂಗ್ರೆಸ್ ಆಗಿರುವುದಿಲ್ಲ. ದಯಮಾಡಿ ಒಗಟುಗಳ ಹಿಂದೆ ಅವಿತುಕೊಳ್ಳಬೇಡಿ! ನೀವು ಧಾರ್ಮಿಕ ನಾಯಕರಾಗಿದ್ದರಿಂದ, ನಿಮ್ಮಲ್ಲಿ ನಾವು ನೇರವಂತಿಕೆ ಮತ್ತು ಪ್ರಾಮಾಣಿಕತೆಯನ್ನು ನಿರೀಕ್ಷೆ ಮಾಡುತ್ತೇವೆ. ಯೇಸುವಿನ ಮೌಲ್ಯಗಳಿಗಾಗಿ ನಾವು ನಿಲ್ಲಬೇಕೆ ವಿನಹ ಯಾವುದೋ ಒಂದು ಮತಕ್ಕಾಗಿಯಲ್ಲ!!