ನಿಮಗೆಲ್ಲರಿಗೂ ಓಝೋನ್ ದಿನದ ಶುಭಾಶಯಗಳು!!
ಓಝೋನ್ ಪದರವು ಸೂರ್ಯನಿಂದ ಬರುವ ಅತಿ ಊಷ್ಣಕಾರಕ ಕಿರಣಗಳನ್ನು ತಡೆಯುವುದರ ಮೂಲಕ ತಾಯಿ ವಸುಂಧರೆಯನ್ನು ಬಹುಮಟ್ಟಿಗೆ ರಕ್ಷಿಸುತ್ತಿದೆ. ಇಂದಿನ ಪರಿಸರ ಸಂಕೀರ್ಣ ಪರಿಸ್ಥಿತಿಯಲ್ಲಿ ಜೀವ-ಸಂಕುಲಕ್ಕೆ ಅತ್ಯಗತ್ಯವಾದ ಓಝೋನ್ ಪದರನ್ನು ರಕ್ಷಿಸುವುದು ತುರ್ತು ಅಗತ್ಯವಾಗಿದೆ.
ಮಾರಕ ಹಸಿರುಮನೆಯ ಅನಿಲ ಹೊರಸೂಸುವಿಕೆಯೊಂದಿಗಿನ ಹೆಚ್ಚಿನ ಮಾಲಿನ್ಯವು ಈಗಾಗಲೇ ಭೂಮಿಯ ಸುತ್ತ ಓಝೋನ್ ಪದರವನ್ನು ಹಾನಿ ಮಾಡಿದ್ದೂ, ಜಾಗತಿಕ ತಾಪಮಾನ ಏರಿಕೆಗೆ ಸಹ ಕಾರಣವಾಗಿದೆ. ಇಂದಿನ ಹವಾಮಾನದ ಏರು-ಪೇರು ಕೂಡ ಜಾಗತಿಕ ಹವಾಮಾನದ ಏರಿಳಿತಕ್ಕೆ ಪ್ರಮುಖ ಕಾರಣವಾಗಿದೆ.
ಭೂಗೋಳವು ನಮ್ಮ ಮನೆಯಿದ್ದಂತೆ, ಛಾವಣಿಯಿಲ್ಲದ ಮನೆ ಹೇಗೆ ಅಸುರಕ್ಷಿತವೋ, ಹಾಗೆಯೇ ಓಝೋನ್ ಪದರವಿಲ್ಲದಿದ್ದರೆ ಭೂಮಿಯ ಮೇಲೆ ವಾಸಿಸಲು ಅಸಾಧ್ಯ.
ಇಂದು ನಾವು ಪರಿಸರ ಮೂಲಭೂತ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸುಸ್ಥಿರ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯ ಬೇಕು. ಇತ್ತೀಚಿನ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ದುರಂತ, ಪ್ರಕೃತಿ ನಿಯಮದ ಉಲ್ಲಂಘನೆಯ ಜೀವಂತ ಸಾಕ್ಷಿಯಾಗಿದೆ.
ತಾಯಿ ವಸುಂಧರೆಯ ಅನುಗ್ರಹಕ್ಕೆ ಪಾತ್ರರಾಗಿ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು, ಪರಿಸರ ಸಂರಕ್ಷಣೆಯನ್ನು ಕಾಯಾ, ವಾಚಾ ಹಾಗು ಒಳ್ಳೆಯ ಮನಸ್ಸಿನ್ನಿಂದ ಮಾಡುತ್ತೇವೆ ಎಂದು ನಿರ್ಧರಿಸುವ ಈ ಸುಸಂದರ್ಭ ಸಮಯದಲ್ಲಿ ನಿಮಗೆಲ್ಲರಿಗೂ ಓಝೋನ್ ದಿನದ ಶುಭಾಶಯಗಳು!!
Ozone Day – a day that celebrates the presence of ozone layer, which protects our Mother Vasundhara from the highly penetrative UV spectrum of the sun’s rays. The ultimate protection of the ozone layer is the need of the hour.
High pollution with the lethal green house emission have already damaged the ozone layer around the earth’s sphere and is one of the factor that has led to global warming phenomenon. Climate change is the resultant of these causes.
This is similar to your own home where your roof starts getting damaged and effects the internal eco-system.
It’s time that we ensured we respect the basic elements of the nature and move forward in a sustained development, which is in tune with environmental harmony. The recent Kodagu & Kerala mishap stands a living testimony for our violation of the harmonious nature’s law.
It’s our prime duty to ensure we change our life style and stay blessed with Maa Vasundhare’s protection.