Infinite Thoughts

Thoughts beyond imagination

World Post Day Greetings!!

ಕಳೆದ 7 ದಶಕಗಳಲ್ಲಿ, ನಮ್ಮ ದೇಶ ಕಟ್ಟುವಲ್ಲಿ ಭಾರತೀಯ ಅಂಚೆಯ ಪಾತ್ರ ಮಹತ್ತರವಾದದ್ದು. ಇಂದಿನ ಡಿಜಿಟಲ್ ಯುಗದ ಪೂರ್ವ ಹಾಗೂ ಖಾಸಗಿ ಅಂಚೆಯ ಸೇವೆಯ ಮುನ್ನ, ದೇಶವನ್ನು ಒಟ್ಟೂಗೂಡಿಸಿದ್ದು ಭಾರತೀಯ ಅಂಚೆ. ದೇಶದ ಉದ್ದಗಲಕ್ಕೂ ವಿವಿಧ ಸಮಾಜ-ಸಮುದಾಯ ಎಲ್ಲವೂ ಅಂಚೆ ಸೇವೆಗಳಿಂದ ಫಲಾನುಭವಿಗಳೇ ಆಗಿದ್ದಾರೆ. ಅಂಚೆಯಣ್ಣ ಮನೆ ಬಾಗಿಲು ತಟ್ಟುತ್ತಿದ್ದಂತೆಯೇ ಎಲ್ಲ ಭಾವನೆಗಳು ಅನಾವರಣಗೊಳ್ಳುತ್ತಿದ್ದವು.

ಇಂದಿಗೂ ಭಾರತೀಯ ಅಂಚೆ ದೇಶಕ್ಕೆ ತನ್ನ ಸೇವೆಯನ್ನು ವಿಸ್ತರಿಸುತ್ತಲೇ ಇದೆ. ಅದು ಕಾಲ, ತಾಂತ್ರಿಕತೆ ಮತ್ತು ಹೊಸ ತಲೆಮಾರಿನ ಜನರ ಆಶೋತ್ತರಗಳನ್ನು ಅರ್ಥೈಸಿಕೊಂಡು, ತನ್ನ ಸೇವೆಯನ್ನು ನೀಡುತ್ತ, ತನ್ನ ಅಸ್ಥಿತ್ವಕ್ಕೆ ನೂತನ ಅರ್ಥ ಕಲ್ಪಿಸಿದೆ.

ಇಂದಿಗೂ ನಮ್ಮೆಲ್ಲರಿಗೂ ಸೇವೆ ನೀಡುತ್ತಿರುವ ಭಾರತೀಯ ಅಂಚೆಗೆ ಕೋಟಿ-ಕೋಟಿ ವಂದನೆಗಳು.

ವಿಶ್ವ ಅಂಚೆಯ ಈ ದಿನದಂದು ನಮ್ಮ ಅಂಚೆ ಇಲಾಖೆ ನೀಡುತ್ತಿರುವ ಸೇವೆಗಳಿಗೆ ಕೃತಜ್ಞರಾಗೋಣ. ಅಂಚೆ ಇಲಾಖೆಯು ದೇಶದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಈ ವಿಶ್ವ ಅಂಚೆಯ ದಿನವನ್ನು ಆಚರಿಸೋಣ.

 

Indian Postal carriers have built the Nation over the past seven decades. In the days of pre-digital communications and private services, it was Indian Post Office that connected the Nation, together. Communities & societies benefitted immensely from postal services till the last postman tapping the doors.

They continue to serve the Nation, evolving along with time, technology and a different genre.

Let us be grateful for the yeoman services that our postal carriers offer, till date.

Related posts