Navaratri Greetings !!!
ನವರಾತ್ರಿಯು ದುಷ್ಟ ಶಕ್ತಿಯ ನಿಗ್ರಹಣೆ, ಶಿಷ್ಟ ಶಕ್ತಿಯ ವಿಜೃಂಭಣೆಯ ಸಂಕೇತವಾಗಿದೆ.
ಅಜ್ಞಾನದ ನಿದ್ರೆ ಇಂದ ಮನುಕುಲವನ್ನು ಎಚ್ಚರಗೊಳಿಸಿ, ನಕಾರಾತ್ಮಕ ಧೋರಣೆಗಳನ್ನು ಕಳಚಿ, ಮನಸ್ಸನ್ನು ಪರಿಶುದ್ಧಗೊಳಿಸುವ ಹಾಗೂ ಸಕಾರಾತ್ಮಕ ಗುಣಗಳನ್ನು ವೃದ್ಧಿಸಿಕೊಳ್ಳುವ ಭವ್ಯ ಹಬ್ಬದ ಪರಂಪರೆಯೇ ನವರಾತ್ರಿ!
ನವರಾತ್ರಿಯ ಆಚರಣೆಯು ನಮ್ಮ ಜೀವನದ ಅತ್ಯುನ್ನತ ಗುರಿಯಾದ ಮೋಕ್ಷ ಸಾಧನೆಗೆ ಅಗತ್ಯವಿರುವ ಎಲ್ಲಾ ಆಧ್ಯಾತ್ಮಿಕ ಜ್ಞಾನವನ್ನು ಪೂರೈಸುವಲ್ಲಿ ಸಹಾಯಕವಾಗಿದೆ. ಒಂಬತ್ತು ಸುಧೀರ್ಘ ರಾತ್ರಿಗಳ ಈ ಹಬ್ಬದಲ್ಲಿ ಮಹಾ ಶಕ್ತಿಯನ್ನು ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ಎಂಬ ವಿಭಿನ್ನ ರೂಪಗಳಲ್ಲಿ ಪೂಜಿಸಲಾಗುತ್ತದೆ. ಶಕ್ತಿ, ಸಂಪತ್ತು, ಸಮೃದ್ಧಿ ಮತ್ತು ಜ್ಞಾನದ ಪ್ರತಿರೂಪವಾಗಿದೆ ಈ ಸಂಭ್ರಮ.
ದುರ್ಗಾ ಮಾತೆಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೆಸರು, ಕೀರ್ತಿ, ಆರೋಗ್ಯ, ಸಂಪತ್ತು, ಸಂತೋಷ, ಮಾನವೀಯತೆ, ವಿದ್ಯೆ, ಭಕ್ತಿ ಮತ್ತು ಶಕ್ತಿಗಳ ಒಂಬತ್ತು ಸ್ವರೂಪಗಳೊಂದಿಗೆ ಆಶೀರ್ವದಿಸಲಿ.
ನವರಾತ್ರಿಯ ಶುಭಾಶಯಗಳು!
Navaratri celebrates the triumph of good over evil and exhorts mankind to wake up from the slumber of ignorance, remove all negativities, purify the mind and cultivate positive virtues. This alone can help one gain the necessary spiritual knowledge to transcend all earthly limitations and achieve salvation – the highest goal of human life.
During the nine-night long festival of Navratri the supreme female cosmic power or Goddess Shakti is worshipped in her variously manifested forms as Durga, Laxmi and Saraswati. The festival signifies power, wealth, prosperity and knowledge.
May Maa Durga empower you and your family with her nine Swaroopas of name, fame, health, wealth, happiness, humanity, education, bhakti & shakti.
Happy Navratri & be blessed!