Infinite Thoughts

Thoughts beyond imagination

ರಾಮ ಮಂದಿರದ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ವರ್ತಿಸುತ್ತಿರುವ ರೀತಿ ಹಿಂದುಗಳಿಗೆ ತುಂಬಾ ನೋವುಂಟು ಮಾಡುತ್ತಿದೆ. ಕಳೆದ 5 ಶತಮಾನಗಳಿಂದ ರಾಮ ಮಂದಿರದ ಪುನರ್ನಿರ್ಮಾಣಕ್ಕೆ ಅದೆಷ್ಟೋ ತಲೆಮಾರುಗಳು ತಮ್ಮ ಜೀವವನ್ನೇ ತ್ಯಾಗ ಮಾಡಿದ ಅಸಂಖ್ಯಾತ ಭಕ್ತರಿಗೆ ನ್ಯಾಯಾಲಯದ ಈ ವರ್ತನೆ ನಿಜಕ್ಕೂ ಆನ್ಯಾಯ ಉಂಟು ಮಾಡಿದೆ.

ಇನ್ನೆಷ್ಟು ತಲೆಮಾರುಗಳು ನ್ಯಾಯ ಬೇಡುತ್ತಲೇ ಇರಬೇಕು? ನ್ಯಾಯ ಒದಗಿಸಿಕೊಡುವ ನಮ್ಮ ನ್ಯಾಯಾಲಯವೇ, 5 ಶತಮಾನಗಳ ನಂತರ ಸಹ ರಾಮ ಮಂದಿದರ ವಿಷಯವನ್ನು ಆದ್ಯತೆಯಲ್ಲಿ ಪರಿಗಣಿಸದಿರುವುದು, ಹಿಂದುಗಳ ಹೋರಾಟಕ್ಕೆ ಅವಮಾನ ಮಾಡಿ, ಅವರ ಭಾವನೆಗಳ ಜೊತೆ ಚಕ್ಕಂದವಾಡಿದಂತೆ.

ನ್ಯಾಯಾಲಯ ಸೂಕ್ತ ಸಮಯದೊಳಗೆ ನ್ಯಾಯ ಒದಗಿಸದಿದ್ದರೆ ಸಮಾಜದಲ್ಲಿ ಉಂಟಾಗುವ ಕ್ಷೋಭೆಯನ್ನು ತಣಿಸಲು, ಸರ್ಕಾರಕ್ಕೆ ಅನ್ಯ ಮಾರ್ಗ ಶೋಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ. ನಾವೀಗ ಅಂತಹ ಸಂದಿಗ್ದತೆಯ ಪರಿಸ್ಥಿತಿಯಲ್ಲಿ ಇದ್ದೇವೆ.

 

Related posts