Infinite Thoughts

Thoughts beyond imagination

ಟಿಪ್ಪು_ಜಯಂತಿ

ಟಿಪ್ಪು ಜಯಂತಿ ಸರ್ಕಾರಿ ಕಾರ್ಯಕ್ರಮ; ಆದರೆ ಮುಖ್ಯ ಮಂತ್ರಿ, ಉಪ-ಮುಖ್ಯ ಮಂತ್ರಿ ಕನಿಷ್ಠ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆ ವ್ಯಕ್ತಪಡಿಸಿದ ಸನ್ಮಾನ್ಯ ದೇವೇಗೌಡರಾಗಲಿ, ಕಾರ್ಯಕ್ರಮದಲ್ಲಿ ಹಾಜರಿರದೆ ತಾಂತ್ರಿಕವಾಗಿ ತಪ್ಪಿಸಿಕೊಳ್ಳುವ ಪ್ರಯತ್ನ ಯಶಸ್ವಿಯಾಗಿ ಮಾಡಿದರು.

ಹೆಸರಿಗೇನೋ CoJa ಸರ್ಕಾರವಿರಬಹುದು, ಆದರೆ ಕಣ್ಣೆದರೆ ಟಿಪ್ಪುವನ್ನು ಹೊತ್ತು ಮೆರೆದವರನ್ನು, ತಾಯಿ ಚಾಮುಂಡೇಶ್ವರಿ ಮಣ್ಣು-ಮುಕ್ಕಿಸಿದ್ದನ್ನು ಕಂಡು ಸಿದ್ಧರಾಮಯ್ಯನ ಬೆನ್ನು ಮೇಲಿರುವ ತಿಪ್ಪೆ ಸುಲ್ತಾನನ್ನು, ತಮ್ಮ ಹೆಗಲ ಮೇಲೆ ಹಾಕಿಕೊಳ್ಳಲು ದೇವೇಗೌಡರಿಗೇನು ಸಣ್ಣ ರಾಜಕೀಯ ಪ್ರಾಯವೇ? ಅಥವಾ ಏನಾದರೂ ಆಗಲಿ ಎದುರಿಸುತ್ತೇನೆ ಎನ್ನುವ ಸಿದ್ಧರಾಮಯ್ಯನ ಹುಂಬತನ ಉಂಟೋ!

ಹೇಳಿ-ಕೇಳಿ ಟಿಪ್ಪು ಸುಲ್ತಾನ ಈ ದೇಶ ಕಂಡ ಅತ್ಯಂತ ದೊಡ್ಡ ಕ್ರೂರಿ ಭಯೋತ್ಪಾದಕ. ಅಂತವನನ್ನೇ ವಿಜೃಂಭಿಸಲು ಹೋಗಿ, ಸಂಜಯ್ ಖಾನ್ ನೆಂಬ ಮೂರ್ಖ ಬಾಲಿವುಡ್ ನಟ-ನಿರ್ಮಾಪಕ ಹಾಗು ಅವನ ಖಡ್ಗ ಮತ್ತು ಉಂಗುರ ಹರಾಜಿನಲ್ಲಿ ಕೊಂಡುಕೊಂಡ, ಬ್ಯಾಂಕ್ ಗಳಿಗೆ ಮೋಸಮಾಡಿ ಓಡಿಹೋದ ವಿಜಯ್ ಮಲ್ಯನವರೆಗೂ, ಎಲ್ಲರೂ ಅವನ ಕ್ರೂರತನದ ಶಾಪ ಹಂಚಿಕೊಂಡವರೇ! ಇನ್ನು ಸಿದ್ಧರಾಮಯ್ಯ ಅಂತೂ "ಮುಂದೆಯೂ ನಾನೇ ಮುಖ್ಯ ಮಂತ್ರಿ..... ನಮ್ಮದೇ ಸರ್ಕಾರ......" ಎಂದು ಬಡಾಯಿ ಕೊಚ್ಚಿಕೊಂಡು, ಕೊನೆಗೆ ಯಾರು ಮುಖ್ಯ ಮಂತ್ರಿಯಾಗಬಾರದೆಂದು ಕೊಂಡಿದ್ದರೋ ಅವರನ್ನೇ ಪಕ್ಕದಲ್ಲಿ ಕೂರಿಸಿಕೊಂಡು ಸಮರ್ಥನೆ ಮಾಡಬೇಕಾದ ಧೈನೇಸಿ ಪರಿಸ್ಥಿತಿಯಲ್ಲಿ ಬಿದ್ದದು ಮಾತ್ರ, ನಮ್ಮ ಕಣ್ಮುಂದೆ ಇನ್ನು ಹಸಿಯಾಗಿದೆ!

ಮತ್ತೊಮ್ಮೆ ಮುಸ್ಲಿಮನಾಗಿ ಹುಟ್ಟುವ ದೇವೇಗೌಡರೂ ಟಿಪ್ಪು ಜಯಂತಿ ದಿನದಂದೇ ತಮ್ಮ ಕುಮಾರನನ್ನು ವಿಶ್ರಾಂತಿಗೆಂದು ಯಾವುದೋ resortಗೆ ಕಳುಹಿಸಿ, ತಾವು ದುಬೈಗೆ ಈ ಇಳಿ ವಯಸ್ಸಿನಲ್ಲಿ shopping ಗೆ ಹೋಗಿದ್ದಾರೇನೋ! ಚುನಾವಣೆಗೆ ಇನ್ನು ಕೇವಲ ೬ ತಿಂಗಳಿದೆ, ಅಷ್ಟರಲ್ಲೇ ಪಾಪ ಮುಸಲ್ಮಾನರನ್ನು ಹೀಗೆ ಅನಾಥವಾಗಿ ಬಿಟ್ಟು ಹೋಗಬಹುದೋ?

ಇಲ್ಲ ಸ್ವಾಮೀ, ದೇವೇಗೌಡರ ಮರ್ಮವಿಷ್ಟೇ..... ತಾಂತ್ರಿಕವಾಗಿ, ಟಿಪ್ಪುವಿನ ದಾಳಿಗೊಳಗಾದ ಆ ಎಲ್ಲ ಪೂರ್ವಜರ ಶಾಪ ತಮ್ಮ ಕುಟುಂಬದ ಮೇಲೆ ಬೀಳದಿರಲಿ ಎಂದು ಅಧಿಕೃತ ಕಾರ್ಯಕ್ರಮದಿಂದ ಪಲಾಯನಗೈದಿರುವುದು. ಇನ್ನು ಟಿಪ್ಪು ಜಯಂತಿ ಆಚರಿಸದಿದ್ದರೆ ಮುಸ್ಲಿಂ ವೋಟ್ ಗಳನ್ನೂ ತಮ್ಮ ಮಾಜಿ ಶಿಷ್ಯ ಪೂರ್ಣವಾಗಿ ಕಬಳಿಸಿದರೆ ಕಷ್ಟವೆಂದು, ಆಚರಣೆಗೆ ಹಸಿರು ಭಾವುಟ ತೋರಿದ್ದು.

ಶಾಪದ ತಾಪ ತಟ್ಟುವುದಿದ್ದದರೇ ಅದು ತಮ್ಮ ಮಾಜಿ ಶಿಷ್ಯನಿಗೆ ತಟ್ಟಲಿ... ಅಥವಾ ಕೋಡಂಗಿ ರಾಜನಿಗೆ ತಟ್ಟಲಿ... ನಮ್ಮ ಕುಮಾರ ನೆಮ್ಮದಿಯಾಗಿ ರಾಜ್ಯವಾಳಲಿ.... ಮತ್ತು ಹೇಗಿದ್ದರೂ ಪಕ್ಕದ ನೆರೆಯ ನಾಯ್ಡು ಬಂದು ದೇಶದ ಪ್ರಧಾನಿ ಎಂಬ ಹೊಸ ಚಿತ್ರ ತೋರಿಸಿ ಹೋಗಿದ್ದಾರೆ. ಒಳ್ಳೆಯ ಕನಸ್ಸು ಬೀಳುವುದೆಂದರೆ ಹೀಗೆ!

ಇದು ಸ್ವಾಮಿ ದೇವೇಗೌಡರ ರಾಜಕೀಯ ತಂತ್ರಗಾರಿಕೆ!

ಇನ್ನು ಮತ ಹಾಕುವ ಹಿಂದೂಗಳಿಗೆ ಚುನಾವಣೆ ಸಮಯದಲ್ಲಿ ಟಿಪ್ಪು ಮರೆತೇ ಹೋಗಿರುತ್ತಾನೆ ಎಂದು ಒಬ್ಬ ಕಾಂಗ್ರೆಸ್ ಪುಡಿ ನಾಯಕ ಈ ಹಿಂದೆ ಹೇಳಿಕೆ ನೀಡಿದ್ದ. ಹಾಗೆ ಮುಸಲ್ಮಾನರಿಗೆ ತಮ್ಮ ಎಂದಿನ ಪರದೆಯ ಆಚೆ ಇನ್ನು ಒಳ್ಳೆಯ ಬದುಕಿದೆ ಎಂಬ ತಿಳುವಳಿಕೆ ನೀಡುವ ಒಬ್ಬನೇ ಯೋಗ್ಯ ನಾಯಕನಿಲ್ಲದಿರುವುದು ಅಷ್ಟೇ ಸತ್ಯ!

Related posts