Infinite Thoughts

Thoughts beyond imagination

ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ಖಾತೆ ಸಚಿವರಾದ ಶ್ರೀ ಅನಂತ ಕುಮಾರರವರ ಅಕಾಲಿಕ ಸಾವು, ನಮ್ಮೆಲ್ಲರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. 

ಬಿಜೆಪಿ ಕರ್ನಾಟಕ ಕಟ್ಟಿ ಬೆಳೆಸಿದ ಮುಂಚೂಣಿ ನಾಯಕರಲ್ಲಿ ಅವರ ಪಾತ್ರ ಗಣನೀಯವಾಗಿದೆ. ಬೆಂಗಳೂರು ನಗರದಲ್ಲಿ ಬಿಜೆಪಿ ಗೆ ಭದ್ರ ಬುನಾದಿ ಹಾಕಿದವರಲ್ಲಿ ಅನಂತ ಕುಮಾರ ಪ್ರಮುಖರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದ ಎರಡು ಅವಧಿಯಲ್ಲೂ ಸಚಿವರಾಗಿ ಹಲವು ಖಾತೆಗಳನ್ನು ನಿಭಾಯಿಸಿದ ಕೀರ್ತಿ ಅವರದ್ದು. 

ಯಶಸ್ವಿ ನಾಯಕರೆನಿಸಿಕೊಂಡ ಒಬ್ಬ ಚಾಣಾಕ್ಷ ರಾಜಕಾರಣಿಯನ್ನು ಇಂದು ನಾವು ಕಳೆದು ಕೊಂಡೆವು. 

ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ! 

ಈ ಸಂದರ್ಭದಲ್ಲಿ, ಅವರ ಕುಟುಂಬ, ಬಂಧು-ಬಳಗ, ಮತ್ತು ಅವರ ಸ್ನೇಹ ಜೀವಿಗಳಿಗೆ ಆ ಭಗವಂತನು ಹೆಚ್ಚಿನ ಆತ್ಮ ಸ್ಟೈರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿ!

Related posts