Infinite Thoughts

Thoughts beyond imagination

WorldDiabetesDay

ಭಾರತೀಯ ಆಹಾರ ಪದ್ದತಿ ಮತ್ತು ಆಯುರ್ವೇದ ಔಷಧ ವಿಧಿಯಿಂದ, ನಮ್ಮ ರಾಷ್ಟ್ರವು ಶತಮಾನಗಳ ಕಾಲ ಈಡೀ ವಿಶ್ವಕ್ಕೇ ಮಾದರಿಯಾಗಿತ್ತು.

ಅರಬ್ ಮತ್ತು ಪಾಶ್ಚಿಮಾತ್ಯ ವಸಾಹುತಶಾಹಿಗಳ ಆಕ್ರಮಣದಿಂದ, ಕೇವಲ ಭಾರತೀಯರ ಬದುಕುವ ರೀತಿಯನ್ನಷ್ಟೆಯಲ್ಲದೆ, ನಮ್ಮ ಆಹಾರ ಮತ್ತು ಔಷಧ ಪದ್ದತಿಯಲ್ಲೂ ಧೀರ್ಘ ಕಾಲಿನ ಕೆಟ್ಟು ಪರಿಣಾಮ ಬೀರಿದೆ. ಸ್ವಾತಂತ್ರ್ಯದ ನಂತರ, ಬಡತನ, ಅಪೌಷ್ಟಿಕತೆ ಮತ್ತು ಕೃಷಿ ಉತ್ಪಾದನೆಯಂತ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರಕಾರವು ತೆಗೆದುಕೊಂಡ ಕೆಲವು ಮಾರ್ಗಗಳು ಸಹ ತಪ್ಪಾಗಿದ್ದವು. ಇದು ನಮ್ಮ ಆರೋಗ್ಯ ಸೂಚ್ಯಂಕವನ್ನು ಇನ್ನಷ್ಟು ಹಾಳು ಮಾಡಿತು.

ಪಾಶ್ಚಾತ್ಯ ಆಹಾರ ಪದ್ದತಿ ಮತ್ತು ಅತಿಯಾದ ಮಾಂಸಾಹಾರ ಸೇವನೆ ನಮ್ಮ ಆರೋಗ್ಯವನ್ನು ಕೆಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬದಲಾಗುತ್ತಿರುವ ಇಂದಿನ ಜೀವನ ಶೈಲಿ, ವಿವಿಧ ಶಕ್ತಿ ಚಾಲಿತ ಯಂತ್ರಗಳ ಅತಿಯಾದ ಬಳಕೆಯಿಂದ, ಕೆಡಿಮೆಯಾದ ಶ್ರಮ ಹಾಗೂ ದೈಹಿಕ ಚಟುವಟಿಕೆಗಳು ಮನುಷ್ಯನನ್ನು ಅನೇಕ ರೋಗಗಳ ಸಂಕೀರ್ಣಕ್ಕೆ ತಳ್ಳಿದೆ. 

ಹೀಗಾಗಿ ಮಧುಮೇಹ ನಮ್ಮ ದೇಶದಲ್ಲಿ ಬಹುಸಂಖ್ಯಾತರನ್ನು ಅಪ್ಪಿ, ಭಾರತವನ್ನು ಪ್ರಪಂಚದ ಡಯಾಬಿಟಿಸ್ ರಾಜಧಾನಿಯನ್ನಾಗಿ ಮಾಡಿಕೊಂಡಿದೆ. ಇಂದು ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಸುಮಾರು 50 ದಶಲಕ್ಷ ಜನರು ಭಾರತದಲ್ಲಿದ್ದಾರೆ.

ವಿಶ್ವ ಮಧುಮೇಹ ದಿನದಂದು, ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸುವ ಜೊತೆಗೆ, ಮಧುಮೇಹ ಚಿಕಿತ್ಸೆ ಮತ್ತು ಅದರ ಕಾಳಜಿಯ ಬಗ್ಗೆ ನಮ್ಮ ಜನರಿಗೆ ತಿಳಿಸಿಕೊಡೋಣ.

ನಮ್ಮ ಆರೋಗ್ಯಕ್ಕಾಗಿ ಹೋರಾಡೋಣ. ಎಂದಿಗೂ ತಡೆಗಟ್ಟುವಿಕೆ, ಚಿಕಿತ್ಸೆಗಿಂತಲೂ ಉತ್ತಮ!!



Our Nation, rich in its food tradition and well-complimented with natural and Ayurveda system of medicine had been the capital of wellness across the globe, for centuries.

The attack of Arabian and western imperialists not only had a telling effect on various streams of our life system, additionally it also impacted our food habits and altered the health system, negatively. Further post independence, our government in its quest to address the key issues of poverty, hunger, malnourishment and agro output, took some of the unhealthy routes, which also compounded our health index, bitterly.

The import of western food habits and over emphasis of non-vegetarian food have been chief contributing factors in promoting ill-health among the mass. The changing life style among, today's generations which is witnessing lesser physical activities in their routine life, with excessive dependence on various power-driven appliances have also pushed man into the vivacious trap of various diseases.

Thus diabetes has flourished extensively in our country and pushing us to the status of being the diabetes capital of the world with as many as 50 million people suffering from type-2 diabetes.

On this World Diabetes Day, let us create awareness about the prevailing conditions and educate our people about treatment and care for this disease named - diabetes. 

Let’s take a positive and combative stand for the cause of our health. After all the saying concludes that prevention is better than cure.

Related posts