ಮತ್ತೆ ಬಂತು ಡಿಸೆಂಬರ್ ಆರು --- ಬಾಬರನ ಕಳಂಕ ಕಳಚಿ ವರ್ಷ ಇಪ್ಪತ್ತಾರು...
ಮತ್ತೆ ಬಂತು ಡಿಸೆಂಬರ್ ಆರು --- ಬಾಬರನ ಕಳಂಕ ಕಳಚಿ ವರ್ಷ ಇಪ್ಪತ್ತಾರು...
ಗರ್ವದಿಂದ ಘರ್ಜಿಸುವ... ಇವತ್ತು ಶೌರ್ಯ ದಿವಸ ...!
೧೯೯೨ ರ ಡಿಸೆಂಬರ್ ಆರನೆಯ ತಾರೀಕು ಆ ಮಸೀದಿಎಂಬ ಮೂರೂ ಗುಂಬಜ್ ಗಳು ಒಂದೊಂದಾಗಿ ಕಳಚಿ ಪುಡಿಪುಡಿಯಾಗಿ ಧರೆಗುರುಳುತ್ತಿದ್ದರೆ ಜಗತ್ತಿನ ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿಯೂ ಜನ್ಮಾಂತರದಿಂದ ಅಂಟಿಕೊಂಡಿದ್ದ ಕೊಳೆಯೊಂದನ್ನು ತೊಳೆದುಕೊಂಡಂತಹ ಭಾವ... ಒಂದು ರೀತಿಯ ನಿರುಮ್ಮಳತೆಯನ್ನು ಅನುಭವಿಸಿದ ಹೊತ್ತು... ಜೊತೆಗೆಯೇ ಶತಮಾನಗಳ ಕಾಲ ಅನುಭವಿಸಿದ ಅವಮಾನಕ್ಕೆ ಪ್ರತೀಕಾರ ತೀರಿಸಿ ಗೆದ್ದು ಬೀಗಿದ ಹಮ್ಮು. ಇವತ್ತಿಗೆ ಇಪ್ಪತ್ತಾರು ವರ್ಷಗಳು ಸಂದುಹೋದ ಬಳಿಕವೂ ಅವತ್ತಿನ ಆ ಭಾವೋತ್ಕರ್ಷದ ಕ್ಷಣಗಳಷ್ಟೂ ಮನಸ್ಸಿನ ಮಡಿಕೆಗಳ ಒಳಗಿಂದ ಹೊರಳಿ ಹೊರಬಂದು ಅರಳಿ ನಿಲ್ಲುತ್ತದೆ....
....ಆದರೆ ಈ ವಿಜಯದ ಹಮ್ಮು, ಕೊಳೆ ಕಳೆದುಕೊಂಡ ಭಾವ , ಪ್ರತೀಕಾರ ತೀರಿಸಿದೆವೆಂಬ ಖುಷಿ ಇವೆಲ್ಲವೂ ಪರಿಪೂರ್ಣವಲ್ಲ, ಎಂಬುದೂ ಮನದಾಳದಲ್ಲೆಲ್ಲೋ ಮಡುಗಟ್ಟಿದೆ. ಗೆಲುವು ಕೂಡಾ ಪೂರ್ಣವಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಈ ಅಪೂರ್ಣ ಕಾರ್ಯವನ್ನು ಸಂಪೂರ್ಣಗೊಳಿಸಲು ಕಾಲ ಈಗ ಪರಿಪಕ್ವವಾಗಿದೆ. ಮೂಲ ಮಂದಿರದ ನಿರ್ಮಾಣಕ್ಕಾಗಿ ಸುಮಾರು ಮೂರು ಲಕ್ಷ ಗ್ರಾಮಗಳಲ್ಲಿ ಅಂದಾಜು ಆರು ಕೋಟಿಗೂ ಹೆಚ್ಚು ರಾಮಭಕ್ತರ... ಕರಸೇವಕರ ಪಾಲ್ಗೊಳ್ಳುವಿಕೆಯ ಅಭೂತಪೂರ್ವ ಚಳುವಳಿ, ಆ ಮೂಲಕ ಪ್ರತೀ ಹಿಂದೂ ಮನೆಯಲ್ಲೂ ಭಕ್ತಿಯಿಂದ ಪೂಜಿಸಲ್ಪಟ್ಟ, ಮಂದಿರ ಕಟ್ಟಲೆಂದೇ ಸಂಗ್ರಹಗೊಂಡ ಲಕ್ಷಾಂತರ ಇಟ್ಟಿಗೆಗಳು... ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಹೀಗೆ ವಿದೇಶಗಳಲ್ಲಿ ನೆಲೆಸಿರುವ ಹಿಂದೂ ಸಮುದಾಯ ಕೂಡಾ ರಾಮನ ಭವ್ಯ ಮಂದಿರಕ್ಕಾಗಿ ಇಟ್ಟಿಗೆಗಳನ್ನು ಪೂಜಿಸಿ ಕಳುಹಿಸಿಕೊಟ್ಟಿತ್ತು... ಆದರೆ ಇಪ್ಪತ್ತಾರು ವರ್ಷಗಳ ಬಳಿಕವೂ ರಾಮ ಹುಟ್ಟಿದ ಸ್ಥಳದಲ್ಲಿ ಅವನಿಗೊಂದು ಮನೆ ನಿರ್ಮಾಣ ಆಗಲಿಲ್ಲ. ರಾಮಭಕ್ತರ ಆಶಯ ಈಡೇರಲಿಲ್ಲ.. ಪೂಜಿಸಿದ ಇಟ್ಟಿಗೆಗಳು ರಾಮನ ಮಂದಿರದೊಳಗೆ ಇನ್ನೂ ಜಾಗ ಪಡೆಯಲಿಲ್ಲ....
..ಹಿಂದೂಗಳು ಪರಮ ಸಹಿಷ್ಣುಗಳು... ದೇಶದ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ, ನ್ಯಾಯ ವ್ಯವಸ್ಥೆಯ ಮೇಲೆ ಗೌರವ ಇಟ್ಟವರು. ಹಾಗಾಗಿ ನ್ಯಾಯಕ್ಕಾಗಿ ತಾಳ್ಮೆಯಿಂದ ಇಷ್ಟು ವರ್ಷಗಳ ಕಾಲ ಕಾದರು. ಅವರ ಅಗಾಧ ತಾಳ್ಮೆಗೆ ಫಲ ಸಿಗದಿರದು... ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ, ಜನರಿಂದ ಆಯ್ಕೆಯಾದ ಸರಕಾರಗಳ ಮೇಲೆ ಅವರಿಟ್ಟ ಅಚಲವಾದ ನಂಬಿಕೆ ಖಂಡಿತಾ ಸುಳ್ಳಾಗದು. ಜನರ ಆಗ್ರಹಕ್ಕೆ ಖಂಡಿತಾ ಗೆಲುವು ಸಿಗುತ್ತದೆ. ಈ ಬಾರಿ ದೊರಕುವ ಗೆಲುವು ಅದು ಪರಿಪೂರ್ಣ ಗೆಲುವಾಗಲಿದೆ... ಈ ದೇಶದಲ್ಲಿ ಪ್ರಭು ಶ್ರೀರಾಮಚಂದ್ರನ ದಿವ್ಯಮೂರ್ತಿ... ಭವ್ಯ ಮಂದಿರ ಮತ್ತೊಮ್ಮೆ ಆಗಸದೆತ್ತರಕ್ಕೆ ತಲೆಯೆತ್ತಿ ನಿಲ್ಲಲಿದೆ....
ಜೈ ಶ್ರೀ ರಾಮ್